IPL 2022: ಪಂಜಾಬ್ ಕಿಂಗ್ಸ್​ ತಂಡಕ್ಕೆ ನಾಯಕ ಫಿಕ್ಸ್​..!

| Updated By: ಝಾಹಿರ್ ಯೂಸುಫ್

Updated on: Feb 27, 2022 | 7:43 PM

IPL 2022 Punjab Kings Captain: ಪಂಜಾಬ್ ಕಿಂಗ್ಸ್​ ಪರ 47 ಪಂದ್ಯಗಳನ್ನು ಆಡಿರುವ ಮಯಾಂಕ್ ಅಗರ್ವಾಲ್ ಇದುವರೆಗೆ 1317 ರನ್​ ಕಲೆಹಾಕಿದ್ದಾರೆ. ಅದರಲ್ಲೂ ಕಳೆದ ಎರಡು ಸೀಸನ್​ಗಳಲ್ಲಿ 400 ಕ್ಕೂ ಅಧಿಕ ರನ್​ ಬಾರಿಸುವ ಮೂಲಕ ತಂಡದ ಪರ 2ನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

1 / 6
ಐಪಿಎಲ್ ಸೀಸನ್​ 15 ನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ಈ ಬಗ್ಗೆ ಪಂಜಾಬ್ ಫ್ರಾಂಚೈಸಿ ಚರ್ಚೆ ನಡೆಸಿದೆ. ಅದರಂತೆ ಪಂಜಾಬ್ ಕಿಂಗ್ಸ್​ ನಾಯಕರುಗಳ ಪಟ್ಟಿಯಲ್ಲಿ ಇಬ್ಬರು ಸ್ಟಾರ್ ಆಟಗಾರರ ಹೆಸರು ಮುಂಚೂಣಿಯಲ್ಲಿದೆ. ಅವರೆಂದರೆ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್ವಾಲ್.

2 / 6
 ಈ ಹಿಂದೆ ಪಂಜಾಬ್ ಫ್ರಾಂಚೈಸಿ ಶಿಖರ್ ಧವನ್​ಗೆ ನಾಯಕತ್ವ ನೀಡುವ ಬಗ್ಗೆ ಆಸಕ್ತಿ ತೋರಿಸಿತ್ತು. ಆದರೀಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕತ್ವಕ್ಕೆ ನೀಡಲು ಪಂಜಾಬ್ ಕಿಂಗ್ಸ್ ಮುಂದಾಗಿದೆ ಎಂದು ವರದಿಯಾಗಿದೆ. ಅದರಂತೆ ಪಂಜಾಬ್ ಫ್ರಾಂಚೈಸಿ ಮಯಾಂಕ್ ಅಗರ್ವಾಲ್ ಅವರನ್ನು ನೂತನ ನಾಯಕನಾಗಿ ಫಿಕ್ಸ್ ಮಾಡಿದ್ದು, ಮಾರ್ಚ್​ 5 ರಂದು ಅಧಿಕೃತವಾಗಿ ಘೋಷಿಸಲಿದೆ ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3 / 6
ಅದರಂತೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅಗರ್ವಾಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಪಂಜಾಬ್ ಕಿಂಗ್ಸ್​ ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಮಯಾಂಕ್ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ಈ ಬಾರಿ 14 ಕೋಟಿ ರೂ. ನೀಡಿ ಪಂಜಾಬ್ ಫ್ರಾಂಚೈಸಿಯು ಕನ್ನಡಿಗನನ್ನು ರಿಟೈನ್ ಮಾಡಿಕೊಂಡಿತು.

4 / 6
ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದೆ. ಮಯಾಂಕ್ 2018 ರಿಂದ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಅದರಲ್ಲೂ ತಂಡದ ಕೋಚ್ ಅನಿಲ್ ಕುಂಬ್ಳೆ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಇಬ್ಬರೂ ಕರ್ನಾಟಕದವರಾಗಿರುವ ಕಾರಣ ಉತ್ತಮ ಹೊಂದಾಣಿಕೆ ಇರಲಿದೆ. ಹೀಗಾಗಿ ಮಯಾಂಕ್ ಅಗರ್ವಾಲ್​ ಅವರಿಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬಯಸಿದೆ.

5 / 6
ಪಂಜಾಬ್ ಕಿಂಗ್ಸ್​ ಪರ 47 ಪಂದ್ಯಗಳನ್ನು ಆಡಿರುವ ಮಯಾಂಕ್ ಅಗರ್ವಾಲ್ ಇದುವರೆಗೆ 1317 ರನ್​ ಕಲೆಹಾಕಿದ್ದಾರೆ. ಅದರಲ್ಲೂ ಕಳೆದ ಎರಡು ಸೀಸನ್​ಗಳಲ್ಲಿ 400 ಕ್ಕೂ ಅಧಿಕ ರನ್​ ಬಾರಿಸುವ ಮೂಲಕ ತಂಡದ ಪರ 2ನೇ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಹೀಗಾಗಿ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಅವರನ್ನು ರಿಟೈನ್ ಮಾಡಿಕೊಂಡಿತು. ಇದೀಗ ನಿರೀಕ್ಷೆಯಂತೆ ಕನ್ನಡಿಗನಿಗೆ ನಾಯಕನ ಪಟ್ಟ ಒಲಿಯಲಿದೆ.

6 / 6
ಮಯಾಂಕ್ ಅಗರ್ವಾಲ್​

ಮಯಾಂಕ್ ಅಗರ್ವಾಲ್​