IPL 2022: ಬೆಂಗಳೂರಿನಲ್ಲಿ ಮೆಗಾ ಹರಾಜು; ಶಾರುಖ್ ತಂಡಕ್ಕೆ ಶ್ರೇಯಸ್ ನಾಯಕ? ಹೊಸ ತಂಡಗಳ ಬಿಗ್ ಅಪ್ಡೇಟ್ ಇಲ್ಲಿದೆ
TV9 Web | Updated By: ಪೃಥ್ವಿಶಂಕರ
Updated on:
Jan 10, 2022 | 9:11 PM
IPL 2022: IPL 2022 ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಫೆಬ್ರವರಿ 11 ಮತ್ತು 13 ರ ನಡುವೆ ನಡೆಯಲಿದೆ.
1 / 5
ಐಪಿಎಲ್ 2022
2 / 5
ಮಾಧ್ಯಮ ವರದಿಗಳ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ 15 ನೇ ಆವೃತ್ತಿಯಲ್ಲಿ ಭಾರತದ ಯುವ ಆಟಗಾರನನ್ನು ನಾಯಕನನ್ನಾಗಿ ಮಾಡಲು ಬಯಸಿದೆ. ಸುದ್ದಿ ಪ್ರಕಾರ ಈ ರೇಸ್ ನಲ್ಲಿ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಮೇಲೆ ಕೆಕೆಆರ್ ದೊಡ್ಡ ಮೊತ್ತದ ಹೂಡಿಕೆ ಮಾಡಬಹುದು.
3 / 5
ಡೆಲ್ಲಿ ಕ್ಯಾಪಿಟಲ್ಸ್‌ನ ಇನ್ನೂ ಇಬ್ಬರು ಮಾಜಿ ಆಟಗಾರರು ಲಕ್ನೋದ ದೃಷ್ಟಿಯಲ್ಲಿದ್ದಾರೆ. ವರದಿಗಳ ಪ್ರಕಾರ, ಲಕ್ನೋ ತಮ್ಮ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ಕಗಿಸೊ ರಬಾಡ ಅವರನ್ನು ಸೇರಿಸಿಕೊಳ್ಳಲು ಸಂಚು ಹಾಕಿದೆ. ಅದೇ ಹೊತ್ತಿಗೆ ಈ ತಂಡದ ನಾಯಕನಾಗಿ ಕೆಎಲ್ ರಾಹುಲ್ ಹೆಸರು ಹೊರಬೀಳುತ್ತಿದೆ.
4 / 5
ಅಹಮದಾಬಾದ್ ಫ್ರಾಂಚೈಸಿ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಲು ನಿರ್ಧರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್‌ನ ಈ ಮಾಜಿ ಆಲ್‌ರೌಂಡರ್ ಅಹಮದಾಬಾದ್ ತಂಡದ ನಾಯಕರಾಗಲಿದ್ದಾರೆ. ಅದೇ ಸಮಯದಲ್ಲಿ ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಕೂಡ ಅಹಮದಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
5 / 5
IPL 2022 ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಫೆಬ್ರವರಿ 11 ಮತ್ತು 13 ರ ನಡುವೆ ನಡೆಯಲಿದೆ.