- Kannada News Photo gallery Cricket photos ipl 2023 List of teams with most sixes in all seasons of IPL
IPL: ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 2ನೇ ತಂಡ ಆರ್ಸಿಬಿ! ಯಾವ ತಂಡಕ್ಕೆ ಯಾವ ಸ್ಥಾನ? ಇಲ್ಲಿದೆ ವಿವರ
IPL: ಕ್ಸರ್ಗಳ ವಿಚಾರಕ್ಕೆ ಬಂದರೆ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ವಿವರ ಇಲ್ಲಿದೆ.
Updated on: Mar 21, 2023 | 7:12 AM

16ನೇ ಆವೃತ್ತಿಯ ಐಪಿಎಲ್ಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಕಳೆದಿರುವ 15 ಆವೃತ್ತಿಗಳ ಮೇಲೆ ಕಣ್ಣಾಡಿಸಿದರೆ ಇಲ್ಲಿ ನೂರಾರು ದಾಖಲೆಗಳ ಪಟ್ಟಿ ನಮ್ಮ ಕಣ್ಣ ಮುಂದೆ ಬರುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ಯಾವ ತಂಡ ಅತಿ ಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದೆ ಎಂಬುದು. ವಿಶೇಷವಾಗಿ ಸಿಕ್ಸರ್ಗಳ ವಿಚಾರಕ್ಕೆ ಬಂದರೆ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ವಿವರ ಇಲ್ಲಿದೆ.

ಮುಂಬೈ ಇಂಡಿಯನ್ಸ್ 231 ಪಂದ್ಯಗಳಲ್ಲಿ 1408 ಸಿಕ್ಸರ್‌ಗಳನ್ನು ಬಾರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು 226 ಪಂದ್ಯಗಳಲ್ಲಿ 1377 ಸಿಕ್ಸರ್‌ಗಳನ್ನು ಬಾರಿಸಿದೆ.

ಪಂಜಾಬ್ ಕಿಂಗ್ಸ್ ತಂಡ 218 ಪಂದ್ಯಗಳಲ್ಲಿ 1276 ಸಿಕ್ಸರ್‌ಗಳನ್ನು ಬಾರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ 208 ಪಂದ್ಯಗಳಲ್ಲಿ 1268 ಸಿಕ್ಸರ್ ಬಾರಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 223 ಪಂದ್ಯಗಳಲ್ಲಿ 1226 ಸಿಕ್ಸರ್ ಬಾರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ 224 ಪಂದ್ಯಗಳಲ್ಲಿ 1147 ಸಿಕ್ಸರ್‌ಗಳನ್ನು ಬಾರಿಸಿದೆ.

ರಾಜಸ್ಥಾನ ರಾಯಲ್ಸ್ ತಂಡ 191 ಪಂದ್ಯಗಳಲ್ಲಿ 1011 ಸಿಕ್ಸರ್‌ಗಳನ್ನು ಬಾರಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ 152 ಪಂದ್ಯಗಳಲ್ಲಿ 777 ಸಿಕ್ಸರ್ ಬಾರಿಸಿದೆ.

ಕಳೆದ ಬಾರಿ ಹೊಸದಾಗಿ ಎಂಟ್ರಿಕೊಟ್ಟ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ಪಂದ್ಯಗಳಲ್ಲಿ 115 ಸಿಕ್ಸರ್, ಗುಜರಾತ್ ಟೈಟಾನ್ಸ್ ತಂಡ 16 ಪಂದ್ಯಗಳಲ್ಲಿ 79 ಸಿಕ್ಸರ್ ಬಾರಿಸಿದೆ.

ಡೆಕ್ಕನ್ ಚಾರ್ಜರ್ಸ್ ತಂಡ 75 ಪಂದ್ಯಗಳಲ್ಲಿ 400 ಸಿಕ್ಸರ್, ಪುಣೆ ವಾರಿಯರ್ಸ್ ತಂಡ 46 ಪಂದ್ಯಗಳಲ್ಲಿ 196 ಸಿಕ್ಸರ್‌ಗಳನ್ನು ಬಾರಿಸಿದೆ. ಇದಲ್ಲದೇ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 30 ಪಂದ್ಯಗಳಲ್ಲಿ 257 ಸಿಕ್ಸರ್, ಗುಜರಾತ್ ಲಯನ್ಸ್ ತಂಡ 30 ಪಂದ್ಯಗಳಲ್ಲಿ 155 ಸಿಕ್ಸರ್, ಕೊಚ್ಚಿ ಟಸ್ಕರ್ಸ್ ಕೇರಳ 14 ಪಂದ್ಯಗಳಲ್ಲಿ 53 ಸಿಕ್ಸರ್ ಬಾರಿಸಿದೆ.




