ಹ್ಯಾಟ್ರಿಕ್ ವಿಕೆಟ್ ಜಸ್ಟ್ ಮಿಸ್; 4 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದ ದೀಪಕ್ ಹೂಡಾ..!

| Updated By: ಪೃಥ್ವಿಶಂಕರ

Updated on: Nov 20, 2022 | 5:58 PM

Deepak Hooda: ದೀಪಕ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಇವರಿಗಿಂತ ಹಿಂದೆ ಯಾವೊಬ್ಬ ಭಾರತೀಯ ಬೌಲರ್ ಈ ಕೆಲಸ ಮಾಡಿರಲಿಲ್ಲ.

1 / 5
ಮೌಂಟ್ ಮೌಂಗನುಯಿಯಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಏಕಪಕ್ಷೀಯ ಪಂದ್ಯದಲ್ಲಿ 65 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಅಲ್​ರೌಂಡರ್ ಪ್ರದರ್ಶನ ನೀಡಿತು. ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿದರೆ, ಬೌಲಿಂಗ್​ನಲ್ಲಿ ದೀಪಕ್ ಹೂಡಾ ತಮ್ಮ ಕೈಚೆಳಕ ತೋರಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ.

2 / 5
ಈ ಪಂದ್ಯದಲ್ಲಿ ದೀಪಕ್ ಯಾವುದೇ ರನ್ ಗಳಿಸದೆ ಔಟಾದರ. ಆದರೆ ಅದ್ಭುತ ಬೌಲಿಂಗ್ ಮಾಡಿದ ದೀಪಕ್ ಕೇವಲ 2.5 ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಪಡೆದರು.

3 / 5
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದು ಯಾವುದೇ ಬೌಲರ್‌ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಪಂದ್ಯದಲ್ಲಿ ದೀಪಕ್ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರು. 19ನೇ ಓವರ್​ನ ಎರಡನೇ ಹಾಗೂ ಮೂರನೇ ಎಸೆತದಲ್ಲಿ ಸತತ ವಿಕೆಟ್ ಕಬಳಿಸಿದರೂ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

4 / 5
ಅದೇ ಸಮಯದಲ್ಲಿ, ದೀಪಕ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಇವರಿಗಿಂತ ಹಿಂದೆ ಯಾವೊಬ್ಬ ಭಾರತೀಯ ಬೌಲರ್ ಈ ಕೆಲಸ ಮಾಡಿರಲಿಲ್ಲ.

5 / 5
ದೀಪಕ್ ಭಾರತ ಪರ ಇದುವರೆಗೆ 14 ಟಿ20 ಪಂದ್ಯಗಳನ್ನು ಆಡಿದ್ದು, 293 ರನ್ ಗಳಿಸಿ ಐದು ವಿಕೆಟ್ ಕಬಳಿಸಿದ್ದಾರೆ.

Published On - 5:58 pm, Sun, 20 November 22