IPL 2022: ಐಪಿಎಲ್​ನ 5 ತಂಡಗಳಿಗೆ ಹೊಸ ನಾಯಕ..?

IPL 2022 New Captains: ಆರ್​ಸಿಬಿ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ತಂಡವು ಹೊಸ ನಾಯಕನ ಆಯ್ಕೆ ಮಾಡಲಿದೆ. ಅದರಂತೆ ಐಪಿಎಲ್​ ಸೀಸನ್​ 15ನಲ್ಲಿ ಆರ್​ಸಿಬಿ ತಂಡವನ್ನು ಹೊಸ ಕಪ್ತಾನ ಮುನ್ನಡೆಸಲಿದ್ದಾರೆ.

Nov 28, 2021 | 6:11 PM
TV9kannada Web Team

| Edited By: Zahir PY

Nov 28, 2021 | 6:11 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ನವೆಂಬರ್ 30 ರೊಳಗೆ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದೆ. ಅತ್ತ ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಬಹುತೇಕ ತಂಡದಲ್ಲಿದ್ದ ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ.

1 / 7
ಏಕೆಂದರೆ ಮುಂಬರುವ ಸೀಸನ್​ನಲ್ಲಿ ಕಾಣಿಸಿಕೊಳ್ಳಲಿರುವ 10 ತಂಡಗಳಲ್ಲಿ 6 ತಂಡಗಳು ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಏಕೆಂದರೆ ಪ್ರಸ್ತುತ ಇರುವ ಬಹುತೇಕ ತಂಡಗಳು ವಿಫಲರಾದ ನಾಯಕರನ್ನೂ ಕೂಡ ರಿಲೀಸ್ ಮಾಡಲಿರುವುದು ಬಹುತೇಕ ಖಚಿತವಾಗಿದೆ. ಈ ಪಟ್ಟಿಯಲ್ಲಿ ಕೆಕೆಆರ್​ ತಂಡದ ನಾಯಕ ಇಯಾನ್ ಮೋರ್ಗನ್ ಹೆಸರು ಕೂಡ ಇರುವುದು ವಿಶೇಷ. ಹಾಗಿದ್ರೆ ಯಾವ ತಂಡ ನಾಯಕನ ಹುಡುಕಾಟದಲ್ಲಿದೆ ನೋಡೋಣ.

2 / 7
ಪಂಜಾಬ್ ಕಿಂಗ್ಸ್​: ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್​ ತಂಡದಿಂದ ಹೊರಬರುವುದು ಬಹುತೇಕ ಖಚಿತ. ಅತ್ತ ಪಂಜಾಬ್ ತಂಡ ಕೂಡ ರಾಹುಲ್ ಅಲಭ್ಯತೆಯ ನಡುವೆ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಅಷ್ಟೇ ಹೊಸ ನಾಯಕನ ಆಯ್ಕೆಯೊಂದಿಗೆ ನೂತನ ತಂಡ ಕಟ್ಟುವ ಇರಾದೆಯಲ್ಲಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಿನ ಸೀಸನ್​ನಲ್ಲಿ ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತ ಎನ್ನಬಹುದು.

3 / 7
ಕೊಲ್ಕತ್ತಾ ನೈಟ್​ ರೈಡರ್ಸ್​: ಕೆಕೆಆರ್ ತಂಡದ ನಾಯಕನಾಗಿ ಇಯಾನ್ ಮೋರ್ಗನ್ ಯಶಸ್ವಿಯಾಗಿದ್ದಾರೆ. ಆದರೆ ತಂಡದ ಪ್ರದರ್ಶನದಲ್ಲಿ ಅವರ ಕೊಡುಗೆಯಿಲ್ಲ ಎಂಬ ಟೀಕೆಗಳು ಕಳೆದ ಸೀಸನ್​ ವೇಳೆ ಜೋರಾಗಿ ಕೇಳಿ ಬಂದಿತ್ತು. ಅಂದರೆ ಕೆಕೆಆರ್ ತಂಡದಲ್ಲಿ ಮೋರ್ಗನ್ ಸಂಪೂರ್ಣ ವಿಫಲರಾಗಿರುವ ಕಾರಣ ಅವರನ್ನು ತಂಡದಿಂದ ಕೈಬಿಡುವುದು ಖಚಿತ. ಅದರಂತೆ ಕೆಕೆಆರ್ ತಂಡ ಕೂಡ ಮುಂದಿನ ಸೀಸನ್​ನಲ್ಲಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ.

4 / 7
 ರಾಯಲ್ ಚಾಲೆಂಜರ್ಸ್​ ಬೆಂಗಳೂರು: ಆರ್​ಸಿಬಿ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ತಂಡವು ಹೊಸ ನಾಯಕನ ಆಯ್ಕೆ ಮಾಡಲಿದೆ. ಅದರಂತೆ ಐಪಿಎಲ್​ ಸೀಸನ್​ 15ನಲ್ಲಿ ಆರ್​ಸಿಬಿ ತಂಡವನ್ನು ಹೊಸ ಕಪ್ತಾನ ಮುನ್ನಡೆಸಲಿದ್ದಾರೆ.

5 / 7
ಲಕ್ನೋ-ಅಹಮದಾಬಾದ್: ಮುಂದಿನ ಸೀಸನ್​ನಲ್ಲಿ ಹೊಸ ತಂಡಗಳಾಗಿ ಕಾಣಿಸಿಕೊಳ್ಳಲಿರುವ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿ ಕೂಡ ಹೊಸ ನಾಯಕನ ಆಯ್ಕೆ ಮಾಡಲಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ ಈ ಎರಡು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ನಾಯಕತ್ವ ಗುಣಗಳಿರುವ ಆಟಗಾರರನ್ನು ಆರಿಸಿಕೊಳ್ಳಲಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ನಾಯಕತ್ವ ಗುಣಗಳಿರುವ ಆಟಗಾರರಿಗಾಗಿ ಭರ್ಜರಿ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ.

6 / 7
ಇನ್ನುಳಿದಂತೆ ಸಿಎಸ್​ಕೆ ತಂಡವನ್ನು ಧೋನಿ, ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್, ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಕೇನ್ ವಿಲಿಯಮ್ಸನ್​ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ನಾಯಕರಾಗಿ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.

7 / 7

Follow us on

Most Read Stories

Click on your DTH Provider to Add TV9 Kannada