IPL 2022: 5 ವಿದೇಶಿ ವಿಕೆಟ್​ ಕೀಪರ್​ಗಳ ಮೇಲೆ ಫ್ರಾಂಚೈಸಿಗಳ ಕಣ್ಣು

| Updated By: ಝಾಹಿರ್ ಯೂಸುಫ್

Updated on: Dec 19, 2021 | 9:53 PM

IPL 2022 Mega Auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸ್ಟಾರ್ ವಿದೇಶಿ ವಿಕೆಟ್ ಕೀಪರ್​ಗಳು ಯಾರೆಲ್ಲಾ ಎಂದು ನೋಡುವುದಾದರೆ...(ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

1 / 7
ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್​ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿದೆ. ಈಗಾಗಲೇ ಬಹುತೇಕ ತಂಡಗಳು ಸ್ಟಾರ್​ ಆಟಗಾರರ ಖರೀದಿಗಾಗಿ ಪ್ಲ್ಯಾನ್ ರೂಪಿಸಿದೆ. ಅದರಲ್ಲೂ ವಿದೇಶಿ ವಿಕೆಟ್ ಕೀಪರ್ ಬ್ಯಾಟರ್​ಗಳ ಖರೀದಿಗಾಗಿ ಈ ಬಾರಿ ಭಾರೀ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ.

2 / 7
ಏಕೆಂದರೆ ಈ ಹಿಂದಿನಿಂದಲೂ ಐಪಿಎಲ್​ ತಂಡಗಳ ಮೊದಲ ಆಯ್ಕೆ ಓಪನರ್​+ವಿಕೆಟ್ ಕೀಪರ್​ ಬ್ಯಾಟರ್​ಗಳು. ಹೀಗಾಗಿಯೇ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕ್ವಿಂಟನ್ ಡಿಕಾಕ್, ಎಸ್​ಆರ್​ಹೆಚ್​ ತಂಡದಲ್ಲಿ ಜಾನಿ ಬೈರ್​ಸ್ಟೋ ಅವರಂತಹ ಆಟಗಾರರು ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕೂಡ ವಿದೇಶಿ ವಿಕೆಟ್ ಕೀಪರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿಸಲಿದೆ. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸ್ಟಾರ್ ವಿದೇಶಿ ವಿಕೆಟ್ ಕೀಪರ್​ಗಳು ಯಾರೆಲ್ಲಾ ಎಂದು ನೋಡುವುದಾದರೆ...

3 / 7
ಕ್ವಿಂಟನ್ ಡಿ ಕಾಕ್: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಸ್ಫೋಟಕ ಬ್ಯಾಟರ್ ಎಂಬುದು ಗೊತ್ತಿರುವ ವಿಷಯ. ಅದರಲ್ಲೂ ಮುಂಬೈ ಇಂಡಿಯನ್ಸ್​ ಪರ ಕಳೆದ 3 ಸೀಸನ್‌ಗಳಲ್ಲಿ ಕ್ರಮವಾಗಿ 529, 503 ಮತ್ತು 297 ರನ್‌ ಗಳಿಸಿದ್ದಾರೆ. ಇನ್ನು ಐಪಿಎಲ್​ನಲ್ಲಿ 2200+ ರನ್ ಕಲೆಹಾಕಿದ್ದಾರೆ.  ಅಷ್ಟೇ ಅಲ್ಲದೆ ಸ್ಟಂಪ್‌ಗಳ ಹಿಂದೆ 50 ಕ್ಯಾಚ್‌ಗಳು ಮತ್ತು 14 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅಂದರೆ ಐಪಿಎಲ್​ನಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ (67 ಔಟ್) ನಂತರ ಐಪಿಎಲ್ ಅತ್ಯಂತ ಯಶಸ್ವಿ ವಿಕೆಟ್​ ಆಗಿ ಡಿಕಾಕ್ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ಕ್ವಿಂಟನ್ ಡಿಕಾಕ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬರಲಿದೆ.

4 / 7
 ಜಾನಿ ಬೈರ್​ಸ್ಟೋವ್: ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟರ್. ಎಸ್​ಆರ್​ಹೆಚ್​ ಪರ ಆರಂಭಿಕನಾಗಿ ಸ್ಪೋಟಕ ಆರಂಭ ಒದಗಿಸುವ ಬೈರ್​​ಸ್ಟೋವ್ ಐಪಿಎಲ್​ನಲ್ಲಿ ಶತಕದ ಸಿಡಿಸಿ ವಿದೇಶಿ ಆಟಗಾರರಲ್ಲಿ ಒಬ್ಬರು. ಕಳೆದ ಮೂರು ಸೀಸನ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಮೆಗಾ ಹರಾಜಿನಲ್ಲಿ ಬೈರ್​ಸ್ಟೋವ್ ಖರೀದಿಗೆ ಪೈಪೋಟಿ ಕಂಡು ಬರಲಿದೆ.

5 / 7
ಮ್ಯಾಥ್ಯೂ ವೇಡ್: ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ 2011 ರಲ್ಲಿ ಐಪಿಎಲ್ ಆಡಿದ್ದರು. ಇದಾದ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳದಿದ್ದರೂ, ಈ ಬಾರಿಯಂತು ಅವರ ಹೆಸರು ಮುಂಚೂಣಿಯಲ್ಲಿರಲಿದೆ. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಸತತ ಮೂರು ಸಿಕ್ಸರ್‌ಗಳ ತಾನೆಂತಹ ಸ್ಪೋಟಕ ಬ್ಯಾಟರ್ ಎಂಬುದನ್ನು ವೇಡ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಹೊಂದಿರುವ ವೇಡ್ ಅವರ ಖರೀದಿಗೆ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿ ತೋರಲಿದೆ.

6 / 7
ಅಲೆಕ್ಸ್ ಕ್ಯಾರಿ: ಆಸ್ಟ್ರೇಲಿಯಾದ ಮತ್ತೊಬ್ಬ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಕಳೆದ ಕೆಲ ತಿಂಗಳಿಂದ ಆಸ್ಟ್ರೇಲಿಯಾ ಮತ್ತು ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರೂ ಕೀಪರ್ ಆಗಿ ರಿಷಭ್ ಪಂತ್ ಇದ್ದ ಕಾರಣ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಹೀಗಾಗಿ ಈ ಬಾರಿ ಹೊಸ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

7 / 7
 ಡೆವೊನ್ ಕಾನ್ವೇ: ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಹೆಸರು ನೀಡಿರಲಿಲ್ಲ. ಈ ಬಾರಿ ಕಾನ್ವೇ ಹೆಸರು ಆರಂಭದಲ್ಲೇ ಕೇಳಿ ಬರುತ್ತಿದೆ. ಏಕೆಂದರೆ ನ್ಯೂಜಿಲೆಂಡ್ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾನ್ವೇ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ 3600 ಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ. ಹೀಗಾಗಿ ಈ ಬಾರಿ ಡೆವೊನ್ ಕಾನ್ವೇ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮೆಗಾ ಹರಾಜಿನಲ್ಲಿ ಹಾಟ್ ಫೇವರೇಟ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.