- Kannada News Photo gallery Cricket photos IND vs SA Virat Kohli becomes second Indian leading run scorer in South Africa overtakes rahul Dravid
IND vs SA: ಹರಿಣಗಳ ನಾಡಲ್ಲಿ ಗುರು ದ್ರಾವಿಡ್ ದಾಖಲೆ ಮುರಿದ ಕಿಂಗ್ ಕೊಹ್ಲಿ! ಮುಂದಿನ ಟಾರ್ಗೆಟ್ ಸಚಿನ್?
IND vs SA: ಕೊಹ್ಲಿ ಕೇಪ್ ಟೌನ್‌ನಲ್ಲಿ 14 ರನ್ ಗಳಿಸಿದ ತಕ್ಷಣ, ದಕ್ಷಿಣ ಆಫ್ರಿಕಾದಲ್ಲಿ ಅವರ ರನ್‌ಗಳ ಸಂಖ್ಯೆ 625 ಕ್ಕೆ ಏರಿತು. ಈ ಮೂಲಕ ಗುರು ದ್ರಾವಿಡ್ ದಾಖಲೆ ಮುರಿದರು. ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ 29.7 ಸರಾಸರಿಯಲ್ಲಿ 611 ರನ್ ಗಳಿಸಿದ್ದಾರೆ .
Updated on: Jan 11, 2022 | 5:25 PM

ಟೀಂ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಇಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ದಿ ವಾಲ್ ಎಂದೇ ಖ್ಯಾತರಾಗಿರುವ ದ್ರಾವಿಡ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೇಪ್ ಟೌನ್‌ನಲ್ಲಿ ತಂಡದೊಂದಿಗೆ ದ್ರಾವಿಡ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದಹಾಗೆ, ಹುಟ್ಟುಹಬ್ಬದ ದಿನವೇ ನಾಯಕ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ಗೆ ಅದ್ಭುತ 'ಉಡುಗೊರೆ' ನೀಡಿದ್ದಾರೆ.

ವಾಸ್ತವವಾಗಿ, ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಕೇಪ್ ಟೌನ್‌ನಲ್ಲಿ 14 ರನ್ ಗಳಿಸಿದ ತಕ್ಷಣ, ದಕ್ಷಿಣ ಆಫ್ರಿಕಾದಲ್ಲಿ ಅವರ ರನ್‌ಗಳ ಸಂಖ್ಯೆ 625 ಕ್ಕೆ ಏರಿತು. ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ 29.7 ಸರಾಸರಿಯಲ್ಲಿ 611 ರನ್ ಗಳಿಸಿದ್ದಾರೆ .

ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇವರು 46.4ರ ಸರಾಸರಿಯಲ್ಲಿ 1161 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಹಿಂದೆಯೇ ಇದ್ದಾರೆ, ಆದಾಗ್ಯೂ ಈ ಬ್ಯಾಟ್ಸ್‌ಮನ್ ಫಾರ್ಮ್ನಲ್ಲಿದ್ದರೆ, ಬಹುಶಃ ಸಚಿನ್ ಅವರ ದಾಖಲೆಯನ್ನು ಸಹ ಮುರಿಯಬಹುದು.

ದಕ್ಷಿಣ ಆಫ್ರಿಕಾದಲ್ಲಿ 50 ಕ್ಕಿಂತ ಹೆಚ್ಚು ಟೆಸ್ಟ್ ಸರಾಸರಿ ಹೊಂದಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಇದರೊಂದಿಗೆ ಅವರು ದಕ್ಷಿಣ ಆಫ್ರಿಕಾದಲ್ಲಿ 2 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮಾದರಿಯಲ್ಲೂ ಸಾಕಷ್ಟು ರನ್ ಗಳಿಸಿದ್ದಾರೆ. ವಿರಾಟ್ 13 ODI ಇನ್ನಿಂಗ್ಸ್‌ಗಳಲ್ಲಿ 86.88 ಸರಾಸರಿಯಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳನ್ನು ಒಳಗೊಂಡಂತೆ 782 ರನ್ ಗಳಿಸಿದ್ದಾರೆ.




