- Kannada News Photo gallery Cricket photos Pakistan Cricketer Wahab Riaz appointed as Sports Minister in Punjab Kannada News zp
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Wahab Riaz: ಪಾಕ್ ತಂಡದ ಪರ ಕಣಕ್ಕಿಳಿದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದ ಎಡಗೈ ಬೌಲರ್ ವಹಾಬ್ ರಿಯಾಜ್ ಒಟ್ಟು 156 ಪಂದ್ಯಗಳನ್ನು ಆಡಿದ್ದಾರೆ.
Updated on:Jan 27, 2023 | 3:58 PM

ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದೆ. ಒಂದೆಡೆ ದೈನಂದಿನ ಆಹಾರಗಳ ಬೆಲೆ ಗಗನಕ್ಕೇರಿದ್ದರೆ, ಮತ್ತೊಂದೆಡೆ ದೇಶದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ಇವೆಲ್ಲದರ ನಡುವೆ ಪಾಕಿಸ್ತಾನ್ ಸರ್ಕಾರ ಕ್ರಿಕೆಟ್ ಮಂಡಳಿ ಹಾಗೂ ಇನ್ನಿತರ ಕ್ರೀಡಾ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಅದರಲ್ಲೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಕ್ ಸರ್ಕಾರ ತೆಗೆದುಕೊಂಡ ಈ ಒಂದು ನಿರ್ಧಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಪಾಕಿಸ್ತಾನ ಸರ್ಕಾರವು ಪಂಜಾಬ್ ಪ್ರಾಂತ್ಯದ ತನ್ನ ಉಸ್ತುವಾರಿ ಸಚಿವ ಸಂಪುಟದಲ್ಲಿ ಪಾಕ್ ವೇಗದ ಬೌಲರ್ ವಹಾಬ್ ರಿಯಾಜ್ ಅವರನ್ನು ಕ್ರೀಡಾ ಸಚಿವರನ್ನಾಗಿ ನೇಮಿಸಿದೆ. ವಿಶೇಷ ಎಂದರೆ ವಹಾಬ್ ರಿಯಾಜ್ ಅತ್ತ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಆಡುತ್ತಿದ್ದಾರೆ.

ಅಂದರೆ ಬಿಪಿಎಲ್ನಲ್ಲಿ ಪಂದ್ಯವಾಡುತ್ತಿದ್ದ ವೇಳೆ ವಹಾಬ್ ರಿಯಾಜ್ ಅವರನ್ನು ಪಾಕಿಸ್ತಾನ್ ಸರ್ಕಾರವು ಪಂಜಾಬ್ ಸರ್ಕಾರದ ಕ್ರೀಡಾ ಸಚಿವರನ್ನಾಗಿ ಆಯ್ಕೆ ಮಾಡಿದೆ. ಸದ್ಯ ಅವರು ಬಾಂಗ್ಲಾದೇಶ ಲೀಗ್‌ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಂದ ವಾಪಸಾದ ಬಳಿಕವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರದ ಈ ನಡೆಗೆ ಇದೀಗ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ.

ಪಾಕ್ ತಂಡದ ಪರ ಕಣಕ್ಕಿಳಿದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದ ಎಡಗೈ ಬೌಲರ್ ವಹಾಬ್ ರಿಯಾಜ್ ಒಟ್ಟು 156 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 237 ವಿಕೆಟ್ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ ವಹಾಬ್ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ್ ತಂಡದ ಭಾಗವಾಗಿದ್ದರು.

ಆದರೆ 2020 ರ ಬಳಿಕ ಅವರಿಗೆ ಪಾಕ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದಾಗ್ಯೂ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ವಹಾಬ್ ರಿಯಾಜ್ ಒಟ್ಟು 400 ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಸದ್ಯ ಬಿಪಿಎಲ್ನಲ್ಲಿ ಖುಲ್ನಾ ಟೈಗರ್ಸ್ ಪರ ಆಡುತ್ತಿರುವ ವಹಾಬ್ ಒಟ್ಟು 9 ವಿಕೆಟ್ ಪಡೆದಿದ್ದಾರೆ. ಇದರ ನಡುವೆ ಪಂಜಾಬ್ ಪ್ರಾಂತ್ಯದ ಕ್ರೀಡಾ ಸಚಿವರಾಗಿ ಆಯ್ಕೆಯಾಗಿರುವುದೇ ವಿಶೇಷ.
Published On - 3:57 pm, Fri, 27 January 23
























