Team India: ಕೊಹ್ಲಿ, ಸೂರ್ಯ, ರಾಹುಲ್ ಆಯ್ತು, ಇದೀಗ ಉಮೇಶ್ ಯಾದವ್ ಸರದಿ
Team India: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಅದೊಂದು ದೇವಾಲಯಕ್ಕೆ ಹೋಗಿಬಂದ ಮೇಲೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೀಗ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರು ಒಬ್ಬರ ನಂತರ ಒಬ್ಬರಂತೆ ಆ ದೇವಾಲಯಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.
1 / 6
ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ್ಗೆ ದೇವರ ಮೊರೆ ಹೋಗವುದು ಸರ್ವೆ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಅದೊಂದು ದೇವಾಲಯಕ್ಕೆ ಹೋಗಿಬಂದ ಮೇಲೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೀಗ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರು ಒಬ್ಬರ ನಂತರ ಒಬ್ಬರಂತೆ ಅದೊಂದು ದೇವಾಲಯಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.
2 / 6
ವಾಸ್ತವವಾಗಿ ಈ ದೇವಾಲಯದ ಭೇಟಿ ಪರ್ವ ಆರಂಭವಾಗಿದ್ದು ವಿರಾಟ್ ಕೊಹ್ಲಿ ಅವರಿಂದ, ಆ ನಂತರ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಟೀಂ ಇಂಡಿಯಾ ಬೌಲರ್ ಉಮೇಶ್ ಯಾದವ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಉಜ್ಜಯನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದಾರೆ.
3 / 6
ಸೋಮವಾರ ಮಹಾಕಾಳೇಶ್ವರ ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದ ಉಮೇಶ್, ದೇವರಿಗೆ ರುದ್ರಾಭಿಷೇಕ ನೆರವೇರಿಸಿದರು. ಇದೀಗ ಈ ದೇವರ ದರ್ಶನ ಪಡೆದಿರುವ ಉಮೇಶ್ ಯಾದವ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ವಾಸ್ತವವಾಗಿ, ಉಮೇಶ್ಗೂ ಮೊದಲು, ಇಲ್ಲಿಗೆ ಭೇಟಿ ನೀಡಿದ್ದ ಮೂವರು ಟೀಂ ಇಂಡಿಯಾ ಆಟಗಾರರು ಲಯ ಕಂಡುಕೊಂಡಿದ್ದರು.
4 / 6
ಅಹಮದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ 3 ವರ್ಷಗಳ ಶತಕದ ಬರವನ್ನು ಅಂತ್ಯಗೊಳಿಸಿದ್ದರು. ಆದರೆ ಈ ಶತಕಕ್ಕೂ ಮುನ್ನ ಕೊಹ್ಲಿ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದರು.
5 / 6
ಕೊಹ್ಲಿಗೂ ಮುನ್ನ ಸೂರ್ಯಕುಮಾರ್ ಕೂಡ ಕಳೆದ ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಸೂರ್ಯ, ಮಹಾಕಾಳೇಶ್ವರನ ಆಶೀರ್ವಾದ ಪಡೆದಿದ್ದರು. ಇದಾದ ಬಳಿಕ ಕಿವೀ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 47 ರನ್ ಬಾರಿಸಿದ್ದರು.
6 / 6
ಕಳೆದ ಫೆಬ್ರವರಿಯಲ್ಲಿ ಕೆಎಲ್ ರಾಹುಲ್ ಕೂಡ ಮಹಾಕಾಳೇಶ್ವರನ ದರ್ಶನ ಪಡೆದಿದ್ದರು. ರಾಹುಲ್ ಪತ್ನಿ ಅಥಿಯಾ ಅವರೊಂದಿಗೆ ಇಲ್ಲಿಗೆ ಬಂದಿದ್ದರು. ಇಲ್ಲಿಗೆ ಭೇಟಿ ನೀಡಿ ಫಾರ್ಮ್ಗೆ ಮರಳಿದ್ದ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸಿದರು.
Published On - 1:47 pm, Mon, 20 March 23