- Kannada News Photo gallery Cricket photos IPL 2023 Another big blow to rcb Josh Hazlewood set to miss starting matches in ipl 2023
IPL 2023: ಆರ್ಸಿಬಿಗೆ ಸಿಹಿ- ಕಹಿ ಸುದ್ದಿ; ಆಲ್ರೌಂಡರ್ ಇನ್, ವೇಗದ ಬೌಲರ್ ಅನುಮಾನ..!
IPL 2023: ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯದಿಂದ ಚೇತರಿಸಿಕೊಂಡಿದ್ದು ಆರ್ಸಿಬಿಗೆ ಕೊಂಚ ನಿರಾಳ ತಂದಿತ್ತು. ಆದರೆ ಇದೀಗ ಜೋಶ್ ಹ್ಯಾಜಲ್ವುಡ್ ಗಾಯಕೊಂಡಿರುವುದು ಆರ್ಸಿಬಿ ಬಳಗದ ತಲೆನೋವು ಹೆಚ್ಚಿಸಿದೆ.
Updated on:Feb 23, 2023 | 1:40 PM

ಇಂಡಿಯನ್ ಪ್ರೀಮಿಯರ್ ಲೀಗ್ನ 16 ನೇ ಸೀಸನ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯದಿಂದ ಚೇತರಿಸಿಕೊಂಡಿದ್ದು ಆರ್ಸಿಬಿಗೆ ಕೊಂಚ ನಿರಾಳ ತಂದಿತ್ತು. ಆದರೆ ಇದೀಗ ಜೋಶ್ ಹ್ಯಾಜಲ್ವುಡ್ ಗಾಯಕೊಂಡಿರುವುದು ಆರ್ಸಿಬಿ ಬಳಗದ ತಲೆನೋವು ಹೆಚ್ಚಿಸಿದೆ.

ಜೋಶ್ ಹ್ಯಾಜಲ್ವುಡ್ ಈಗಾಗಲೇ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಇಂಜುರಿಯಿಂದಾಗಿ ಹ್ಯಾಜಲ್ವುಡ್ ಐಪಿಎಲ್ನಲ್ಲಿ ಕೆಲವು ಪಂದ್ಯಗಳನ್ನು ಆಡದಿರುವ ಸಾಧ್ಯತೆಗಳಿವೆ.

ಈಗಾಗಲೇ ಜೋಶ್ ಹ್ಯಾಜಲ್ವುಡ್ ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್ಗಳಿಂದ ಹೊರಗುಳಿಯಲಿದ್ದಾರೆ. ಚಿಕಿತ್ಸೆಗಾಗಿ ಮನೆಗೆ ಮರಳಿದ್ದಾರೆ. ಆರ್ಸಿಬಿಯ ಮೊದಲ ಪಂದ್ಯ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯದಲ್ಲಿ ಹ್ಯಾಜಲ್ವುಡ್ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮಾರ್ಚ್ 17 ರಿಂದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಆ ಸರಣಿಗೂ ಹ್ಯಾಜಲ್ವುಡ್ ಅಲಭ್ಯರಾಗಿದ್ದಾರೆ. ಇದು ಕೂಡ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಆದರೆ ಈ ನಡುವೆ ಆರ್ಸಿಬಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಭಾರತ ವಿರುದ್ಧದ ಏಕದಿನ ಸರಣಿಗೆ ಆಸೀಸ್ ತಂಡಕ್ಕೆ ಮ್ಯಾಕ್ಸ್ವೆಲ್ ಆಯ್ಕೆಯಾಗಿದ್ದಾರೆ. ಈ ಮೂರು ಏಕದಿನ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಫಿಟ್ ಆಗಿರುವುದು ಸಾಭೀತಾದರೆ, ಅವರು ಐಪಿಎಲ್ನ ಪೂರ್ಣ ಸೀಸನ್ ಆಡುವುದು ಖಚಿತ.

16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದ್ದು, ಆರ್ಸಿಬಿ ತನ್ನ ಆರಂಭಿಕ ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದೆ. ಪಂದ್ಯ ಏಪ್ರಿಲ್ 2 ರಂದು, ರಾತ್ರಿ 7:30 ಕ್ಕೆ ಆರಂಭವಾಗಲಿದೆ.
Published On - 1:37 pm, Thu, 23 February 23




