Updated on: Jun 12, 2022 | 6:31 PM
ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಪಂದ್ಯದ ಮೂಲಕ ರಿಷಭ್ ಪಂತ್ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಗಾಯಗೊಂಡ ಪರಿಣಾಮ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಟಿ20 ನಾಯಕರಾಗಿ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು. ಇದರೊಂದಿಗೆ 24ನೇ ವಯಸ್ಸಿನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಕೂಡ ಪಂತ್ ಪಾಲಾಯಿತು.
ಆದರೆ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ಇರುವುದು ಮಾಜಿ ಆಟಗಾರನ ಹೆಸರಿನಲ್ಲಿ ಎಂಬುದು ವಿಶೇಷ. ಆಗಿದ್ರೆ ಟೀಮ್ ಇಂಡಿಯಾವನ್ನು ಚುಟುಕು ಕ್ರಿಕೆಟ್ನಲ್ಲಿ ಮುನ್ನಡೆಸಿದ ಕಿರಿಯ ನಾಯಕರುಗಳು ಯಾರೆಲ್ಲಾ ನೋಡೋಣ...
1- ಸುರೇಶ್ ರೈನಾ: ಟೀಮ್ ಇಂಡಿಯಾ ಮಾಜಿ ಎಡಗೈ ದಾಂಡಿಗ ಸುರೇಶ್ ರೈನಾ 2010 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್ನಲ್ಲಿ ಮುನ್ನಡೆಸಿದ್ದರು. ಈ ವೇಳೆ ರೈನಾ ಅವರ ವಯಸ್ಸು ಕೇವಲ 23 ವರ್ಷ, 197 ದಿನಗಳು ಮಾತ್ರ. ಅಂದರೆ ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್ನಲ್ಲಿ ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ರೈನಾ ಹೆಸರಿನಲ್ಲಿದೆ.
2- ರಿಷಭ್ ಪಂತ್: 2022 ರಲ್ಲಿ ಸೌತ್ ಆಫ್ರಿಕಾ ವಿರುದ್ದ ನಾಯಕನಾಗಿ ಕಣಕ್ಕಿಳಿಯುವ ರಿಷಭ್ ಪಂತ್ 2ನೇ ಅತ್ಯಂತ ಕಿರಿಯ ನಾಯಕ ಎನಿಸಿಕೊಂಡಿದ್ದಾರೆ. ನಾಯಕನಾಗಿ ಪದಾರ್ಪಣೆ ಮಾಡಿದಾಗ ಪಂತ್ ಅವರ ವಯಸ್ಸು 24 ವರ್ಷ, 248 ದಿನಗಳು.
3- ಎಂ ಎಸ್ ಧೋನಿ: 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಾಯಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಧೋನಿಯ ವಯಸ್ಸು 26 ವರ್ಷ, 68 ದಿನಗಳಾಗಿತ್ತು.
4- ಅಜಿಂಕ್ಯ ರಹಾನೆ: 2015 ರಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ವಯಸ್ಸು 27 ವರ್ಷ, 41 ದಿನಗಳು.
5- ವೀರೇಂದ್ರ ಸೆಹ್ವಾಗ್: 2006 ರಲ್ಲಿ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅವರ ವಯಸ್ಸು 28 ವರ್ಷ , 42 ದಿನಗಳು. ಹಾಗೆಯೇ ಟೀಮ್ ಇಂಡಿಯಾ ಟಿ20ದ ಮೊದಲ ನಾಯಕ ಕೂಡ ಸೆಹ್ವಾಗ್ ಎಂಬುದು ವಿಶೇಷ.
Published On - 6:31 pm, Sun, 12 June 22