IPL 2023 Auction: ಐಪಿಎಲ್​ ಮಿನಿ ಹರಾಜಿನಲ್ಲಿ RCB ಎಷ್ಟು ಆಟಗಾರರನ್ನು ಖರೀದಿಸಬಹುದು?

| Updated By: ಝಾಹಿರ್ ಯೂಸುಫ್

Updated on: Dec 01, 2022 | 9:23 PM

IPL 2023 Auction: ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಫಿನ್ ಅಲೆನ್ ಹಾಗೂ ಜೋಶ್ ಹ್ಯಾಝಲ್​ವುಡ್ RCB ತಂಡದಲ್ಲಿದ್ದಾರೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಭರ್ಜರಿ ತಯಾರಿಗಳು ಆರಂಭವಾಗಿವೆ. ಈಗಾಗಲೇ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಇತರೆ ಆಟಗಾರರನ್ನು ರಿಲೀಸ್ ಮಾಡಿದೆ. ಅಲ್ಲದೆ ಡಿಸೆಂಬರ್ 23 ರಂದು ನಡೆಯಲಿರುವ ಐಪಿಎಲ್ ಮಿನಿ ಹರಾಜಿಗಾಗಿ ಮಾಸ್ಟರ್​ ಪ್ಲ್ಯಾನ್​ಗಳನ್ನು ರೂಪಿಸುತ್ತಿದ್ದಾರೆ.

2 / 7
ಇತ್ತ ಆರ್​ಸಿಬಿ ತಂಡವು ಒಟ್ಟು 18 ಆಟಗಾರರನ್ನು ಉಳಿಸಿಕೊಂಡಿದೆ. ಅಂದರೆ ಈ ಬಾರಿ 7 ಆಟಗಾರರನ್ನು ಖರೀದಿಸುವ ಅವಕಾಶ ಹೊಂದಿದೆ. ಏಕೆಂದರೆ ಐಪಿಎಲ್ ತಂಡವೊಂದರಲ್ಲಿ 25 ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಅದರಲ್ಲಿ 8 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು.

3 / 7
ಇಲ್ಲಿ ಆರ್​ಸಿಬಿ ತಂಡವು ಒಟ್ಟು 6 ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ. ಅವರೆಂದರೆ ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಫಿನ್ ಅಲೆನ್ ಹಾಗೂ ಜೋಶ್ ಹ್ಯಾಝಲ್​ವುಡ್. ಹೀಗಾಗಿ ಆರ್​ಸಿಬಿ ಮಿನಿ ಹರಾಜಿನಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದು. ಹಾಗೆಯೇ 5 ಭಾರತೀಯ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಹೊಂದಿದೆ.

4 / 7
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಆರ್​ಸಿಬಿ ಈಗಾಗಲೇ 18 ಆಟಗಾರರನ್ನು ಉಳಿಸಿಕೊಂಡಿರುವುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 18 ಆಟಗಾರರು ಇರಲೇಬೇಕು. ಇಲ್ಲಿ ಕನಿಷ್ಠ 18 ಆಟಗಾರರು, ಗರಿಷ್ಠ 25 ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

5 / 7
ಅಂದರೆ ಆರ್​ಸಿಬಿ ತಂಡದಲ್ಲಿ 18 ಆಟಗಾರರು ಇರುವುದರಿಂದ ಉಳಿದಿರುವ ಹರಾಜು ಮೊತ್ತದಲ್ಲಿ ಎಷ್ಟು ಬೇಕು ಅಷ್ಟು  ಆಟಗಾರರನ್ನು ಮಾತ್ರ ಖರೀದಿಸಬಹುದು. ಉದಾಹರಣೆಗೆ ಆರ್​ಸಿಬಿ ಕಳೆದ ಸೀಸನ್​​ನಲ್ಲಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು.

6 / 7
ಸದ್ಯ 5+2 ಆಟಗಾರರ ಆಯ್ಕೆಗೆ ಅವಕಾಶ​ ಹೊಂದಿರುವ ಆರ್​ಸಿಬಿ ಬಳಿ 8.75 ಕೋಟಿ ಹರಾಜು ಮಾತ್ರ ಇದೆ. ಹೀಗಾಗಿ ಈ ಮೊತ್ತದಲ್ಲಿ ಒಂದಿಬ್ಬರು ಸ್ಟಾರ್ ಆಟಗಾರರನ್ನು ಖರೀದಿಸುವ ಸಾಧ್ಯತೆಯಿದ್ದು, ಇನ್ನುಳಿದ ಮೊತ್ತದಲ್ಲಿ 20 ಲಕ್ಷ ಮೂಲ ಬೆಲೆ ಹೊಂದಿರುವ ಯುವ ಆಟಗಾರರಿಗೆ ಮಣೆಹಾಕಬಹುದು.

7 / 7
RCB ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್