IPL 2022: ಯಾವ ತಂಡದ ಪರ ಆಡುತ್ತೀರಿ? ಸುಳಿವು ನೀಡಿದ ಅಶ್ವಿನ್
TV9 Web | Updated By: ಝಾಹಿರ್ ಯೂಸುಫ್
Updated on:
Dec 18, 2021 | 2:56 PM
IPL 2022 Mega Auctions: ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಅಶ್ವಿನ್ ಆಡಿದ್ದರು. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಎಲ್ಲಾ ತಂಡಗಳು ಮೆಗಾ ಹರಾಜಿನ ಸಿದ್ದತೆಯಲ್ಲಿದೆ. ಈಗಾಗಲೇ 8 ಫ್ರಾಂಚೈಸಿ 27 ಆಟಗಾರರನ್ನು ಉಳಿಸಿಕೊಂಡಿದ್ದು, ಉಳಿದ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಇರುವುದು ವಿಶೇಷ.
2 / 5
ಹೀಗಾಗಿಯೇ ಅಶ್ವಿನ್ ಅವರು ಮುಂದಿನ ಸೀಸನ್ನಲ್ಲಿ ಯಾರ ಪರ ಆಡಲಿದ್ದಾರೆ ಎಂಬ ಪ್ರಶ್ನೆಯೊಂದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಅಶ್ವಿನ್ ಆಡಿದ್ದರು. ಇದೀಗ ಮತ್ತೆ ಯಾವ ತಂಡದ ಪರ ಆಡುತ್ತೀರಿ ಎಂಬ ಪ್ರಶ್ನೆಯೊಂದನ್ನು ಅಶ್ವಿನ್ ಅವರ ಮುಂದಿಡಲಾಗಿದೆ.
3 / 5
ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿರುವ ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್ ತಂಡವು ನನ್ನ ಹೃದಯಕ್ಕೆ ತುಂಬಾ ಹತ್ತಿರದ ತಂಡ. ಆ ತಂಡ ನನಗೆ ಶಾಲೆಯಿದ್ದಂತೆ. ಇಲ್ಲಿ ನಾನು ಪ್ರಿ ಕೆಜಿ, ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ತೆಗೆದುಕೊಂಡಿದ್ದೆ. ಆ ಬಳಿಕ ನಾನು ಬೇರೆ ಶಾಲೆಗೆ ಹೋದೆ. ಇದೀಗ ನನಗೂ ಮತ್ತೆ ಮನೆಗೆ ಬರಲು ಇಚ್ಛಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಂದರೆ ಮತ್ತೊಮ್ಮೆ ಸಿಎಸ್ಕೆ ತಂಡದ ಪರ ಇಂಗಿತವನ್ನು ಅಶ್ವಿನ್ ವ್ಯಕ್ತಪಡಿಸಿದ್ದಾರೆ.
4 / 5
ಇತ್ತ ಟೀಮ್ ಇಂಡಿಯಾ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿರುವ ಅಶ್ವಿನ್ ಮುಂದಿನ ಸೀಸನ್ನ ಮೆಗಾ ಹರಾಜಿನ ಮೂಲಕ ಸಿಎಸ್ಕೆ ಪರ ಮತ್ತೆ ಕಾಣಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಹೀಗಾಗಿ ಚೆನ್ನೈ ಫ್ರಾಂಚೈಸಿ ಅಶ್ವಿನ್ ಅವರ ಖರೀದಿಗಾಗಿ ಪೈಪೋಟಿ ನಡೆಸುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ. ಏಕೆಂದರೆ...
5 / 5
2010 ರಿಂದ 2015ರವರೆಗೆ ಸಿಎಸ್ಕೆ ಪರ ಆಡಿದ್ದ ಅಶ್ವಿನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಸಿಎಸ್ಕೆ ಪರ 94 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದ ಅಶ್ವಿನ್ ಒಟ್ಟು 90 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ 2016-2017 ರಲ್ಲಿ ಸಿಎಸ್ಕೆ ತಂಡವು ಅಮಾನತುಗೊಂಡಾಗ ಅಶ್ವಿನ್ ಬೇರೆ ತಂಡಗಳ ಪಾಲಾದರು. ಇದೀಗ ಮತ್ತೊಮ್ಮೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ತವರಿಗೆ ಮರಳುವ ವಿಶ್ವಾಸದಲ್ಲಿದ್ದಾರೆ ಸಿಎಸ್ಕೆ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್