Updated on: May 23, 2023 | 10:06 PM
IPL 2023: ಐಪಿಎಲ್ನ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ 6 ತಂಡಗಳು ಹೊರಬಿದ್ದರೆ, 4 ತಂಡಗಳು ಪ್ಲೇಆಫ್ಸ್ ಪ್ರವೇಶಿಸಿದೆ. ಅದರಂತೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್ಸ್ ಆಡುತ್ತಿದೆ.
ಮತ್ತೊಂದೆಡೆ ಪ್ರಶಸ್ತಿ ಗೆಲ್ಲುವ ಕನಸಿದೊಂದಿಗೆ ಟೂರ್ನಿ ಆರಂಭಿಸಿದ 6 ತಂಡಗಳ ಆಟಗಾರರು ಗ್ರೂಪ್ ಫೋಟೋದೊಂದಿಗೆ ಐಪಿಎಲ್ ಸೀಸನ್ 16 ಕ್ಕೆ ಗುಡ್ ಬೈ ಹೇಳಿದ್ದಾರೆ. ಈ ತಂಡಗಳ ಫೋಟೋಸ್ ಇಲ್ಲಿದೆ...
ಸನ್ರೈಸರ್ಸ್ ಹೈದರಾಬಾದ್: ಈ ಬಾರಿಯ ಐಪಿಎಲ್ನಲ್ಲಿ ಐಡೆನ್ ಮಾರ್ಕ್ರಾಮ್ ನೇತೃತ್ವದ ಎಸ್ಆರ್ಹೆಚ್ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅಲ್ಲದೆ ಎಸ್ಆರ್ಹೆಚ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ ಮುನ್ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಕೂಡ ಉತ್ತಮವಾಗಿರಲಿಲ್ಲ. 14 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅಲ್ಲದೆ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನ ಅಲಂಕರಿಸುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್ ಸಾರಥ್ಯದಲ್ಲಿ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ಈ ಬಾರಿ ಗೆದ್ದಿದ್ದು ಕೇವಲ 6 ಪಂದ್ಯಗಳಲ್ಲಿ ಮಾತ್ರ. ಅಲ್ಲದೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದೊಂದಿಗೆ ಐಪಿಎಲ್ನ 16ನೇ ಆವೃತ್ತಿಗೆ ವಿದಾಯ ಹೇಳಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಈ ಬಾರಿ ನಿತೀಶ್ ರಾಣಾ ನಾಯಕತ್ವದಲ್ಲಿ ಕಣಕ್ಕಿಳಿದ ಕೆಕೆಆರ್ ತಂಡವು ಗೆದ್ದಿದ್ದು ಕೇವಲ 6 ಮ್ಯಾಚ್ಗಳಲ್ಲಿ ಮಾತ್ರ. ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನ ಅಲಂಕರಿಸಿ ಐಪಿಎಲ್ ಅಭಿಯಾನ ಮುಗಿಸಿದೆ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವು 14 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಆರ್ಸಿಬಿ ತಂಡವು 14 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 7 ಪಂದ್ಯಗಳನ್ನು ಮಾತ್ರ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿಕೊಂಡಿತು. ಇದರೊಂದಿಗೆ ಆರ್ಸಿಬಿ ತಂಡದ ಐಪಿಎಲ್ ಅಭಿಯಾನ ಕೂಡ ಕೊನೆಗೊಂಡಿತು.