- Kannada News Photo gallery Cricket photos IPL 2023: S Sreesanth Comeback To IPL After 10 Years In A New Role
IPL 2023: ಹೊಸ ಅವತಾರದಲ್ಲಿ ಐಪಿಎಲ್ಗೆ ಶ್ರೀಶಾಂತ್ ಕಂಬ್ಯಾಕ್
IPL 2023 Kannada: ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿನ್ ಟಸ್ಕರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಒಟ್ಟು 44 ಪಂದ್ಯಗಳನ್ನಾಡಿದ್ದ ಶ್ರೀಶಾಂತ್ 40 ವಿಕೆಟ್ ಕಬಳಿಸಿ ಮಿಂಚಿದ್ದರು.
Updated on:Mar 20, 2023 | 10:36 PM

ಟೀಮ್ ಇಂಡಿಯಾದ ಮಾಜಿ ವೇಗಿ ಶಾಂತಕುಮಾರನ್ ಶ್ರೀಶಾಂತ್ ತಮ್ಮ ಕ್ರಿಕೆಟ್ ಜೀವನಕ್ಕೆ ಪೂರ್ಣವಿರಾಮ ಹಾಕಿ ಕೇವಲ ಒಂದು ವರ್ಷವಾಗಿದೆಯಷ್ಟೇ. ಆದರೆ ಐಪಿಎಲ್ 2013 ರ ಸ್ಪಾಟ್ ಫಿಕ್ಸಿಂಗ್ ವಿವಾದದಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಮತ್ತೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಐಪಿಎಲ್ಗೆ ಮರಳುತ್ತಿದ್ದಾರೆ. ಆದರೆ ಈ ಬಾರಿ ಹೊಸ ಅವತಾರದಲ್ಲಿ ಎಂಬುದಷ್ಟೇ ವ್ಯತ್ಯಾಸ.

ಹೌದು, ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ,ಟೂರ್ನಿಯ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್ ಡಿಸ್ಕಷನ್ ಸದಸ್ಯರ ಹೆಸರುಗಳನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಎಸ್. ಶ್ರೀಶಾಂತ್ ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ಅಂದರೆ ಈ ಬಾರಿಯ ಐಪಿಎಲ್ ವೇಳೆ ಶ್ರೀಶಾಂತ್ ಸ್ಟಾರ್ ಸ್ಪೋರ್ಟ್ಸ್ ಮಲಯಾಳಂ ಚಾನೆಲ್ನಲ್ಲಿ ವೀಕ್ಷಕ ವಿಶ್ಲೇಷಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಐಪಿಎಲ್ನಲ್ಲಿ ಸೆಕೆಂಡ್ ಇನಿಂಗ್ಸ್ ಶುರು ಮಾಡಲು ಶ್ರೀಶಾಂತ್ ಮುಂದಾಗಿದ್ದಾರೆ.

ಇನ್ನು ಶ್ರೀಶಾಂತ್ ಅಲ್ಲದೆ, ಈ ಬಾರಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಜಾಕ್ವೆಸ್ ಕಾಲಿಸ್, ಆರೋನ್ ಫಿಂಚ್, ಕೆವಿನ್ ಪೀಟರ್ಸನ್, ಟಾಮ್ ಮೂಡಿ, ಇರ್ಫಾನ್ ಪಠಾಣ್ , ಪಾಲ್ ಕಾಲಿಂಗ್‌ವುಡ್, ಹರ್ಭಜನ್ ಸಿಂಗ್ , ಮುರಳಿ ವಿಜಯ್, ಮೊಹಮ್ಮದ್ ಕೈಫ್ ಮತ್ತು ಯೂಸುಫ್ ಪಠಾಣ್ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿನ್ ಟಸ್ಕರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಒಟ್ಟು 44 ಪಂದ್ಯಗಳನ್ನಾಡಿದ್ದ ಶ್ರೀಶಾಂತ್ 40 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ನಡುವೆ 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

ಇದರ ಬೆನ್ನಲ್ಲೇ ಶ್ರೀಶಾಂತ್ ಅವರನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಗಿತ್ತು. ಇದೀಗ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಮೂಲಕ ಮತ್ತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Published On - 10:30 pm, Mon, 20 March 23
