IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?

| Updated By: ಝಾಹಿರ್ ಯೂಸುಫ್

Updated on: May 17, 2022 | 5:02 PM

What is RCB Hall Of Fame? ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್​ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತದೆ.

1 / 5
ಹಾಲ್ ಆಫ್ ಫೇಮ್...ಎಂದರೆ ಥಟ್ಟನೆ ಮನಸಿಗೆ ಬರುವ ಚಿತ್ರವೆಂದರೆ ಹಾಲಿವುಡ್​ನ ವಾಕ್​ ಆಫ್​ ಫೇಮ್. ಮನರಂಜನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರ ಹೆಸರುಗಳನ್ನು ಹಾಲಿವುಡ್​ನ ಪ್ರಮುಖ ಪಾದಚಾರಿ ಮಾರ್ಗದಲ್ಲಿ ನಕ್ಷತ್ರಗಳ ರೂಪದಲ್ಲಿ ಕೆತ್ತಿಡಲಾಗಿದೆ. ಇದೇ ಮಾದರಿಯಲ್ಲಿ ಇಂಟರ್​​ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್​ನಲ್ಲಿ ಸಾಧನೆಗೈದ ಪ್ರಮುಖ ಆಟಗಾರರಿಗೆ 2009  ರಿಂದ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ.

2 / 5
ಇದೀಗ ಇದೇ ಮಾದರಿಯಲ್ಲಿ ಆರ್​ಸಿಬಿ ಫ್ರಾಂಚೈಸಿ ಕೂಡ ತಂಡದ ಪರ ಆಡಿದ ಶ್ರೇಷ್ಠ ಆಟಗಾರರನ್ನು ಗೌರವಿಸಲು ಮುಂದಾಗಿದೆ. ಇದಕ್ಕೆ ಆರ್​ಸಿಬಿ ಹಾಲ್ ಆಫ್​ ಫೇಮ್ ಎಂಬ ಹೆಸರಿಡಲಾಗಿದೆ. ಈ ಗೌರವ ಪ್ರಶಸ್ತಿಯನ್ನು ಆರ್​ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್​ಸಿಬಿ ರೂಪಿಸಿದೆ.

3 / 5
ಈ ಷರತ್ತುಗಳೆಂದರೆ, ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಯಾವುದೇ ತಂಡದ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್​ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ.

4 / 5
ಅದರಂತೆ ಆರ್​ಸಿಬಿ ತಂಡದ ಮೊದಲ ಹಾಲ್ ಆಫ್​ ಫೇಮ್​ ಗೌರವಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ. ಎಬಿಡಿ ಆರ್​ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷಗಳ ಕಾಲ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಆರ್​ಸಿಬಿ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಈ ಇಬ್ಬರು ಮಾಜಿ ಆಟಗಾರರಿಗೆ ಆರ್​ಸಿಬಿ ತಂಡದ ಹಾಲ್ ಫೇಮ್ ಗೌರವ ನೀಡಲು ಮುಂದಾಗಿದೆ.

5 / 5
ಅದರಂತೆ ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್​ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತದೆ.