IPL 2022 Auction: ಮೆಗಾ ಹರಾಜಿನಲ್ಲಿ ಮಾಜಿ ಆರ್ಸಿಬಿ ಆಟಗಾರರನ್ನು ಖರೀದಿಸುವ ಪ್ಲಾನ್ನಲ್ಲಿದೆ ಹೈದರಾಬಾದ್
TV9 Web | Updated By: ಪೃಥ್ವಿಶಂಕರ
Updated on:
Dec 02, 2021 | 7:32 PM
IPL 2022 Auction: SRH IPL 2022 ಗಾಗಿ ಆರಂಭಿಕ ಆಟಗಾರನನ್ನು ಹುಡುಕುತ್ತಿದೆ. ಮತ್ತು, IPL ಪಿಚ್‌ನಲ್ಲಿ RCB ಗಾಗಿ ಇದುವರೆಗೆ ಸಾಕಷ್ಟು ಸ್ಕೋರ್ ಮಾಡಿದ ದೇವದತ್ ಪಡಿಕ್ಕಲ್ ಅವರ ಹುಡುಕಾಟವನ್ನು ಕೊನೆಗೊಳ್ಳಿಸಬಹುದು.
1 / 6
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2022 ಕ್ಕೆ 3 ಆಟಗಾರರನ್ನು ಉಳಿಸಿಕೊಂಡಿದೆ. ಅವರಲ್ಲಿ ಒಬ್ಬರು ಕೇನ್ ವಿಲಿಯಮ್ಸನ್. ಅವರು ನಾಯಕತ್ವವಹಿಸಿಕೊಳ್ಳುವುದು ಫಿಕ್ಸ್. ಜೊತೆಗೆ ಬಲಿಷ್ಠ ತಂಡ ಕಟ್ಟಲು ಹೈದರಾಬಾದ್ ಮುಂದಾಗಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ SRH ತಂಡ ಯಾವ ಆಟಗಾರರನ್ನು ಖರೀದಿಸಲು ಮುಂದಾಗಬಹುದು ಎಂಬುದನ್ನು ನೋಡೋಣ.
2 / 6
ಶ್ರೇಯಸ್ ಅಯ್ಯರ್: IPL 2022 ರ ಹರಾಜಿನಲ್ಲಿ, ಇದು ಪ್ರತಿ ತಂಡವು ಗಮನಹರಿಸುವ ಹೆಸರಾಗಿರುತ್ತದೆ. SRH ನಲ್ಲಿ ಅಯ್ಯರ್ ಅವರನ್ನು ಖರೀದಿಸುವ ಚಡಪಡಿಕೆಯು ಅವರ ಬ್ಯಾಟಿಂಗ್ ಅನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
3 / 6
KL ರಾಹುಲ್: ಪಂಜಾಬ್‌ನಿಂದ ದೂರ ಉಳಿದಿರುವ ರಾಹುಲ್ ಮುಂದಿನ ಋತುವಿನಲ್ಲಿ ಹೈದರಾಬಾದ್‌ನಿಂದ ಆಡುವುದನ್ನು ಕಾಣಬಹುದು. ಸನ್‌ರೈಸರ್ಸ್ ತಂಡ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ಮೂಲಕ ಆರಂಭಿಕರನ್ನು ಬಲಪಡಿಸಲು ಬಯಸುತ್ತದೆ.
4 / 6
ದೇವದತ್ ಪಡಿಕ್ಕಲ್: SRH IPL 2022 ಗಾಗಿ ಆರಂಭಿಕ ಆಟಗಾರನನ್ನು ಹುಡುಕುತ್ತಿದೆ. ಮತ್ತು, IPL ಪಿಚ್‌ನಲ್ಲಿ RCB ಗಾಗಿ ಇದುವರೆಗೆ ಸಾಕಷ್ಟು ಸ್ಕೋರ್ ಮಾಡಿದ ದೇವದತ್ ಪಡಿಕ್ಕಲ್ ಅವರ ಹುಡುಕಾಟವನ್ನು ಕೊನೆಗೊಳ್ಳಿಸಬಹುದು.
5 / 6
ಯುಜ್ವೇಂದ್ರ ಚಾಹಲ್: ಆರೆಂಜ್ ಆರ್ಮಿಯು ಯುಜ್ವೇಂದ್ರ ಚಾಹಲ್ ಮೇಲೆ ಕಣ್ಣಿಟ್ಟಿದೆ. ಚಾಹಲ್ ಅವರ ಶಕ್ತಿ ಎಂದರೆ ಅವರ ವಿಕೆಟ್ ತೆಗೆದುಕೊಳ್ಳುವ ಕೌಶಲ್ಯ. ರಶೀದ್ ತಂಡದಿಂದ ಹೊರ ನಡೆದಿರುವುದರಿಂದ ಅವರ ಜಾಗಕ್ಕೆ ಚಾಹಲ್ ತರಲು SRH ತಂಡ ಪ್ರಯತ್ನಿಸಬಹುದು.
6 / 6
ಆರ್. ಅಶ್ವಿನ್: ಸನ್‌ರೈಸರ್ಸ್ ಹೈದರಾಬಾದ್‌ಗೆ ಬೌಲಿಂಗ್‌ನಲ್ಲಿ ಅಶ್ವಿನ್ ಉತ್ತಮ ಆಯ್ಕೆಯಾಗಿರಬಹುದು. ಟಿ20ಯಲ್ಲಿ ಅಶ್ವಿನ್ ಅವರ ಇತ್ತೀಚಿನ ಫಾರ್ಮ್ ಕೂಡ ಅದ್ಭುತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ರಶೀದ್ ಖಾನ್‌ಗೆ ಪರ್ಯಾಯವಾಗಿ ಅಶ್ವಿನ್ ಕೈ ಹಿಡಿಯಲು ಎಸ್‌ಆರ್‌ಹೆಚ್ ಪ್ರಯತ್ನಿಸಬಹುದು.