ಐಪಿಎಲ್-2022ಕ್ಕೆ ತಯಾರಿ ಆರಂಭವಾಗಿದೆ. ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಫ್ರಾಂಚೈಸಿಗಳ ಕಣ್ಣೆಲ್ಲ ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನತ್ತ ನೆಟ್ಟಿದೆ. ಫ್ರಾಂಚೈಸಿಗಳು ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದವು. ಆದ್ದರಿಂದ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಕೈಬಿಡಬೇಕಾಯಿತು. ಈಗ ಹರಾಜಿನಲ್ಲಿ, ತಂಡಗಳು ತಮ್ಮ ಹಳೆಯ ಆಟಗಾರರನ್ನು ಖರೀದಿಸಲು ಪ್ರಯತ್ನಿಸುತ್ತವೆ ಮತ್ತು ಕೆಲವು ಹೊಸ ಆಟಗಾರರ ಮೇಲೆಯೂ ಬಾಜಿ ಮಾಡಬಹುದು. ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಉಳಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ನಿರ್ಧರಿಸಿದೆ. ರಾಜಸ್ಥಾನ ತಂಡವು ಹರಾಜಿನಲ್ಲಿ ಬಾಜಿ ಕಟ್ಟುವ ಆಟಗಾರರ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.