IPL 2022: ಐಪಿಎಲ್ ಮೆಗಾ ಹರಾಜು ಯಾವಾಗ? ಇಲ್ಲಿದೆ ಉತ್ತರ

| Updated By: ಝಾಹಿರ್ ಯೂಸುಫ್

Updated on: Nov 23, 2021 | 10:31 PM

IPL 2022 Mega Auction Date: ಫ್ರಾಂಚೈಸಿ ಬಯಸಿದರೆ ನಾಲ್ವರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇನ್ನು ಇಲ್ಲಿ ಮೂವರು ಅಥವಾ ಇಬ್ಬರು ಹಾಗೆಯೇ ಒಬ್ಬರನ್ನು ಕೂಡ ಉಳಿಸಿಕೊಳ್ಳುವ ಆಯ್ಕೆ ಕೂಡ ಇರಲಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಮೆಗಾ ಹರಾಜು ರಿಟೈನ್ ನಿಯಮದಂತೆ ಈ ಬಾರಿ ನಾಲ್ಕು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶ ಇರಲಿದೆ. ಅಂದರೆ ಹರಾಜಿಗೂ ಮುನ್ನ ಪ್ರಸ್ತುತ ಇರುವ 8 ತಂಡಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇರಲಿದೆ.

2 / 5
ಅದರಂತೆ ಫ್ರಾಂಚೈಸಿ ಬಯಸಿದರೆ ನಾಲ್ವರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇನ್ನು ಇಲ್ಲಿ ಮೂವರು ಅಥವಾ ಇಬ್ಬರು ಹಾಗೆಯೇ ಒಬ್ಬರನ್ನು ಕೂಡ ಉಳಿಸಿಕೊಳ್ಳುವ ಆಯ್ಕೆ ಕೂಡ ಇರಲಿದೆ. ಹೀಗಾಗಿ ಫ್ರಾಂಚೈಸಿಗೆ ಎಷ್ಟು ಆಟಗಾರರು ಬೇಕು ಅಷ್ಟು ಮಂದಿಯನ್ನು ಉಳಿಸಿಕೊಳ್ಳಬಹುದು. ಇದರ ಹೊರತಾಗಿ ನಾಲ್ಕಕ್ಕಿಂತ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇರುವುದಿಲ್ಲ.

3 / 5
ಇಲ್ಲಿ ರಿಟೈನ್ ನಿಯಮವನ್ನು ಎರಡು ರೀತಿಯಲ್ಲಿ ಮುಂದಿಡಲಾಗುತ್ತದೆ. ಈ ನಿಯಮದಂತೆ ಪ್ರಸ್ತುತ ಇರುವ 8 ಫ್ರಾಂಚೈಸಿ ಮೂವರು ಭಾರತೀಯ ಆಟಗಾರರು+ಒಬ್ಬ ವಿದೇಶಿ ಆಟಗಾರ ಅಥವಾ ಇಬ್ಬರು ಭಾರತೀಯ ಆಟಗಾರರು+ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು. ಇದರ ಹೊರತಾಗಿ ಯಾವುದೇ ರೈಟ್ ಟು ಮ್ಯಾಚ್ ಕಾರ್ಡ್​ ಬಳಸಲು ಅವಕಾಶ ಇರುವುದಿಲ್ಲ.

4 / 5
ಹಾಗೆಯೇ ಯಾವುದೇ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಕೂಡ ಇರುವುದಿಲ್ಲ. ಟ್ರಾನ್​ಫರ್ ವಿಂಡೋ ಅಂದರೆ ಆಟಗಾರರ ವರ್ಗಾವಣೆ. ಈ ಆಯ್ಕೆಯನ್ನು ನೀಡುವುದು ಸಾಮಾನ್ಯ ಹರಾಜಿಗೂ ಮುನ್ನ. ಅಂದರೆ ಮೆಗಾ ಹರಾಜು ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಉಳಿದ ಎರಡು ವರ್ಷಗಳ ಅವಧಿಯಲ್ಲೂ ನಡೆಯುವ ಹರಾಜಿಗೂ ಮುನ್ನ ಬೇರೆ ತಂಡದಿಂದ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಹಾಗೆಯೇ ಐಪಿಎಲ್​ ಮೊದಲಾರ್ಧದ ಮುಕ್ತಾಯದ ಬಳಿಕ ಕೂಡ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಇರುತ್ತದೆ. ಇದರ ಹೊರತಾಗಿ ಮೆಗಾ ಹರಾಜಿಗೂ ಮುನ್ನ ಯಾವುದೇ ಟ್ರಾನ್ಸ್​ಫರ್ ಆಯ್ಕೆ ಇರುವುದಿಲ್ಲ.

5 / 5
ಇನ್ನು ಐಪಿಎಲ್​ ಮೆಗಾ ಹರಾಜನ್ನು ಬಿಸಿಸಿಐ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಆ ಬಳಿಕ ಬಿಸಿಸಿಐ ಹರಾಜಿಗೆ ಡೇಟ್ ಫಿಕ್ಸ್ ಮಾಡ್ತಾರೆ. ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ತಪ್ಪಿದರೆ ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ.