Updated on: Mar 31, 2022 | 10:17 PM
ಐಪಿಎಲ್ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸಿಎಸ್ಕೆ ತಂಡವು ಬರೋಬ್ಬರಿ 210 ರನ್ ಕಲೆಹಾಕುವ ಮೂಲಕ ಅಬ್ಬರಿಸಿತು. ಸಿಎಸ್ಕೆ ಪರ ರಾಬಿನ್ ಉತ್ತಪ್ಪ ಸ್ಪೋಟಕ ಅರ್ಧಶತಕ ಬಾರಿಸಿದರೆ, ಶಿವಂ ದುಬೆ 49 ರನ್ಗಳಿಸಿ ಮಿಂಚಿದರು. ಇನ್ನು ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಧೋನಿ 6 ಎಸೆತಗಳಲ್ಲಿ 2 ಫೋರ್ ಹಾಗೂ 1 ಸಿಕ್ಸ್ ಬಾರಿಸುವ ಮೂಲಕ 16 ರನ್ಗಳಿಸಿದ್ದರು.
ಈ 16 ರನ್ಗಳೊಂದಿಗೆ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ 5ನೇ ಭಾರತೀಯ ಆಟಗಾರ ಎನಿಸಿಕೊಂಡರು.
ವಿಶೇಷ ಎಂದರೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆ ಇದೀಗ ಧೋನಿ ಪಾಲಾಗಿದೆ. ಏಕೆಂದರೆ ಟೀಮ್ ಇಂಡಿಯಾ ಪರ ಇದಕ್ಕೂ ಮುನ್ನ ನಾಲ್ವರು 7 ಸಾವಿರ ರನ್ ಪೂರೈಸಿದರೂ ಎಲ್ಲರೂ ಮೇಲಿನ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಧೋನಿ ಕೆಳ ಕ್ರಮಾಂಕದಲ್ಲಿ ಆಡಿ ಇದೀಗ 7 ಸಾವಿರ ರನ್ ಪೂರೈಸಿರುವುದು ವಿಶೇಷ.
ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ(10,326 ರನ್ಸ್), ರೋಹಿತ್ ಶರ್ಮಾ (9,936 ರನ್ಸ್), ಶಿಖರ್ ಧವನ್ (8,818 ರನ್ಸ್), ರಾಬಿನ್ ಉತ್ತಪ್ಪ (7,070 ರನ್ಸ್) ಈ ಸಾಧನೆ ಮಾಡಿದ್ದರು. ಇದೀಗ ಮಹೇಂದ್ರ ಸಿಂಗ್ ಧೋನಿ 7 ಸಾವಿರ ರನ್ ಪೂರೈಸಿ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14321 ರನ್ಗಳಿಸಿದ್ದಾರೆ. ಹಾಗೆಯೇ 10 ಸಾವಿರಕ್ಕೂ ಅಧಿಕ ರನ್ಗಳಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.