IPL 2022: ವಿರಾಟ್ ಕೊಹ್ಲಿ ಬ್ರೇಕ್ ಪಡೆದು ಕಾಮೆಂಟ್ರಿ ಮಾಡಲಿ ಎಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Apr 17, 2022 | 3:01 PM

IPL 2022: ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಕೇವಲ 23.80 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. 6 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ.

1 / 5
ಐಪಿಎಲ್ ಸೀಸನ್​ 15 ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. ತಮ್ಮ ಭರ್ಜರಿ ಫಾರ್ಮ್​ ಅನ್ನು ಪ್ರದರ್ಶಿಸುವ ಕೊಹ್ಲಿ ಈ ಬಾರಿ ಕೂಡ ವಿಫಲರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 12 ರನ್‌ಗಳಿಗೆ ರನೌಟ್ ಆಗಿದ್ದರು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ನೀಡಿದ ಹೇಳಿಕೆಯೊಂದು ಇದೀಗ ಎಲ್ಲರ ಗಮನ ಸೆಳೆದಿದೆ.

2 / 5
 ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ ವಾಸಿಂ ಜಾಫರ್, ನನ್ನ ಪ್ರಕಾರ ಕೊಹ್ಲಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಕಾಮೆಂಟರಿ ಮಾಡಬೇಕು. ಇದಾದ ನಂತರ ನೋಡಿ, ವಿರಾಟ್ ಕೊಹ್ಲಿ ಕೂಡ ರನ್ ಮಳೆ ಹರಿಸಲಿದ್ದಾರೆ ಎಂದು ಜಾಫರ್​ ತಮಾಷೆಯಾಗಿ ಹೇಳಿದ್ದಾರೆ.

3 / 5
 ವಾಸಿಂ ಜಾಫರ್, ದಿನೇಶ್ ಕಾರ್ತಿಕ್ ಅವರನ್ನು ಉಲ್ಲೇಖಿಸಿ  ವಿರಾಟ್ ಕೊಹ್ಲಿಗೆ ಈ ಸಲಹೆಯನ್ನು ನೀಡಿದ್ದರು. ಏಕೆಂದರೆ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ದಿನೇಶ್ ಕಾರ್ತಿಕ್ ವಿಫಲರಾಗಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್​ಗೂ ಮುನ್ನ ಡಿಕೆ ಇಂಗ್ಲೆಂಡ್ ಪ್ರವಾಸದಲ್ಲಿ ಕಾಮೆಂಟರಿ ಮಾಡುತ್ತಿದ್ದರು. ಇದಾದ ಬಳಿಕ ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ಹರಾಜಿನಲ್ಲಿ ಖರೀದಿಸಿದ್ದು, ಇದೀಗ ಡಿಕೆ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್​ರಂತೆ ಕೊಹ್ಲಿ ಕಾಮೆಂಟರಿ ಮಾಡಿದ್ರೆ ಮತ್ತೆ ಫಾರ್ಮ್​ಗೆ ಮರಳಬಹುದು ಎಂದು ವಾಸಿಂ ಜಾಫರ್ ತಮಾಷೆಯಾಗಿ ಹೇಳಿದ್ದಾರೆ.

4 / 5
 ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಕೇವಲ 23.80 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. 6 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಎರಡು ಬಾರಿ ರನೌಟ್ ಆಗಿದ್ದರು ಎಂಬುದೇ ಅಚ್ಚರಿ.

5 / 5
ಇದಾಗ್ಯೂ ವಿರಾಟ್ ಕೊಹ್ಲಿಯ ವೈಫಲ್ಯವನ್ನು ಮರೆಮಾಚುವಂತೆ ದಿನೇಶ್ ಕಾರ್ತಿಕ್ ಬ್ಯಾಟ್ ಬೀಸಿ ಆರ್​ಸಿಬಿ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಅದರಂತೆ ಇದೀಗ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನ ಅಲಂಕರಿಸಿದೆ.