ಅಹಮದಾಬಾದ್ ತಂಡವು ಮೂರನೇ ಆಟಗಾರನಾಗಿ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿದ್ದು, ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಂದರೆ ಕಿಶನ್ ಅವರನ್ನು ಖರೀದಿಸುವ ಬಗ್ಗೆ ಅಹಮದಾಬಾದ್ ತಂಡವು ಆಸಕ್ತಿ ಹೊಂದಿದೆ. ಏಕೆಂದರೆ ಇಶಾನ್ ಕಿಶನ್ ವಿಕೆಟ್ ಕೀಪರ್ + ಓಪನರ್ ಆಗಿದ್ದು, ಹೀಗಾಗಿ ಒಂದು ಆಯ್ಕೆಯ ಮೂಲಕ ತಂಡ ವಿಕೆಟ್ ಕೀಪರ್ ಮತ್ತು ಆರಂಭಿಕನ ಆಯ್ಕೆಯನ್ನು ಸರಿದೂಗಿಸಬಹುದು.