Vivian Kingma: ಕಳ್ಳಾಟ ಆಡಿ ಸಿಕ್ಕಿಬಿದ್ದ ಬೌಲರ್​ಗೆ 4 ಪಂದ್ಯಗಳ ನಿಷೇಧ..!

Vivian Kingma ball-tampering: ಚೆಂಡು ವಿರೂಪಗೊಳಿಸಿದ ತಪ್ಪನ್ನು ಕಿಂಗ್ಮಾ ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫರಿ ಅವರನ್ನು ನಾಲ್ಕು ಪಂದ್ಯಗಳಿಗೆ ನಿಷೇಧಿಸಿದ್ದಾರೆ. ಅಷ್ಟೇ ಅಲ್ಲದೆ ಕಿಂಗ್ಮಾಗೆ ಐದು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

Jan 26, 2022 | 7:24 PM
TV9kannada Web Team

| Edited By: Zahir PY

Jan 26, 2022 | 7:24 PM

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ಕಳ್ಳಾಟ ತೀರಾ ವಿರಳ. ಅದರಲ್ಲೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್​ ವಿರೂಪಗೊಳಿಸಿ ಸಿಕ್ಕಿಬಿದ್ದ ಬಳಿಕ ಒಂದು ವರ್ಷ ನಿಷೇಧ ಹೇರಲಾಗಿತ್ತು. ಇದರ ಬಳಿಕ ಇಂತಹ ಕಳ್ಳಾಟದಿಂದ ಆಟಗಾರರು ಕೂಡ ದೂರ ಉಳಿದಿದ್ದರು. ಆದರೀಗ ಅಂತಹದ್ದೇ ಕಳ್ಳಾಟವಾಡಲು ಮುಂದಾಗಿ ನೆದರ್ಲೆಂಡ್ಸ್​ ಬೌಲರ್ ವಿವಿಯನ್ ಕಿಂಗ್ಮಾ ಸಿಕ್ಕಿಬಿದ್ದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಿಂಗ್ಮಾ ಬಾಲ್ ಟ್ಯಾಂಪರಿಂಗ್ ಮಾಡಿದ್ದರು.

1 / 5
ದೋಹಾದಲ್ಲಿ ನಡೆದ ಈ ಪಂದ್ಯದಲ್ಲಿ ವಿವಿಯನ್ 31ನೇ ಓವರ್‌ನಲ್ಲಿ ಬಾಲ್ ಟ್ಯಾಂಪರ್ ಮಾಡಿದ್ದಾರೆ. ಇದು ರೆಫರಿ ಗಮನಕ್ಕೆ ಬಂದಿದ್ದು, ಹೀಗಾಗಿ ದೂರು ನೀಡಲಾಗಿತ್ತು. ಅದರಂತೆ ಇದೀಗ ವಿವಿಯನ್ ಕಿಂಗ್ಮಾಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ.

2 / 5
ಐಸಿಸಿ ನಿಯಮ 2.14 ರ ಅಡಿಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಿಂಗ್ಮಾ ತಪ್ಪಿತಸ್ಥರೆಂದು ದೃಢಪಟ್ಟಿದೆ. ಚೆಂಡು ವಿರೂಪಗೊಳಿಸಿದ ತಪ್ಪನ್ನು ಕಿಂಗ್ಮಾ ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫರಿ ಅವರನ್ನು ನಾಲ್ಕು ಪಂದ್ಯಗಳಿಗೆ ನಿಷೇಧಿಸಿದ್ದಾರೆ. ಅಷ್ಟೇ ಅಲ್ಲದೆ ಕಿಂಗ್ಮಾಗೆ ಐದು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

3 / 5
ಇನ್ನು ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 254 ರನ್ ಗಳಿಸಿತು. ಉತ್ತರವಾಗಿ ನೆದರ್ಲೆಂಡ್ಸ್ 179 ರನ್‌ಗಳಿಗೆ ಆಲೌಟ್ ಆಗಿ, 75 ರನ್‌ಗಳಿಂದ ಸೋಲೋಪ್ಪಿಕೊಂಡಿತು. ಈ  ಪಂದ್ಯದಲ್ಲಿ ವಿವಿಯನ್ ಕಿಂಗ್ಮಾ 10 ಓವರ್‌ಗಳಲ್ಲಿ 50 ರನ್‌ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ನೆದರ್​​ಲೆಂಡ್ಸ್​ ವಿರುದ್ದದ ಏಕದಿನ ಪಂದ್ಯವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

4 / 5
ವಿವಿಯನ್ ಕಿಂಗ್ಮಾ ನೆದರ್ಲೆಂಡ್ಸ್‌ ಪರವಾಗಿ 10 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.  ಏಕದಿನದಲ್ಲಿ 12 ವಿಕೆಟ್​ಗಳನ್ನು ಪಡೆದರೆ, ಟಿ20ಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.  ಇದೀಗ ನಾಲ್ಕು ಪಂದ್ಯಗಳಲ್ಲಿ ನಿಷೇಧಕ್ಕೊಳಗಾಗಿರುವ ವಿವಿಯನ್ ಕಿಂಗ್ಮಾ ಮುಂದಿನ ದಿನಗಳಲ್ಲಿ ಕಂಬ್ಯಾಕ್ ಮಾಡಲಿದ್ದಾರಾ ಕಾದು ನೋಡಬೇಕಿದೆ.

5 / 5

Follow us on

Most Read Stories

Click on your DTH Provider to Add TV9 Kannada