IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!
TV9 Web | Updated By: ಝಾಹಿರ್ ಯೂಸುಫ್
Updated on:
Nov 28, 2021 | 9:40 PM
IPL 2022 Retentions:
ಈಗಾಗಲೇ ಬಹುತೇಕ ತಂಡಗಳ ರಿಟೈನ್ ಪಟ್ಟಿ ಸಿದ್ಧವಾಗಿದ್ದು, ಇದಾಗ್ಯೂ ಅಂತಿಮ ಚರ್ಚೆ ಮುಂದುವರೆದಿದೆ. ಇದರೊಂದಿಗೆ ಹಳೆಯ 8 ತಂಡಗಳಿದ್ದ ಕೆಲ ಸ್ಟಾರ್ ಆಟಗಾರರು ಈ ಬಾರಿ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವುದು ಖಚಿತ ಎನ್ನಲಾಗಿದೆ. ಅದರಂತೆ ಈ 10 ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ...
1 / 12
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಎಲ್ಲಾ ತಂಡಗಳು ರಿಟೈನ್ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಈ ಬಾರಿ ಹಳೆಯ 8 ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಾಗ್ಯೂ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಅನೇಕ ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ.
2 / 12
ಈಗಾಗಲೇ ಬಹುತೇಕ ತಂಡಗಳ ರಿಟೈನ್ ಪಟ್ಟಿ ಸಿದ್ಧವಾಗಿದ್ದು, ಇದಾಗ್ಯೂ ಅಂತಿಮ ಚರ್ಚೆ ಮುಂದುವರೆದಿದೆ. ಇದರೊಂದಿಗೆ ಹಳೆಯ 8 ತಂಡಗಳಿದ್ದ ಕೆಲ ಸ್ಟಾರ್ ಆಟಗಾರರು ಈ ಬಾರಿ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವುದು ಖಚಿತ ಎನ್ನಲಾಗಿದೆ. ಅದರಂತೆ ಈ 10 ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ...
3 / 12
1. ಹಾರ್ದಿಕ್ ಪಾಂಡ್ಯ: ಐಪಿಎಲ್ 2022 ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡಲಿದೆ. ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್ ಅಥವಾ ಸೂರ್ಯಕುಮಾರ್ ಯಾದವ್ ಮತ್ತು ಕೀರನ್ ಪೊಲಾರ್ಡ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
4 / 12
2. ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ಸುರೇಶ್ ರೈನಾ ಅವರೊಂದಿಗಿನ 10 ವರ್ಷಗಳ ಒಪ್ಪಂದವನ್ನು ಈ ಬಾರಿ ಕೊನೆಗೊಳಿಸಲಿದೆ ಎಂದು ವರದಿಯಾಗಿದೆ. ಕಳೆದ ಸೀಸನ್ನಲ್ಲಿ ವಿಫಲರಾಗಿರುವ ರೈನಾ ಅವರನ್ನು ರಿಲೀಸ್ ಮಾಡುವುದು ಬಹುತೇಕ ಖಚಿತ. ಹಾಗಾಗಿ ರೈನಾ ಹೊಸ ಫ್ರಾಂಚೈಸ್ ಪರ ಆಡುವ ಸಾಧ್ಯತೆಯಿದೆ.
5 / 12
3. ಕೆಎಲ್ ರಾಹುಲ್: ಪಂಜಾಬ್ ಕಿಂಗ್ಸ್ ಪರ ಮೂರು ಸೀಸನ್‌ಗಳನ್ನು ಆಡಿರುವ ಕೆಎಲ್ ರಾಹುಲ್ ಈ ಬಾರಿ ಹೊರಬರುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ ಮುಂದಿನ ಸೀಸನ್ನಲ್ಲಿ ಲಕ್ನೋ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಸ್ಟಾರ್ ಪ್ಲೇಯರ್ ಆಗಿ ರಾಹುಲ್ ಹೆಸರು ಮುಂಚೂಣಿಯಲ್ಲಿದೆ.
6 / 12
4. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಟೈನ್ ಪಟ್ಟಿ ಸಿದ್ದವಾಗಿದ್ದು, ಈ ಲೀಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಅಯ್ಯರ್ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
7 / 12
5. ರವಿಚಂದ್ರನ್ ಅಶ್ವಿನ್: ಡೆಲ್ಲಿ ಕ್ಯಾಪಿಟಲ್ಸ್ ತನ್ನನ್ನು ರಿಟೈನ್ ಮಾಡಿಕೊಳ್ಳುವುದಿಲ್ಲ ಎಂದು ಖುದ್ದು ಅಶ್ವಿನ್ ಅವರೇ ಬಹಿರಂಗಪಡಿಸಿದ್ದಾರೆ. ಹೀಗಾಗಿ ಅವರು ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
8 / 12
6. ಮನೀಶ್ ಪಾಂಡೆ: ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮನೀಶ್ ಪಾಂಡೆಯನ್ನು ಉಳಿಸಿಕೊಳ್ಳುವುದು ಡೌಟ್ ಎನ್ನಲಾಗಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಪಾಂಡೆಯನ್ನು ಎಸ್ಆರ್ಹೆಚ್ ಫ್ರಾಂಚೈಸಿ ಕೇವಲ 8 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಿತ್ತು. ಹೀಗಾಗಿ ಮನೀಶ್ ಪಾಂಡೆಯನ್ನೂ ಸಹ ಎಸ್ಆರ್ಹೆಚ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಅದರಂತೆ ಹರಾಜು ಪಟ್ಟಿಯಲ್ಲಿ ಮನೀಶ್ ಪಾಂಡೆ ಹೆಸರು ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
9 / 12
7. ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಹೊರಬರುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ವಾರ್ನರ್ ಅವರನ್ನು ಎಸ್ಆರ್ಹೆಚ್ ಕಳೆದ ಸೀಸನ್ನಲ್ಲಿ ಕೇವಲ 8 ಪಂದ್ಯಗಳಲ್ಲಿ ಮಾತ್ರ ಆಡಿಸಿದ್ದರು. ಹೀಗಾಗಿ ಎಸ್ಆರ್ಹೆಚ್ ವಾರ್ನರ್ ಅವರನ್ನೂ ಸಹ ಉಳಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಹೀಗಾಗಿ ಎಡಗೈ ದಾಂಡಿಗ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
10 / 12
8. ಇಯಾನ್ ಮೋರ್ಗನ್: ಕೆಕೆಆರ್ ತಂಡವು ಇಯಾನ್ ಮೋರ್ಗನ್ ಅವರನ್ನು ಉಳಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಕೆಕೆಆರ್ ಪರ 17 ಪಂದ್ಯಗಳನ್ನು ಆಡಿದ್ದ ಮೋರ್ಗನ್ ಕಲೆಹಾಕಿದ್ದು ಕೇವಲ 133 ರನ್‌ಗಳು ಮಾತ್ರ. ಹೀಗಾಗಿ ಅವರನ್ನು ರಿಟೈನ್ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂಬ ವರದಿಯಾಗಿದೆ.
11 / 12
9. ದೀಪಕ್ ಹೂಡಾ: ದೀಪಕ್ ಹೂಡಾ ಅವರನ್ನು ಸಹ ಪಂಜಾಬ್ ಕಿಂಗ್ಸ್ ತಂಡ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಳೆದ ಸೀಸನ್ನಲ್ಲಿ 12 ಪಂದ್ಯಗಳಿಂದ ಹೂಡಾ ಕಲೆಹಾಕಿದ್ದು ಒಟ್ಟು 160 ರನ್‌ಗಳು ಮಾತ್ರ. ಅತ್ತ ಪಂಜಾಬ್ ಕಿಂಗ್ಸ್ ಎಲ್ಲಾ ಆಟಗಾರರನ್ನು ರಿಲೀಸ್ ಮಾಡಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಹೀಗಾಗಿ ಹೂಡಾ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
12 / 12
10. ಸ್ಟೀವ್ ಸ್ಮಿತ್: ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಸ್ಟೀವ್ ಸ್ಮಿತ್ ರಿಲೀಸ್ ಆಗಲಿದ್ದಾರೆ. ಕಳೆದ ಬಾರಿ 2.2 ಕೋಟಿ ರೂ.ಗೆ ಖರೀದಿಸಿದ್ದ ಡೆಲ್ಲಿ ಪರ ಸ್ಮಿತ್ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿತ್ತು. ಆಡಿದ 8 ಪಂದ್ಯಗಳಿಂದ ಕೇವಲ 152 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಸ್ಟೀವ್ ಸ್ಮಿತ್ ಹೆಸರು ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.