IPL 2022: ಅಹಮದಾಬಾದ್ ತಂಡಕ್ಕೆ ಯುವ ವಿಕೆಟ್ ಕೀಪರ್-ಬ್ಯಾಟರ್ ಆಯ್ಕೆ..?

| Updated By: ಝಾಹಿರ್ ಯೂಸುಫ್

Updated on: Jan 11, 2022 | 6:53 PM

IPL 2022 Ahmedabad Team: ಹೊಸ ಫ್ರಾಂಚೈಸಿಗಳು 33 ಕೋಟಿಯೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್​ ಫ್ರಾಂಚೈಸಿಗೆ ಬಿಸಿಸಿಐ ಸ್ಪೇಷಲ್ ಪಿಕ್ ಆಯ್ಕೆಯನ್ನು ನೀಡಿದೆ. ಅಂದರೆ ಹಳೆಯ 8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರಿಂದ ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಇರಲಿದೆ.

2 / 7
ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಮೂವರು ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ.

3 / 7
ಹೊಸ ಫ್ರಾಂಚೈಸಿಗಳು 33 ಕೋಟಿಯೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿಸಬೇಕಾಗುತ್ತದೆ. ಈ ಮೊತ್ತ ನೀಡಿ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು.

4 / 7
ಇದೀಗ ಈ ವಿಶೇಷ ಆಯ್ಕೆಯ ಮೂಲಕ ಅಹಮದಾಬಾದ್ ಫ್ರಾಂಚೈಸಿ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇನ್ನು ಎರಡನೇ ಆಯ್ಕೆಯಾಗಿ ಅಹಮದಾಬಾದ್ ಫ್ರಾಂಚೈಸಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಸಂಪರ್ಕಿಸಿದ್ದು, ಅಫ್ಘಾನ್ ಬೌಲರ್ ಹೊಸ ತಂಡದ ಪರ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.

5 / 7
ಅಂದರೆ ಅಹಮದಾಬಾದ್ ಒಬ್ಬ ಭಾರತೀಯ (ಹಾರ್ದಿಕ್ ಪಾಂಡ್ಯ) ಮತ್ತೊಮ್ಮ ವಿದೇಶಿ ಆಟಗಾರನನ್ನು  (ರಶೀದ್ ಖಾನ್) ಬಹುತೇಕ ಫೈನಲ್ ಮಾಡಿದೆ. ಇದೀಗ ಮೂರನೇ ಆಯ್ಕೆಯಾಗಿ ಭಾರತೀಯ ಆಟಗಾರನನ್ನು ಆಯ್ಕೆ ಮಾಡಬೇಕಿದೆ. ಈ ಪಟ್ಟಿಯಲ್ಲಿ ಇದೀಗ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಇಶಾನ್ ಕಿಶನ್ ಹೆಸರು ಮುಂಚೂಣಿಯಲ್ಲಿದೆ.

6 / 7
ಅಹಮದಾಬಾದ್ ತಂಡವು ಮೂರನೇ ಆಟಗಾರನಾಗಿ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿದ್ದು, ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಂದರೆ ಕಿಶನ್ ಅವರನ್ನು ಖರೀದಿಸುವ ಬಗ್ಗೆ ಅಹಮದಾಬಾದ್ ತಂಡವು ಆಸಕ್ತಿ ಹೊಂದಿದೆ. ಏಕೆಂದರೆ ಇಶಾನ್ ಕಿಶನ್ ವಿಕೆಟ್ ಕೀಪರ್ + ಓಪನರ್ ಆಗಿದ್ದು, ಹೀಗಾಗಿ ಒಂದು ಆಯ್ಕೆಯ ಮೂಲಕ ತಂಡ ವಿಕೆಟ್ ಕೀಪರ್ ಮತ್ತು ಆರಂಭಿಕನ ಆಯ್ಕೆಯನ್ನು ಸರಿದೂಗಿಸಬಹುದು.

7 / 7
ಹೀಗಾಗಿ ಅಹಮದಾಬಾದ್ ಫ್ರಾಂಚೈಸಿ ಇಶಾನ್ ಕಿಶನ್ ಜೊತೆ ಮಾತುಕತೆ ಮುಂದುವರೆಸಿದ್ದು, ಹೊಸ ಫ್ರಾಂಚೈಸಿಯ ಮಾತುಕತೆ ಫಲಪ್ರದವಾದರೆ ಮೆಗಾ ಹರಾಜಿಗೂ ಮುನ್ನ ಯುವ ಆಟಗಾರ ಹೊಸ ತಂಡದ ಪಾಲಾಗಲಿದ್ದಾರೆ.