IPL 2021: ತಾಲಿಬಾನಿಗಳ ದುರಾಡಳಿತ: ಐಪಿಎಲ್​ಗೆ SRH ಸ್ಟಾರ್ ಸ್ಪಿನ್ನರ್ ಅನುಮಾನ

| Updated By: ಝಾಹಿರ್ ಯೂಸುಫ್

Updated on: Sep 15, 2021 | 6:35 PM

IPL 2021: SRH ತಂಡವು ದ್ವಿತೀಯಾರ್ಧವನ್ನು ಸೆಪ್ಟೆಂಬರ್ 22 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ ದ್ವಿತಿಯಾರ್ಧ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸನ್​ರೈಸರ್ಸ್​​ ಹೈದರಾಬಾದ್ ತಂಡಕ್ಕೆ ಹೊಸ ಸಂಕಷ್ಟ ಶುರುವಾಗಿದೆ. ತಂಡದ ಸ್ಟಾರ್ ಸ್ಪಿನ್ನರ್ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಟೂರ್ನಿಗಾಗಿ ಆಗಮಿಸುವುದು ಅನುಮಾನ ಎನ್ನಲಾಗಿದೆ.

2 / 5
ಏಕೆಂದರೆ ಅಫ್ಘಾನಿಸ್ತಾನದಲ್ಲಿರುವ ಮುಜೀಬ್ ಉರ್ ರೆಹಮಾನ್ ಯುಎಇಗೆ ವೀಸಾ ಪಡೆಯಲು ಸಾಧ್ಯವಾಗಿಲ್ಲ. ಅಫ್ಘಾನ್​ನಲ್ಲಿ ತಾಲಿಬಾನಿಗಳ ದುರಾಡಳಿತ ತಾಂಡವಾಡುತ್ತಿದ್ದು, ಇದರಿಂದ ಯುವ ಕ್ರಿಕೆಟಿಗ ಪ್ರಯಾಣಕ್ಕೆ ಸಂಕಷ್ಟ ಎದುರಾಗಿ ಎಂದು ವರದಿಯಾಗಿದೆ.

3 / 5
ಅಫ್ಘಾನಿಸ್ತಾನದಿಂದ ಯುಎಇಗೆ ವೀಸಾ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಯಾವಾಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈಗಾಗಲೇ ತಂಡದ ಆರಂಭಿಕ ಆಟಗಾರ ಜಾನಿ ಬೈರ್​ ಸ್ಟೋ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ವೆಸ್ಟ್ ಇಂಡೀಸ್ ಆಟಗಾರ ಶೆರ್ಫಾನ್ ರುದರ್​ಫೋರ್ಡ್ ಸ್ಥಾನ ಪಡೆದಿದ್ದಾರೆ.

4 / 5
ಇದೀಗ ಮುಜೀಬ್​ ಉರ್ ರೆಹಮಾನ್ ಆಗಮನದ ಬಗ್ಗೆ ಇನ್ನು ಸಷ್ಟತೆಯಿಲ್ಲ. ಹೀಗಾಗಿ ಹೊಸ ಆಟಗಾರರ ಖರೀದಿಗೆ ಸನ್​ರೈಸರ್ಸ್​ ಹೈದರಾಬಾದ್ ಮುಂದಾಗುವ ಸಾಧ್ಯತೆಯಿದೆ. ಇದಾಗ್ಯೂ ಎಸ್​ಆರ್​ಹೆಚ್​ ತಂಡದಲ್ಲಿರುವ ಅಫ್ಘಾನಿಸ್ತಾನದ ಇನ್ನಿಬ್ಬರು ಆಟಗಾರರಾದ ಮೊಹಮ್ಮದ್ ನಬಿ ಹಾಗೂ ರಶೀದ್​ ಖಾನ್ ಈಗಾಗಲೇ ಯುಎಇಗೆ ತಲುಪಿದ್ದಾರೆ.

5 / 5
ನಬಿ ಹಾಗೂ ರಶೀದ್ ಖಾನ್ ಇಂಗ್ಲೆಂಡ್​ನಲ್ಲಿ ನಡೆದಿದ್ದ ದಿ ಹಂಡ್ರೆಡ್ ಲೀಗ್ ಮುಗಿಸಿ ಯುಎಇಗೆ ಆಗಮಿಸಿದ್ದರು.  SRH ತಂಡವು ದ್ವಿತೀಯಾರ್ಧವನ್ನು ಸೆಪ್ಟೆಂಬರ್ 22 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.