T20 World Cup: ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಪಾಕ್ ಎದುರು ಭಾರತದ್ದೇ ಮೇಲುಗೈ..!

| Updated By: ಪೃಥ್ವಿಶಂಕರ

Updated on: Oct 19, 2021 | 4:19 PM

T20 World Cup: ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ 5 ಬಾರಿ ಭಾರತದ ಎದುರಾಗಿದೆ. ಆದರೆ ಪ್ರತಿ ಬಾರಿಯೂ ಭಾರತದ ಎದುರು ಸೋತಿದೆ. 2007 ರ ಟಿ 20 ವಿಶ್ವಕಪ್ ನಂತರವೂ ಈ ಪ್ರವೃತ್ತಿ ಅಬಾಧಿತವಾಗಿ ಮುಂದುವರಿದಿದೆ.

1 / 5
ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ 5 ಬಾರಿ ಭಾರತದ ಎದುರಾಗಿದೆ. ಆದರೆ ಪ್ರತಿ ಬಾರಿಯೂ ಭಾರತದ ಎದುರು ಸೋತಿದೆ. 2007 ರ ಟಿ 20 ವಿಶ್ವಕಪ್ ನಂತರವೂ ಈ ಪ್ರವೃತ್ತಿ ಅಬಾಧಿತವಾಗಿ ಮುಂದುವರಿದಿದೆ. ಪಾಕಿಸ್ತಾನದ ಮೇಲೆ 5-0 ಅಂತರದಲ್ಲಿ ಭಾರತ ಗೆದ್ದು ಬೀಗಿದೆ. ಈ ಬಾರಿ ಟೀಮ್ ಇಂಡಿಯಾ ಗೆಲುವಿನ ಸಿಕ್ಸರ್ ಹೊಡೆಯಲು ನೋಡುತ್ತಿದೆ.

2 / 5
2007 ಟಿ 20 ವಿಶ್ವಕಪ್, ಗ್ರೂಪ್ ಮ್ಯಾಚ್, ಭಾರತ ವರ್ಸಸ್ ಪಾಕಿಸ್ತಾನ: ಡರ್ಬನ್‌ನಲ್ಲಿ ಆಡಿದ ಹೈವೋಲ್ಟೇಜ್ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಭಾರತ ನೀಡಿದ 141 ರನ್​ಗಳ ಗುರಿಯನ್ನು ದಾಟಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ನಂತರ ಅದನ್ನು ಬಾಲ್ ಔಟ್ ಮೂಲಕ ನಿರ್ಧರಿಸಲಾಯಿತು, ಇದರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು.

3 / 5
2012 ಟಿ 20 ವಿಶ್ವಕಪ್, ಸೂಪರ್ 8, ಭಾರತ vs ಪಾಕಿಸ್ತಾನ: ಈ ಬಾರಿ ಸಾಂಪ್ರದಾಯಿಕ ಎದುರಾಳಿಗಳೆರಡೂ ಸೂಪರ್ 8 ರಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಭಾರತ ಪಾಕಿಸ್ತಾನವನ್ನು 8 ವಿಕೆಟ್ಗಳಿಂದ ಸೋಲಿಸಿತು. ಶ್ರೀಲಂಕಾದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನವನ್ನು 128 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 78 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ಭಾರತಕ್ಕೆ ಜಯ ನೀಡಿದರು.

4 / 5
2014 ಟಿ 20 ವಿಶ್ವಕಪ್, ಸೂಪರ್ 10, ಭಾರತ vs ಪಾಕಿಸ್ತಾನ: ಮೊದಲು ಆಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 7 ವಿಕೆಟ್​ಗೆ 130 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

5 / 5
2016 ಟಿ 20 ವಿಶ್ವಕಪ್, ಸೂಪರ್ 10, ಭಾರತ vs ಪಾಕಿಸ್ತಾನ: ಕೋಲ್ಕತ್ತಾದ ಮೈದಾನವನ್ನು ಈಡನ್ ಗಾರ್ಡನ್ಸ್ ಎಂದು ಬದಲಾಯಿಸಲಾಯಿತು. ಆದರೆ ಭಾರತ-ಪಾಕಿಸ್ತಾನ ಮುಖಾಮುಖಿಯ ಫಲಿತಾಂಶ ಬದಲಾಗಲಿಲ್ಲ. ಮಳೆಯಿಂದಾಗಿ, ಈ ಪಂದ್ಯವು 18-18 ಓವರ್‌ಗಳಲ್ಲಿ ಸೀಮಿತಗೊಳಿಸಲಾಯಿತು. ಪಾಕಿಸ್ತಾನ 118 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತದ 3 ವಿಕೆಟ್ ಕೂಡ ಬೇಗನೆ ಪತನಗೊಂಡಿತು. ಆದರೆ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 55 ರನ್​ಗಳ ಇನ್ನಿಂಗ್ಸ್ ಆಡಿ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದುಕೊಂಡರು.