IND vs PAK: ಪಾಕ್ ವಿರುದ್ಧ ಖಾತೆ ತೆರೆದರೆ ಸಾಕು ವಿಶೇಷ ಶತಕ ಪೂರೈಸಲಿದ್ದಾರೆ ಸೂರ್ಯ

Updated on: Sep 27, 2025 | 5:22 PM

Suryakumar Yadav: ಏಷ್ಯಾಕಪ್ 2025ರಲ್ಲಿ ಕಳಪೆ ಪ್ರದರ್ಶನ ತೋರಿರುವ ಸೂರ್ಯಕುಮಾರ್ ಯಾದವ್‌ಗೆ ಪಾಕಿಸ್ತಾನ ವಿರುದ್ಧದ ಫೈನಲ್ ನಿರ್ಣಾಯಕ. ಕೇವಲ 99 ರನ್ ಗಳಿಸಿರುವ ಸೂರ್ಯ, ಇಲ್ಲಿ ಒಂದು ರನ್ ಗಳಿಸಿ ಈ ವರ್ಷದ 100 ರನ್ ಪೂರೈಸುವ ಅವಕಾಶವಿದೆ. ಬೃಹತ್ ಇನ್ನಿಂಗ್ಸ್ ಆಡಿದರೆ ಟೀಕೆಗಳಿಗೆ ಉತ್ತರಿಸಿ, ಹಾಲಿ ಚಾಂಪಿಯನ್ ಭಾರತಕ್ಕೆ ಕಪ್ ಉಳಿಸಿಕೊಳ್ಳಲು ನೆರವಾಗಬಹುದು. ಇದು ಸೂರ್ಯನಿಗೆ ಎರಡು ಸವಾಲುಗಳನ್ನು ಗೆಲ್ಲುವ ಸುವರ್ಣಾವಕಾಶ.

1 / 5
2025 ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿರಬಹುದು. ಆದರೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ ಮಾತ್ರ ತೀರ ಕಳಪೆಯಾಗಿದೆ. ಏಷ್ಯಾಕಪ್‌ನಲ್ಲಿ ಮಾತ್ರವಲ್ಲದೆ ಈ ವರ್ಷವಿಡೀ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸೂರ್ಯ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇದಕ್ಕಾಗಿಯೇ ಅವರನ್ನು ಟೀಕಿಸಲಾಗಿದೆ.

2 / 5
ಆದರೆ ಇದೀಗ ಎಲ್ಲಾ ಟೀಕೆಗಳಿಗೂ ಉತ್ತರಿಸುವ ಅವಕಾಶ ಸೂರ್ಯಕುಮಾರ್ ಯಾದವ್‌ಗೆ ಒದಗಿ ಬಂದಿದೆ. ಏಷ್ಯಾಕಪ್ ಫೈನಲ್​ನಲ್ಲಿ ಭಾರತ ತಂಡ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸೂರ್ಯ ಒಂದು ಬಿಗ್ ಇನ್ನಿಂಗ್ಸ್ ಆಡಿದರೆ ತಂಡಕ್ಕೆ ಗೆಲುವು ಖಚಿತ ಇದರೊಂದಿಗೆ ಅವರು ಟೀಕಕಾರರಿಗೂ ಉತ್ತರ ನೀಡಬಹುದು. ಇದು ಮಾತ್ರವಲ್ಲದೆ ವಿಶೇಷ ಶತಕವನ್ನು ಪೂರೈಸಬಹುದು.

3 / 5
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಖಾತೆ ತೆರೆದ ತಕ್ಷಣ ವಿಶೇಷ ಶತಕ ಪೂರೈಸಲಿದ್ದಾರೆ . ಅಂದರೆ ಸೂರ್ಯಕುಮಾರ್ ಯಾದವ್ ಈ ವರ್ಷ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 12.37 ರ ಸರಾಸರಿಯಲ್ಲಿ ಕೇವಲ 99 ರನ್ ಗಳಿಸಿದ್ದಾರೆ. ಈಗ ಅವರು ಪಾಕಿಸ್ತಾನ ವಿರುದ್ಧ 1 ರನ್ ಬಾರಿಸಿದರೆ, ಈ ವರ್ಷ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸುತ್ತಾರೆ.

4 / 5
ಈ ವರ್ಷ ಒಂದು ರನ್ ಗಳಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 100 ರನ್ ಪೂರೈಸಬಹುದು. ಆದಾಗ್ಯೂ, ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ. ಇಡೀ ದೇಶ ಸೂರ್ಯ, ದೊಡ್ಡ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದನ್ನು ನೋಡಲು ಬಯಸುತ್ತದೆ. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅವರು ಹಾಗೆ ಮಾಡಿದರೆ ಎಲ್ಲಾ ಟೀಕೆಗಳಿಗೆ ಉತ್ತರಿಸಿದಂತ್ತಾಗುತ್ತದೆ.

5 / 5
ಅದು ಮಾತ್ರವಲ್ಲದೆ ಟೀಂ ಇಂಡಿಯಾ ಪ್ರಸ್ತುತ ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಆಗಿದೆ. 2023 ರಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಷ್ಯಾಕಪ್ ಗೆದ್ದಿತು. ಒಂದು ವೇಳೆ ಪಾಕಿಸ್ತಾನ ಆ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಸೂರ್ಯಕುಮಾರ್ ಯಾದವ್ ಮತ್ತಷ್ಟು ಮುಜುಗರವನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಉಳಿಸಿಕೊಂಡರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತ್ತಾಗುತ್ತದೆ.