ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಗಮನಿಸಿದರೆ ಪಾಕ್ ಒಟ್ಟು 3 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಹಾಗೂ ಮತ್ತೊಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 3 ಅಂಕದೊಂದಿಗೆ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಭಾರತ 1 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಒಂದು ಪಂದ್ಯದಲ್ಲಿ ಸೋತಿರುವ ನೇಪಾಳ ಯಾವುದೇ ಅಂಕ ಪಡೆಯದೆ ಕೊನೆಯ ಸ್ಥಾನದಲ್ಲಿದೆ.