
ಟೀಮ್ ಇಂಡಿಯಾದ ಒಪ್ಪಂದ ಹೊಂದಿರುವ ಗಾಯಗೊಂಡ ಆಟಗಾರರಿಗೆ ಈ ಬಾರಿ ಫಿಟ್ನೆಸ್ ಟೆಸ್ಟ್ ಅನ್ನು ಬಿಸಿಸಿಐ ಕಡ್ಡಾಯ ಮಾಡಿದೆ. ಅದರಂತೆ ಐಪಿಎಲ್ನಲ್ಲಿ ಭಾಗವಹಿಸುವ ಮುನ್ನ ಗಾಯಗೊಂಡಿರುವ ಆಟಗಾರರ ಯೋಯೋ ಟೆಸ್ಟ್ನಲ್ಲಿ ಪಾಸಾಗಬೇಕು. ಅದರಂತೆ ಇದೀಗ ಹಾರ್ದಿಕ್ ಪಾಂಡ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ನಲ್ಲಿ ಪಾಲ್ಗೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಯೋ ಯೋ ಟೆಸ್ಡ್ನಲ್ಲಿ ಭಾಗವಹಿಸಿದ್ದು, ಈ ವೇಳೆ 8.15 ನಿಮಿಷದಲ್ಲಿ 2 ಕಿಮೀ ಓಡುವ ಟಾಸ್ಕ್ ನಿಡಲಾಗಿತ್ತು ಎಂದು ತಿಳಿದು ಬಂದಿದೆ. ಇದರಲ್ಲಿ ಹಾರ್ದಿಕ್ ಪಾಂಡ್ಯ ಸಕ್ಸಸ್ ಆಗಿದ್ದಾರೆ. ಇನ್ನು ಬೌಲಿಂಗ್ ಮಾಡದ ಕಾರಣ ಹಾರ್ದಿಕ್ ಪಾಂಡ್ಯರನ್ನು ಈ ಹಿಂದೆ ಬಿಸಿಸಿಐ ಆಲ್ರೌಂಡರ್ಗಳ ಪಟ್ಟಿಯಿಂದ ಕೈಬಿಟ್ಟಿದ್ದರು.

ಹೀಗಾಗಿ ಬೌಲಿಂಗ್ ಟೆಸ್ಟ್ ಕೂಡ ನಡೆಸಲಾಗಿತ್ತು. ಅದರಂತೆ ಒಟ್ಟು 10 ಓವರ್ಗಳನ್ನು ಬೌಲಿಂಗ್ ಮಾಡಿಸಲಾಗಿದೆ. ಈ ವೇಳೆ ಯಾವುದೇ ತೊಂದರೆಯಿಲ್ಲದೆ ಪಾಂಡ್ಯ 10 ಓವರ್ ಬೌಲ್ ಮಾಡಿದ್ದಾರೆ. ಇದರ ಜೊತೆಗೆ ಇನ್ನಿತರ ಫಿಟ್ನೆಸ್ ಪರೀಕ್ಷೆಯಲ್ಲೂ ಪಾಂಡ್ಯ ಉತ್ತೀರ್ಣರಾಗಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಯೋ ಯೋ ಟೆಸ್ಟ್ನಲ್ಲಿ 16.5 ಸ್ಕೋರ್ ಮಾಡುವ ಮೂಲಕ ಫಿಟ್ನೆಸ್ ಟೆಸ್ಟ್ ಪಾಸ್ ಆಗಿದ್ದಾರೆ.

ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಭಾಗವಹಿಸಲು ಹಾರ್ದಿಕ್ ಪಾಂಡ್ಯಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದರಂತೆ ಈ ಸಲ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ ಸೀಸನ್ 15 ಗಾಗಿ ಗುಜರಾತ್ ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ಬಿ ಸಾಯಿ ಸುದರ್ಶನ್.