Arjun Tendulkar: ಭರ್ಜರಿ ಬೌಲಿಂಗ್ ಮೂಲಕ ಮಿಂಚಿದ ಅರ್ಜುನ್ ತೆಂಡೂಲ್ಕರ್

| Updated By: ಝಾಹಿರ್ ಯೂಸುಫ್

Updated on: Apr 26, 2023 | 5:31 PM

IPL 2023 Kannada: , ಮುಂಬೈ ಇಂಡಿಯನ್ಸ್ ತಂಡದ ಇತರೆ ಬೌಲರ್​ಗಳು ದುಬಾರಿಯಾದ ಕಾರಣ ಗುಜರಾತ್ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್​ ಕಲೆಹಾಕಿತು.

1 / 7
IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 1 ಓವರ್​ನಲ್ಲಿ ಬರೋಬ್ಬರಿ 31 ರನ್ ನೀಡಿ ದುಬಾರಿಯಾಗಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಭರ್ಜರಿ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

2 / 7
ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ದುಕೊಂಡಿತು. ಅಲ್ಲದೆ ಮೊದಲ ಓವರ್​ ಅನ್ನು ಅರ್ಜುನ್ ತೆಂಡೂಲ್ಕರ್​ಗೆ ನೀಡಿದರು.

3 / 7
ಮೊದಲ ಓವರ್​ನಲ್ಲೇ ಕರಾರುವಾಕ್ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ ನೀಡಿರುವುದು ಕೇವಲ 4 ರನ್​ ಮಾತ್ರ. ಇದಾದ ಬಳಿಕ ಮೂರನೇ ಓವರ್​ನ ಮೊದಲ ಎಸೆತದಲ್ಲೇ ವೃದ್ಧಿಮಾನ್ ಸಾಹ ವಿಕೆಟ್ ಪಡೆದರು. ಅಲ್ಲದೆ ಈ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿದ್ದರು.

4 / 7
ಅಂದರೆ ಪವರ್​ಪ್ಲೇನಲ್ಲಿ 2 ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಕೇವಲ 9 ರನ್ ನೀಡಿ 1 ವಿಕೆಟ್ ಪಡೆದಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಅತ್ಯಂತ ಕಡಿಮೆ ರನ್ ನೀಡಿದ್ದು ಕೂಡ ಅರ್ಜುನ್ ತೆಂಡೂಲ್ಕರ್.

5 / 7
6 ಬೌಲರ್​ಗಳೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ಪರ ಅರ್ಜುನ್ ತೆಂಡೂಲ್ಕರ್ ಅವರನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ಬೌಲರ್​ಗಳು ದುಬಾರಿಯಾಗಿದ್ದರು. ಜೇಸನ್ ಬೆಹ್ರೆನ್ಡಾರ್ಫ್ 4 ಓವರ್​ಗಳಲ್ಲಿ 37 ರನ್ ನೀಡಿದರೆ, ರಿಲೆ ಮೆರಿಡಿತ್ 4 ಓವರ್​ಗಳಲ್ಲಿ 49 ರನ್ ಹೊಡೆಸಿಕೊಂಡಿದ್ದರು.

6 / 7
ಇನ್ನು ಕ್ಯಾಮರೋನ್ ಗ್ರೀನ್ 2 ಓವರ್​ಗಳಲ್ಲಿ ಬರೋಬ್ಬರಿ 39 ರನ್ ಚಚ್ಚಿಸಿಕೊಂಡಿದ್ದರು. ಹಾಗೆಯೇ ಪಿಯೂಷ್ ಚಾವ್ಲಾ 4 ಓವರ್​ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಕುಮಾರ್ ಕಾರ್ತಿಕೇಯ 4 ಓವರ್​ಗಳಲ್ಲಿ 39 ರನ್ ನೀಡಿದ್ದರು.

7 / 7
ಇತ್ತ ಅರ್ಜುನ್ ತೆಂಡೂಲ್ಕರ್ ಪವರ್​ಪ್ಲೇನಲ್ಲಿ 2 ಓವರ್​ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರೂ, ಮುಂಬೈ ಇಂಡಿಯನ್ಸ್ ತಂಡದ ಇತರೆ ಬೌಲರ್​ಗಳು ದುಬಾರಿಯಾದ ಕಾರಣ ಗುಜರಾತ್ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್​ ಕಲೆಹಾಕಿತು.

Published On - 11:19 pm, Tue, 25 April 23