IPL 2022: RCB ಅಲ್ಲ, ಐಪಿಎಲ್ನಲ್ಲಿ ಆಡಲು ಇಚ್ಚಿಸುವ ತಂಡ ಬಹಿರಂಗಪಡಿಸಿದ ಹರ್ಷಲ್ ಪಟೇಲ್
TV9 Web | Updated By: ಝಾಹಿರ್ ಯೂಸುಫ್
Updated on:
Jan 27, 2022 | 4:08 PM
IPL 2022: ಈ ಬಾರಿ ಆರ್ಸಿಬಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಆರ್ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು 27 ಆಟಗಾರರನ್ನು ಉಳಿಸಿಕೊಂಡರೆ, ಹೊಸ ಎರಡು ಫ್ರಾಂಚೈಸಿಗಳು ಆರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ.
2 / 6
ಇನ್ನು ಈ ಬಾರಿ ಆರ್ಸಿಬಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಆರ್ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕಳೆದ ಸೀಸನ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದ ಹರ್ಷಲ್ ಪಟೇಲ್ (32 ವಿಕೆಟ್) ರನ್ನು ಆರ್ಸಿಬಿ ರಿಲೀಸ್ ಮಾಡಿತ್ತು.
3 / 6
ಇದೀಗ ಮೆಗಾ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಯೊಂದಿಗೆ ಹರ್ಷಲ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಮುಂದಿನ ಸೀಸನ್ನಲ್ಲಿ ಹರ್ಷಲ್ ಪಟೇಲ್ ಅವರನ್ನು ಯಾರು ಖರೀದಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಖುದ್ದು ಮಾಜಿ ಆರ್ಸಿಬಿ ವೇಗಿಯೇ ಉತ್ತರಿಸಿದ್ದಾರೆ.
4 / 6
ಸಂದರ್ಶನವೊಂದರಲ್ಲಿ ಮಾತನಾಡಿದ ಹರ್ಷಲ್ ಪಟೇಲ್ ಮುಂದಿನ ಸೀಸನ್ನಲ್ಲಿ ಯಾವ ತಂಡದ ಪರ ಆಡಬೇಕೆಂದನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಸೀಸನ್ 15 ನಲ್ಲಿ ಯಾವ ತಂಡದ ಭಾಗವಾಗಲು ಬಯಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು.
5 / 6
ಈ ಪ್ರಶ್ನೆಗೆ ಉತ್ತರಿಸಿದ ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ಎಂಬ ಉತ್ತರ ನೀಡಿದರು. ನಾನು ಮುಂದಿನ ಸೀಸನ್ನಲ್ಲಿ ಸಿಎಸ್ಕೆ ಪರ ಆಡಲು ಬಯಸುತ್ತೇನೆ ಎಂದರು. ಅಷ್ಟೇ ಅಲ್ಲದೆ, ನಿಮ್ಮ ಅಭಿಪ್ರಾಯದಲ್ಲಿ ಉತ್ತಮ ನಾಯಕ ಯಾರು ಎಂದು ಪ್ರಶ್ನಿಸಿದಾಗ, ಯಾವುದೇ ಹಿಂಜರಿಕೆಯಿಲ್ಲದೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಹೆಸರನ್ನು ಹೇಳಿದರು. ಈ ಮೂಲಕ ಮುಂದಿನ ಸೀಸನ್ನಲ್ಲಿ ಧೋನಿ ನಾಯಕತ್ವದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದರು.
6 / 6
ಐಪಿಎಲ್ ಮೆಗಾ ಹರಾಜು ಮುಂದಿನ ತಿಂಗಳು 12 ಮತ್ತು 13 ರಂದು ನಡೆಯಲಿದೆ. ಈ ಹರಾಜಿನಲ್ಲಿ ಈ ಬಾರಿ 10 ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಲಿದ್ದು, ಇದೇ ವೇಳೆ ಸಿಎಸ್ಕೆ ತಂಡವು ಹರ್ಷಲ್ ಪಟೇಲ್ ಅವರನ್ನು ಖರೀದಿಸುತ್ತಾ ಕಾದು ನೋಡಬೇಕಿದೆ.