
ಐಪಿಎಲ್ ಮೆಗಾ ಹರಾಜಿಗಾಗಿ ಭರ್ಜರಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯುವ ಮೆಗಾ ಹರಾಜಿನಲ್ಲಿ CSK, DC, MI, RCB, SRH, PBKS, RR, KKR, LSG (ಲಕ್ನೋ ಸೂಪರ್ ಜೈಂಟ್ಸ್ ) ಮತ್ತು GT (ಗುಜರಾತ್ ಟೈಟನ್ಸ್) ತಂಡಗಳು ಬಿಡ್ಡಿಂಗ್ ನಡೆಸಲಿದೆ.

ಈ ತಂಡಗಳು ಈಗಾಗಲೇ ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಎಲ್ಲಾ ತಂಡಗಳ ಪಟ್ಟು ಹರಾಜು ಮೊತ್ತ ಇರುವುದು 556.3 ಕೋಟಿ ರೂ. ಈ ಮೊತ್ತದಲ್ಲಿ ಒಟ್ಟು 217 ಆಟಗಾರರನ್ನು ಖರೀದಿಸಬಹುದು. ವಿಶೇಷ ಎಂದರೆ ಇಲ್ಲಿ ಒಂದು ತಂಡವು ಕನಿಷ್ಠ 18 ಆಟಗಾರರನ್ನು ಖರೀದಿಸಬೇಕು. ಗರಿಷ್ಠ 25 ಆಟಗಾರರು ಮಾತ್ರ ಒಂದು ತಂಡದಲ್ಲಿರಬೇಕು.

ಅದರಂತೆ 217 ಆಟಗಾರರಿಗೂ ಅವಕಾಶ ಸಿಗಲಿದೆ ಎಂದೇಳಲಾಗುವುದಿಲ್ಲ. ಏಕೆಂದರೆ ಕೆಲ ತಂಡಗಳು ತನ್ನೆಲ್ಲಾ ಮೊತ್ತವನ್ನು ವ್ಯಯಿಸಿ 20 ಆಟಗಾರರನ್ನು ಖರೀದಿಸಬಹುದು. ಅಥವಾ 18 ಆಟಗಾರರಿಗೆ ದೊಡ್ಡ ಮೊತ್ತ ನೀಡಿ ತಂಡ ಕಟ್ಟಬಹುದು. ಉದಾಹರಣೆಗೆ ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿ ಕೇವಲ 22 ಆಟಗಾರರು ಮಾತ್ರ ಇದ್ದರು. ಇಲ್ಲಿ ಗರಿಷ್ಠ 25 ಆಟಗಾರರನ್ನು ಖರೀದಿಸುವ ಅವಕಾಶವಿದ್ದರೂ ಅದಾಗಲೇ 22 ಆಟಗಾರರನ್ನು ಖರೀದಿಸುವ ವೇಳೆಗೆ ಆರ್ಸಿಬಿ ತನ್ನೆಲ್ಲಾ ಮೊತ್ತವನ್ನು ವ್ಯಯಿಸಿತ್ತು.

ಹೀಗಾಗಿ 217 ಸ್ಥಾನಗಳಿದ್ದರೂ ಅಷ್ಟೇ ಸಂಖ್ಯೆಯ ಆಟಗಾರರಿಗೆ ಅವಕಾಶ ಸಿಗಲಿದೆ ಎನ್ನಲಾಗುವುದಿಲ್ಲ. ಮೆಗಾ ಹರಾಜಿನಲ್ಲಿ ನಡೆಯುವ ಫ್ರಾಂಚೈಸಿಗಳ ಪೈಪೋಟಿಯಂತೆ ಆಟಗಾರರಿಗೆ ಚಾನ್ಸ್ ಸಿಗಲಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿನ ಮೂಲಕ ಯಾರಿಗೆ ಅವಕಾಶ ಸಿಗಲಿದೆ, ಯಾರಿಗೆ ಚಾನ್ಸ್ ಕೈತಪ್ಪಲಿದೆ ಕಾದು ನೋಡಬೇಕಿದೆ.

ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ನೇರ ಪ್ರಸಾರ ಬೆಳಿಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಇರಲಿದೆ. ಹಾಗೆಯೇ 12 ಗಂಟೆಯಿಂದ ಮೆಗಾ ಹರಾಜು ಪ್ರಕ್ರಿಯೆ ಶುರುವಾಗಲಿದೆ.