IND VS NZ: 7 ಸಿಕ್ಸರ್, 11 ಬೌಂಡರಿ.. 51 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯ; ಬಾಬರ್ ದಾಖಲೆ ಉಡೀಸ್..!

| Updated By: ಪೃಥ್ವಿಶಂಕರ

Updated on: Nov 20, 2022 | 3:07 PM

Suryakumar Yadav: ಒಂದು ವರ್ಷದಲ್ಲಿ 10 ಕ್ಕೂ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಮ್ ದಾಖಲೆಯನ್ನು ಮುರಿದಿದ್ದಾರೆ.

1 / 5
ಬೇ ಓವಲ್‌ನ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಭಾರತ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಈ ಆಟಗಾರ 7 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ 51 ಎಸೆತಗಳಲ್ಲಿ 111 ರನ್ ಬಾರಿಸಿದರು.

2 / 5
ಈ ಶತಕದ ಮೂಲಕ ಸೂರ್ಯಕುಮಾರ್ ಯಾದವ್ ತಮ್ಮ ವೃತ್ತಿಜೀವನದ ಎರಡನೇ ಟಿ20 ಶತಕ ದಾಖಲಿಸಿದರು. ಸೂರ್ಯಕುಮಾರ್ ಅವರು ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ತಮ್ಮ ಮೊದಲ ಟಿ20 ಶತಕ ಭಾರಿಸಿದ್ದರು.

3 / 5
ಸೂರ್ಯಕುಮಾರ್ ಯಾದವ್ ಒಂದು ವರ್ಷದಲ್ಲಿ ಎರಡು ಟಿ20 ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್. ಇದಕ್ಕೂ ಮುನ್ನ 2018ರಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು. ಅಲ್ಲದೆ ಟಿ20ಯಲ್ಲಿ 100 ಬೌಂಡರಿಗಳನ್ನು ಪೂರೈಸಿದ ದಾಖಲೆಯನ್ನು ಸಹ ಸೂರ್ಯಕುಮಾರ್ ಯಾದವ್ ಬರೆದರು.

4 / 5
ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಫಾರ್ಮ್ ಮುಂದುವರೆದಿದೆ. ಈ ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ಎರಡನೇ ಟಿ20ಯಲ್ಲಿ ಕೇವಲ 49 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು.

5 / 5
ಸೂರ್ಯಕುಮಾರ್ ಯಾದವ್ ಈ ವರ್ಷ 11ನೇ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಯಾವುದೇ ಭಾರತೀಯ ಆಟಗಾರನ ಅತ್ಯುತ್ತಮ ಪ್ರದರ್ಶನವಾಗಿದೆ. ಅದೇ ಸಮಯದಲ್ಲಿ, ಒಂದು ವರ್ಷದಲ್ಲಿ 10 ಕ್ಕೂ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಮ್ ದಾಖಲೆಯನ್ನು ಮುರಿದಿದ್ದಾರೆ.

Published On - 2:23 pm, Sun, 20 November 22