ಕೆಎಲ್ ರಾಹುಲ್ ಏಷ್ಯಾಕಪ್ ತಯಾರಿಗಾಗಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದರು. ಏಷ್ಯಾಕಪ್‌ಗೆ ಮೊದಲು ಜಿಂಬಾಬ್ವೆಯಲ್ಲಿ ಉತ್ತಮ ಇನ್ನಿಂಗ್ಸ್ ಆಡಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ರಾಹುಲ್ ಬಯಸಿದ್ದರು. ಆದರೆ ಜಿಂಬಾಬ್ವೆ ಸರಣಿಯಲ್ಲಿ ರಾಹುಲ್ ಬ್ಯಾಟ್ ಫುಲ್ ಸೈಲೆಂಟ್ ಆಗಿತ್ತು.
ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಎರಡನೇ-ಮೂರನೇ ಏಕದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 1 ರನ್ ಗಳಿಸಿ ಔಟಾದರೆ, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಅವರ ಬ್ಯಾಟ್ 30 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಎಲ್ಬಿಡಬ್ಲ್ಯು ಔಟ್ ಆದರೆ, ಎರಡನೇ ODI ನಲ್ಲಿ ಬೌಲ್ಡ್ ಮಾಡಿದರು. ಒಟ್ಟಿನಲ್ಲಿ ಕೆಎಲ್ ರಾಹುಲ್ ಎರಡು ಇನ್ನಿಂಗ್ಸ್ ಳಲ್ಲಿ ಬ್ಯಾಟಿಂಗ್ ಮಾಡುವಾಗ ಕಂಫರ್ಟಬಲ್ ಆಗಿ ಕಾಣದಿರುವುದು ಇದೀಗ ಟೀಂ ಇಂಡಿಯಾಕ್ಕೆ ಆತಂಕ ತಂದಿದೆ.
ಕೆಎಲ್ ರಾಹುಲ್ ಈಗ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯ ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿದೆ. ಐಪಿಎಲ್ ನಂತರ ರಾಹುಲ್ ಕೇವಲ 2 ಇನ್ನಿಂಗ್ಸ್ ಆಡಿದ್ದು, ಅವರ ಬ್ಯಾಟಿಂಗ್ ಕೂಡ ಅಷ್ಟೂ ಉತ್ತಮವಾಗಿ ಕಾಣಿಸುತ್ತಿಲ್ಲ.
ಕೆಎಲ್ ರಾಹುಲ್ ಬಿಟ್ಟರೆ ವಿರಾಟ್ ಕೊಹ್ಲಿ ಬ್ಯಾಟ್ ಕೂಡ ಸೈಲೆಂಟ್ ಆಗಿದೆ. ಏಷ್ಯಾಕಪ್ ಸಮಯದಲ್ಲಿ ಇಬ್ಬರೂ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲಿದ್ದಾರೆ. ಈಗ ಟೀಮ್ ಇಂಡಿಯಾದ ತಂತ್ರ ಏನು ಎಂಬುದನ್ನು ಕಾದು ನೋಡಬೇಕಾಗಿದೆ.