ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ

| Updated By: ಝಾಹಿರ್ ಯೂಸುಫ್

Updated on: Jan 29, 2023 | 11:48 PM

ICC ODI Rankings: ಮೊಹಮ್ಮದ್ ಸಿರಾಜ್​ಗೂ ಮೊದಲು ಭಾರತದ 5 ಬೌಲರ್​ಗಳು ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಆ ಬೌಲರ್​ಗಳು ಯಾರೆಲ್ಲಾ ಎಂಬುದರ ಕಿರು ಪರಿಚಯ ಇಲ್ಲಿದೆ...

1 / 8
ಐಸಿಸಿ ಪ್ರಕಟಿಸಿರುವ ನೂತನ ಏಕದಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 6ನೇ ಬೌಲರ್ ಎನಿಸಿಕೊಂಡಿದ್ದಾರೆ.

2 / 8
ಅಂದರೆ ಮೊಹಮ್ಮದ್ ಸಿರಾಜ್​ಗೂ ಮೊದಲು ಭಾರತದ 5 ಬೌಲರ್​ಗಳು ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಆ ಬೌಲರ್​ಗಳು ಯಾರೆಲ್ಲಾ ಎಂಬುದರ ಕಿರು ಪರಿಚಯ ಇಲ್ಲಿದೆ...

3 / 8
1- ಮಣಿಂದರ್ ಸಿಂಗ್: ಟೀಮ್ ಇಂಡಿಯಾ ಪರ ಐಸಿಸಿ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಮೊದಲ ಬೌಲರ್​ ಮಣಿಂದರ್ ಸಿಂಗ್. 80 ರ ದಶಕದಲ್ಲಿ ಭಾರತದ ಪರ ಆಡಿದ್ದ ಮಣಿಂದರ್ ಅವರು 1987 ರಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಟೀಮ್ ಇಂಡಿಯಾ ಪರ 59 ಏಕದಿನ ಪಂದ್ಯವಾಡಿದ್ದ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಒಟ್ಟು 66 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

4 / 8
2- ಕಪಿಲ್ ದೇವ್: ಮಣಿಂದರ್ ಸಿಂಗ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಕಪಿಲ್ ದೇವ್. ಟೀಮ್ ಇಂಡಿಯಾ ಪರ 225 ಏಕದಿನ ಪಂದ್ಯವಾಡಿರುವ ಕಪಿಲ್ ಪಾಜಿ ಒಟ್ಟು 253 ವಿಕೆಟ್ ಪಡೆದಿದ್ದಾರೆ. ಇದರ ನಡುವೆ 1989 ರಲ್ಲಿ ಏಕದಿನ ರ‍್ಯಾಂಕಿಂಗ್​​ನಲ್ಲಿ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದರು.

5 / 8
3- ಅನಿಲ್ ಕುಂಬ್ಳೆ: ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಈ ಪಟ್ಟಿಯಲ್ಲಿದ್ದಾರೆ. 271 ಪಂದ್ಯಗಳಿಂದ 337 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ವಿಶೇಷ ಎಂದರೆ 1996 ರಲ್ಲಿ ಅನಿಲ್ ಕುಂಬ್ಳೆ ಐಸಿಸಿ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿ ಮಿಂಚಿದ್ದರು.

6 / 8
4- ರವೀಂದ್ರ ಜಡೇಜಾ: ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ 2013 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಐಸಿಸಿ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

7 / 8
5- ಜಸ್​ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾ 2018 ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಬೌಲರ್ ಎನಿಸಿಕೊಂಡಿದ್ದರು.

8 / 8
6- ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಅದ್ಭುತ ಲಯದಲ್ಲಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಒಟ್ಟು 14 ವಿಕೆಟ್ ಕಬಳಿಸುವ ಮೂಲಕ ಇದೀಗ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 6ನೇ ಭಾರತೀಯ ಎನಿಸಿಕೊಂಡಿದ್ದಾರೆ.

Published On - 10:57 pm, Fri, 27 January 23