IND vs SA: ಯುವರಾಜ್ ಸಿಂಗ್ ಶಿಷ್ಯನಿಗೆ ಸದ್ಯದಲ್ಲೇ ಟೀಂ ಇಂಡಿಯಾದಿಂದ ಗೇಟ್​ಪಾಸ್

|

Updated on: Nov 09, 2024 | 4:12 PM

Abhishek Sharma Batting Failure: ಭಾರತದ ಯುವ ಟಿ20 ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಶತಕದ ನೆರವಿನಿಂದ ಗೆದ್ದಿದೆ. ಆದರೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಕಳಪೆ ಆಟ ಪ್ರದರ್ಶಿಸಿ ನಿರಾಶೆ ಮೂಡಿಸಿದರು. ಅವರ ಆಕ್ರಮಣಕಾರಿ ಆಟದ ಶೈಲಿಯು ಅವರ ದುರ್ಬಲತೆಯಾಗುತ್ತಿದೆ ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ತೋರಿಸಿದೆ. ಭಾರತೀಯ ತಂಡದಲ್ಲಿ ಅವರ ಸ್ಥಾನಕ್ಕೆ ಅಪಾಯವಿದೆ.

1 / 7
4 ಪಂದ್ಯಗಳ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತದ ಯುವ ತಂಡ, ನವೆಂಬರ್ 8 ರಂದು ನಡೆದ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಅಮೋಘ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಅದ್ಭುತ ಶತಕ ಬಾರಿಸಿದರು. ಹೀಗಾಗಿ ಟೀಂ ಇಂಡಿಯಾ 203 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 141 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

2 / 7
ಇನ್ನು ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತೊಮ್ಮೆ ತಮ್ಮ ಕಳಪೆ ಬ್ಯಾಟಿಂಗ್‌ ಮೂಲಕ ಬೇಗನೇ ಪೆವಿಲಿಯನ್ ಸೇರಿಕೊಂಡರು. ಕೇವಲ ಹೊಡಿಬಡಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಅಭಿಷೇಕ್​, ಸನ್ನಿವೇಶಗಳಿಗೆ ತಕ್ಕಂತೆ ಬ್ಯಾಟ್ ಬೀಸದೆ ಹೋದರೆ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾದಿಂದ ಹೊರಬೀಳುವುದು ಖಚಿತ.

3 / 7
ವಾಸ್ತವವಾಗಿ ಭಾರತ ಟಿ20 ತಂಡದಲ್ಲಿ ಆರಂಭಕರಾಗಿ ಕಾಣಿಸಿಕೊಂಡಿರುವ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಂತಹ ಆಟಗಾರರ ಅನುಪಸ್ಥಿತಿಯಿಂದಾಗಿ, ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಯಲ್ಲೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿತ್ತು. ಆ ಸರಣಿಯಲ್ಲಿ ಸಂಜು ತಮ್ಮ ಲಯಕಂಡುಕೊಂಡರೆ, ಅಭಿಷೇಕ್ ಮಾತ್ರ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೂ ಇದೇ ಪರಿಸ್ಥಿತಿ ಅವರಿಗೆ ಎದುರಾಗಿತ್ತು.

4 / 7
ಬಾಂಗ್ಲಾದೇಶದ ಸರಣಿಯಂತೆ ಈ ಸರಣಿಯಲ್ಲೂ ಅಭಿಷೇಕ್ ಬಂದ ತಕ್ಷಣವೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಲು ಮುಂದಾದರು. ಆದರೆ ಆ 3 ಪಂದ್ಯಗಳಂತೆ ಇಲ್ಲಿಯೂ ವ್ಯತಿರಿಕ್ತ ಫಲಿತಾಂಶವನ್ನು ಅನುಭವಿಸಬೇಕಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಿಂದಲೂ ಅವರು ದೊಡ್ಡ ಹೊಡೆತಗಳನ್ನಷ್ಟೇ ಆಡಲು ಪ್ರಯತ್ನಿಸುತ್ತಿದ್ದರು. ಆದರೆ ಯಾವ ಎಸೆತವನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಭಿಷೇಕ್ ಮತ್ತೊಮ್ಮೆ ಮರೆತು. ಇದರ ಪರಿಣಾಮವಾಗಿ ಅಭಿಷೇಕ್ ಮತ್ತೊಮ್ಮೆ ಬೇಗನೇ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.

5 / 7
ದಕ್ಷಿಣ ಆಫ್ರಿಕಾದ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್, ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿಯೇ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿ ಅವರ ಗುಡ್ ಲೆಂಗ್ತ್ ಬಾಲ್ ಅನ್ನು ಬೌಂಡರಿ ದಾಟಿಸುವ ಪ್ರಯತ್ನ ಮಾಡಿದರು. ಆದರೆ ಚೆಂಡು ಗಾಳಿಯಲ್ಲಿ ಮೇಲಕ್ಕೆ ಹೋಯಿತು. ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಹಿಮ್ಮುಖವಾಗಿ ಓಡಿ ಉತ್ತಮ ಕ್ಯಾಚ್ ಪಡೆದರು. ಹೀಗಾಗಿ ಅಭಿಷೇಕ್ 8 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಔಟಾದರು.

6 / 7
ಐಪಿಎಲ್ 2024 ರಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಟೀಂ ಇಂಡಿಯಾಗೆ ಬಂದ ಅಭಿಷೇಕ್‌ಗೆ ಅವರ ಈ ಆಕ್ರಮಣಕಾರಿ ಗುಣವೇ ಮುಳ್ಳಾಗಲು ಪ್ರಾರಂಭಿಸಿದೆ. ಅಂಕಿಅಂಶಗಳು ಕೂಡ ಅಭಿಷೇಕ್ ಅವರ ಈ ಸಮಸ್ಯೆಗೆ ಸಾಕ್ಷಿಯಾಗಿದೆ. ಅಭಿಷೇಕ್ ತನ್ನ ಟಿ20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 8 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದಾರೆ ಆದರೆ 12 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಒಮ್ಮೆ ಮಾತ್ರ ಎದುರಿಸಿದ್ದಾರೆ, ಅದೂ ಕೂಡ ಅವರು ಐರ್ಲೆಂಡ್ ವಿರುದ್ಧ ಶತಕ ಗಳಿಸಿದಾಗ. ಒಟ್ಟಾರೆಯಾಗಿ, ಆಡಿರುವ 8 ಇನ್ನಿಂಗ್ಸ್​ಗಳಲ್ಲಿ 3 ಬಾರಿ ಮಾತ್ರ 10 ಅಥವಾ ಹೆಚ್ಚಿನ ಎಸೆತಗಳನ್ನು ಎದುರಿಸಲು ಅಭಿಷೇಕ್​ಗೆ ಸಾಧ್ಯವಾಗಲಿದೆ.

7 / 7
ಆದಾಗ್ಯೂ ಅಭಿಷೇಕ್​ ಅವರಿಗೆ ಈ ಆಕ್ರಮಣಕಾರಿ ಶೈಲಿಯೇ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿದೆ. ಆದರೆ ಕೆಲವೊಮ್ಮೆ ಸನ್ನಿವೇಶಗಳನ್ನು ಅರ್ಥಮಾಡಿಕೊಂಡ ನಂತರವೇ ಶಾಟ್ ಆಡುವುದು ಅವಶ್ಯಕ, ಇದು ಕ್ರಿಕೆಟ್‌ನಲ್ಲಿ ಅತ್ಯಂತ ಮುಖ್ಯವಾಗಿದೆ. ಅಭಿಷೇಕ್ ಅವರ ಮಾರ್ಗದರ್ಶಕ ಮತ್ತು ಮಾಜಿ ಟೀಂ ಇಂಡಿಯಾದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ಅಭಿಷೇಕ್ ಅವರ ಬ್ಯಾಟಿಂಗ್ ಬಗ್ಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದಾಗ್ಯೂ ಅಭಿಷೇಕ್ ಮಾತ್ರ ತಮ್ಮ ಹಿಂದಿನ ತಪ್ಪುಗಳನ್ನೇ ಪುನಾರವರ್ತಿಸುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಸನಿಹದಲ್ಲಿದ್ದಾರೆ.

Published On - 3:50 pm, Sat, 9 November 24