Updated on: Apr 26, 2022 | 3:42 PM
ಹರ್ಷಲ್ ಪಟೇಲ್ ಕೇವಲ ಒಂದೇ ಒಂದು ಸೀಸನ್ನಲ್ಲಿ ತಮ್ಮ ಇಡೀ ಕ್ರಿಕೆಟ್ ಕೆರಿಯರನ್ನೇ ಬದಲಿಸಿದ್ದರು ಎಂದರೆ ತಪ್ಪಾಗಲಾರದು. ಏಕೆಂದರೆ 2021 ರವರೆಗೆ ಐಪಿಎಲ್ನಲ್ಲಿ ಕೇವಲ 20 ಲಕ್ಷ ರೂ. ಪಡೆದಿದ್ದ ಹರ್ಷಲ್ ಪಟೇಲ್ ಈ ಬಾರಿ ಪಡೆದಿರುವುದು ಬರೋಬ್ಬರಿ 10.75 ಕೋಟಿ ರೂ.
ಕಳೆದ ಸೀಸನ್ನಲ್ಲಿ 20 ಲಕ್ಷ ರೂ.ಗೆ ಖರೀದಿಸಿದ್ದ ಆರ್ಸಿಬಿ ತಂಡವು ಈ ಬಾರಿ ಹರ್ಷಲ್ ಪಟೇಲ್ ಅವರನ್ನು ಬರೋಬ್ಬರಿ 10.75 ಲಕ್ಷ ರೂ. ನೀಡಿ ಖರೀದಿಸಿದೆ. ಆದರೆ, ಈ ಪೈಕಿ ಹರ್ಷಲ್ ಪಟೇಲ್ ಎಲ್ಲಾ ಮೊತ್ತವನ್ನು ತಮ್ಮ ಬಳಿ ಉಳಿಸಿಕೊಂಡಿಲ್ಲ ಎಂಬುದು ವಿಶೇಷ.
ಅಂದರೆ ಹರಾಜಿನ ವೇಳೆ ಸಿಗುವ ಮೊತ್ತದಿಂದ ಒಂದು ಮೊತ್ತವನ್ನು ನೀಡುವುದಾಗಿ ಹರ್ಷಲ್ ಪಟೇಲ್ ಮೊದಲೇ ಪತ್ನಿಗೆ ಮಾತು ನೀಡಿದ್ದರು. ಆ ಮಾತಿನಂತೆ ಹರ್ಷಲ್ ಪಟೇಲ್ ತಮ್ಮ ಪತ್ನಿಗೆ ನೀಡಿರುವುದು ಬರೋಬ್ಬರಿ 3.75 ಕೋಟಿ ರೂ.
ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ ಶೋನಲ್ಲಿ ಹರ್ಷಲ್ ಪಟೇಲ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ನನಗೆ ಎರಡಂಕಿ ಬಿಡ್ಡಿಂಗ್ ಸಿಗಲಿದೆ ಎಂದು ಮೊದಲೇ ಪತ್ನಿ ಹೇಳಿದ್ದಳು. ಈ ವೇಳೆ 7 ಕೋಟಿಗಿಂತ ಹೆಚ್ಚಿನ ಮೊತ್ತ ಸಿಕ್ಕರೆ ಅದನ್ನು ನಿನಗೆ ನೀಡುವುದಾಗಿ ನಾನು ಹೆಂಡ್ತಿಗೆ ಹೇಳಿದ್ದೆ. ಅದರಂತೆ 10.75 ಕೋಟಿಗೆ ಆರ್ಸಿಬಿ ನನ್ನನ್ನು ಖರೀದಿಸಿತು. ಹೀಗಾಗಿ ಕೊಟ್ಟ ಮಾತಿನಂತೆ ನಾನು 3.75 ಕೋಟಿ ರೂ. ಪತ್ನಿಗೆ ನೀಡಿದ್ದೇನೆ ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.
ಹರ್ಷಲ್ ಪಟೇಲ್ ಕಳೆದ ಸೀಸನ್ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. 15 ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಈ ಬಾರಿ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹರ್ಷಲ್ ಪಟೇಲ್ 7 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ.