
IPL 2023: ಐಪಿಎಲ್ ಸೀಸನ್ 16 ರಲ್ಲಿ ಆರ್ಸಿಬಿ ಆಟಗಾರ ಅನೂಜ್ ರಾವತ್ ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ಕಳೆದ ಸೀಸನ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ರಾವತ್ ಅವರನ್ನು ಈ ಬಾರಿ ಕೂಡ ಆರ್ಸಿಬಿ ಉಳಿಸಿಕೊಂಡಿತ್ತು. ಆದರೀಗ ಈ ಸಲ ಕೂಡ ಅನೂಜ್ ಬ್ಯಾಟ್ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ಐಪಿಎಲ್ 2022 ರಲ್ಲಿ ಆರ್ಸಿಬಿ ಪರ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಾವತ್ ಕಲೆಹಾಕಿದ್ದು ಕೇವಲ 129 ರನ್ ಮಾತ್ರ. ಅಂದರೆ ಪ್ರತಿ ಪಂದ್ಯದ ಸರಾಸರಿ 16.13 ರನ್. ಇದಾಗ್ಯೂ 3.4 ಕೋಟಿ ನೀಡಿ ಆರ್ಸಿಬಿ ಹರಾಜಿಗೂ ಮುನ್ನ ಉಳಿಸಿಕೊಂಡಿತ್ತು.

ಆದರೆ ಈ ಬಾರಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 39 ರನ್ ಅಂದರೆ ನಂಬಲೇಬೇಕು. ಅದರಲ್ಲೂ ಪ್ಲೇಆಫ್ ರೇಸ್ಗೆ ನಿರ್ಣಾಯಕವಾಗಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ 6 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಅಂದರೆ ಈ ಸಲ ಕೂಡ ಅನೂಜ್ ರಾವತ್ 6 ಪಂದ್ಯಗಳಲ್ಲಿ ಕಲೆಹಾಕಿರುವ ರನ್ ಸರಾಸರಿ 13.00. ಅಚ್ಚರಿ ಎಂದರೆ ಈ ಐದು ಪಂದ್ಯಗಳಲ್ಲಿ ರಾವತ್ ಬ್ಯಾಟ್ನಿಂದ ಸಿಡಿದಿರುವುದು ಕೇವಲ 2 ಫೋರ್ ಹಾಗೂ 1 ಸಿಕ್ಸ್ ಮಾತ್ರ.

ಇದಾಗ್ಯೂ ಅನೂಜ್ ರಾವತ್ಗೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡುತ್ತಿರುವ ಬಗ್ಗೆ ಇದೀಗ ಅಭಿಮಾನಿಗಳಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಅತ್ತ ತಂಡದಲ್ಲಿ ಆಲ್ರೌಂಡರ್ ಆಗಿ ಕನ್ನಡಿಗ ಮನೋಜ್ ಭಾಂಡಗೆ ಇದ್ದರೂ, ಕಳೆದ 11 ಪಂದ್ಯಗಳಲ್ಲಿ ಒಂದೇ ಒಂದು ಚಾನ್ಸ್ ನೀಡಿಲ್ಲ.

ಇತ್ತ ಕಳೆದ ಸೀಸನ್ನಲ್ಲಿ 8 ಪಂದ್ಯಗಳಲ್ಲಿ ವಿಫಲರಾಗಿದ್ದರೂ, ಈ ಬಾರಿ ಕೂಡ ಆರ್ಸಿಬಿ ಅನೂಜ್ ರಾವತ್ ಅವರನ್ನು 6 ಪಂದ್ಯಗಳಲ್ಲಿ ಕಣಕ್ಕಿಳಿಸಿದೆ. ಈ ಐದು ಪಂದ್ಯಗಳಲ್ಲಿ 3.4 ಕೋಟಿಯ ಆಟಗಾರ ಕಲೆಹಾಕಿರುವುದು 39 ರನ್ ಅಂದರೆ ನಂಬಲೇಬೇಕು.