IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

| Updated By: ಝಾಹಿರ್ ಯೂಸುಫ್

Updated on: Sep 05, 2021 | 4:04 PM

IPL 2021 Phase 2: 2016 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ಪದಾರ್ಪಣೆ ಮಾಡಿದ್ದ ಎಡಗೈ ಬೌಲರ್ ಅಲೆಕ್ಸಾಂಡ್ರಾ 28 ಪಂದ್ಯಗಳನ್ನಾಡಿ 39 ವಿಕೆಟ್ ಪಡೆದಿದ್ದಾರೆ. ಹಾಗೆಯೇ 4 ಟಿ20 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ರಂಗೇರಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳು ಯುಎಇನತ್ತ ಪ್ರಯಾಣ ಬೆಳೆಸಿ ಅಭ್ಯಾಸವನ್ನೂ ಆರಂಭಿಸಿದೆ. ಇದರ ಬೆನ್ನಲ್ಲೇ ಅಭಿಮಾನಿಗಳ ನಡುವೆ ಕೂಡ ಸೋಷಿಯಲ್ ಮೀಡಿಯಾ ಫೈಟ್ ಶುರುವಾಗಿದೆ. ಅತ್ತ ಆರ್​ಸಿಬಿ ತಂಡದ ಅಪ್ಪಟ ಅಭಿಮಾನಿ ಇಂಗ್ಲೆಂಡ್​ನ ಅಲೆಕ್ಸಾಂಡ್ರಾ ಹಾರ್ಟ್ಲೀ ಕೂಡ ರಂಗಕ್ಕೆ ಇಳಿದಿದ್ದಾರೆ. ಅದು ಕೂಡ ಈ ಸಲ ಕಪ್ ನಮ್ದೆ ಎನ್ನುವ ಮೂಲಕ ಎಂಬುದು ವಿಶೇಷ.

2 / 5
ಹೌದು, ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಹಾರ್ಟ್ಲೀ ವಿರಾಟ್ ಕೊಹ್ಲಿ ಹಾಗೂ ಆರ್​ಸಿಬಿ ತಂಡದ ದೊಡ್ಡ ಫ್ಯಾನ್. ಈ ಹಿಂದಿನಿಂದಲೂ ಆರ್​ಸಿಬಿ ಪರ ಟ್ವೀಟ್ ಮಾಡುತ್ತಾ ಬಂದಿರುವ ಇಂಗ್ಲೆಂಡ್ ಆಟಗಾರ್ತಿ ಹಲವು ಬಾರಿ ಅಭಿಮಾನಿಗಳೊಂದಿಗೆ ಸೇರಿ ಆರ್​ಸಿಬಿ ಹೇಟರ್ಸ್​ಗೆ ಬಿಸಿ ಮುಟ್ಟಿಸಿದ್ದರು. ಇದೀಗ ಐಪಿಎಲ್​ ದ್ವಿತಿಯಾರ್ಧವನ್ನು ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

3 / 5
 ಐಪಿಎಲ್​ ಶುರುವಾಗುವನ್ನು ಕಾಯುತ್ತಿರುವುದಾಗಿ ತಿಳಿಸಿ ಅಲೆಕ್ಸಾಂಡ್ರಾ ಹಾರ್ಟ್ಲೀ, ಈ ಸಲ ಕಪ್ ನಮ್ದೆ ಎಂದು ಟ್ವಿಟಿಸಿದ್ದಾರೆ. ಈ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆರ್​ಸಿಬಿಯ ಇಂಗ್ಲೆಂಡ್​ ಅಭಿಮಾನಿಯ ಕಪ್ ನಮ್ದೆ ಟ್ವೀಟ್​ಗೆ ರಾಯಲ್ ಫ್ಯಾನ್ಸ್​ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

4 / 5
 ಇನ್ನು ಎಲ್ಲಾ ಅಭಿಮಾನಿಗಳಂತೆ ಸೋತರೂ, ಗೆದ್ದರೂ ಆರ್​ಸಿಬಿ ಎನ್ನುವ ಅಲೆಕ್ಸಾಂಡ್ರಾ ಈ ಹಿಂದೆ ತಂಡವು ಹೀನಾಯವಾಗಿ ಸೋತರೂ, ನಾವು ಪುಟಿದೇಳಲಿದ್ದೇವೆ ಎಂಬಾರ್ಥದಲ್ಲಿ ಪೋಸ್ಟ್ ಮಾಡಿ ಆರ್​ಸಿಬಿ ಫ್ಯಾನ್ಸ್​ ಅನ್ನು ಸಮಾಧಾನ ಪಡಿಸಿದ್ದರು. ಇದೀಗ ದ್ವಿತಿಯಾರ್ಧದ ಆರಂಭಕ್ಕೂ ಮುನ್ನ ಅಲೆಕ್ಸಾಂಡ್ರಾ ರಂಗಕ್ಕೆ ಇಳಿದಿದ್ದಾರೆ. ಅದು ಕೂಡ ಈ ಸಲ ಕಪ್ ನಮ್ದೆ ಎನ್ನುವ ಮೂಲಕ ಎಂಬುದು ವಿಶೇಷ.

5 / 5
 2016 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ಪದಾರ್ಪಣೆ ಮಾಡಿದ್ದ ಎಡಗೈ ಬೌಲರ್ ಅಲೆಕ್ಸಾಂಡ್ರಾ 28 ಪಂದ್ಯಗಳನ್ನಾಡಿ 39 ವಿಕೆಟ್ ಪಡೆದಿದ್ದಾರೆ. ಹಾಗೆಯೇ 4 ಟಿ20 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದಾರೆ.