IPL 2023: ಏನಿದು ಗ್ರೀನ್ ಟ್ರೀ: ಹೊಸ ಅಭಿಯಾನಕ್ಕೆ ಚಾಲನೆ ನೀಡಿದ BCCI
TV9 Web | Updated By: ಝಾಹಿರ್ ಯೂಸುಫ್
Updated on:
May 24, 2023 | 6:03 PM
IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ರುತುರಾಜ್ ಗಾಯಕ್ವಾಡ್ (60) ಅವರ ಅರ್ಧಶತಕದ ನೆರವಿನಿಂದ 172 ರನ್ ಕಲೆಹಾಕಿತು.
1 / 6
IPL 2023 GT vs CSK: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ಸ್ಕೋರ್ ಬೋರ್ಡ್ನಲ್ಲಿ ಕಾಣಿಸಿಕೊಂಡ ವಿಶೇಷ ಗ್ರಾಫಿಕ್ಸ್.
2 / 6
ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಈ ಪಂದ್ಯದ ಓವರ್ಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಗ್ರಾಫಿಕ್ಸ್ ಚಿತ್ರವನ್ನು ನೀಡಲಾಗಿತ್ತು. ಇಂತಹದೊಂದು ಚಿತ್ರ ನೀಡಲು ಮುಖ್ಯ ಕಾರಣ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನ.
3 / 6
ಹೌದು, ಐಪಿಎಲ್ ಪ್ಲೇಆಫ್ಸ್ ಪಂದ್ಯಗಳ ವೇಳೆ ಬೌಲ್ ಮಾಡುವ ಪ್ರತಿ ಡಾಟ್ ಬಾಲ್‌ಗೆ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಹೀಗಾಗಿ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರವನ್ನು ಬಳಸಲಾಗಿದೆ.
4 / 6
ಇದೀಗ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನದ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಇದರಿಂದ ಭಾರತವು ಮತ್ತಷ್ಟು ಹಸಿರುಮಯವಾಗಲಿದೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.
5 / 6
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ರುತುರಾಜ್ ಗಾಯಕ್ವಾಡ್ (60) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು.
6 / 6
173 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 157 ರನ್ಗಳಿಗೆ ಆಲೌಟ್ ಆಗುವ ಮೂಲಕ 15 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಸಿಎಸ್ಕೆ ಫೈನಲ್ ಪ್ರವೇಶಿಸಿದೆ.
Published On - 11:31 pm, Tue, 23 May 23