IPL 2023: RCB ಪಾಲಿಗೆ ಕಂಟಕವಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ಸ್..!

| Updated By: ಝಾಹಿರ್ ಯೂಸುಫ್

Updated on: Apr 16, 2023 | 10:07 PM

IPL 2023 RCB Kannada:

1 / 7
IPL 2023: ಇಂಪ್ಯಾಕ್ಟ್ ಪ್ಲೇಯರ್ಸ್...ಸರಳವಾಗಿ ಹೇಳಬೇಕೆಂದರೆ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲ ಆಟಗಾರರು. ಆದರೆ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ಇಂಪ್ಯಾಕ್ಟ್ ಪ್ಲೇಯರ್​ಗಳು ಮಾತ್ರ ಇದಕ್ಕೆ ತದ್ವಿರುದ್ಧ. ಇದಕ್ಕೆ ಸಾಕ್ಷಿಯೇ ಆರ್​ಸಿಬಿ ಕಣಕ್ಕಿಳಿಸಿದ ಮೂರು ಇಂಪ್ಯಾಕ್ಟ್ ಸಬ್​ಗಳ ಪ್ರದರ್ಶನ.

2 / 7
ಆರ್​ಸಿಬಿ ಪರ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಆಟಗಾರ ಅನೂಜ್ ರಾವತ್. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವಕಾಶ ಪಡೆದ ಅನೂಜ್ ಕಲೆಹಾಕಿದ್ದು 5 ಎಸೆತಗಳಲ್ಲಿ ಕೇವಲ 1 ರನ್​.

3 / 7
ಇದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸ್ಪಿನ್ನರ್ ಕರ್ಣ್ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಿತ್ತು. ಇಂಪ್ಯಾಕ್ಟ್ ಮಾಡಲೆಂದು ಬಂದ ಕರ್ಣ್ ಶರ್ಮಾ 3 ಓವರ್​ಗಳಲ್ಲಿ 38 ರನ್ ನೀಡಿ ಲಕ್ನೋ ತಂಡದ ಗೆಲುವಿಗೆ ಕೊಡುಗೆ ನೀಡಿದರು ಎನ್ನಬಹುದು.

4 / 7
ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಮತ್ತೆ ಅನೂಜ್ ರಾವತ್​ಗೆ ಅವಕಾಶ ನೀಡಿತ್ತು. 15ನೇ ಓವರ್​ ವೇಳೆ ಕಣಕ್ಕಿಳಿದಿದ್ದ ರಾವತ್ ಬರೋಬ್ಬರಿ 22 ಎಸೆತಗಳನ್ನು ಎದುರಿಸಿದ್ದರು. ಅಲ್ಲದೆ ಕಲೆಹಾಕಿದ್ದು ಕೇವಲ 15 ರನ್​ ಮಾತ್ರ. ಅಂದರೆ ಇಂಪ್ಯಾಕ್ಟ್ ಮಾಡಲೆಂದು ಬಂದ ಅನೂಜ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ರನ್​ಗಳಿಕೆ ಕುಂಠಿತವಾಗಲು ಪ್ರಮುಖ ಕಾರಣರಾಗಿದ್ದರು.

5 / 7
ಅಂದರೆ ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸುತ್ತಿರುವ ಆಟಗಾರರೇ ಆರ್​ಸಿಬಿ ಪಾಲಿಗೆ ಮುಳುವಾಗುತ್ತಿದ್ದಾರೆ. ಅದರಲ್ಲೂ ಅನೂಜ್ ರಾವತ್ ವಿಫಲರಾಗುತ್ತಿದ್ದರೂ ಅವರಿಗೆ ಸತತ ಅವಕಾಶ ನೀಡುತ್ತಿರುವ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ.

6 / 7
ಒಟ್ಟಿನಲ್ಲಿ ಎಲ್ಲಾ ತಂಡಗಳು ಇಂಪ್ಯಾಕ್ಟ್ ಪ್ಲೇಯರ್​ ಮೂಲಕ ಪಂದ್ಯಗಳನ್ನು ಗೆಲ್ಲುತ್ತಿದ್ದರೆ, ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್​ಗಳು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಆಡುತ್ತಿರುವುದೇ ಈಗ ತಂಡದ ಚಿಂತೆಯನ್ನು ಹೆಚ್ಚಿಸಿದೆ.

7 / 7
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.