IPL 2023: ಕರ್ಮ ನಿಮ್ಮನ್ನ ಬಿಡಲ್ಲ ಎಂದ RCB ಮಾಜಿ ಆಟಗಾರ

| Updated By: ಝಾಹಿರ್ ಯೂಸುಫ್

Updated on: Apr 11, 2023 | 7:23 PM

IPL 2023 Kannada: ಕೊನೆಯ ಎಸೆತದಲ್ಲಿ 1 ರನ್​ಗಳ ಅವಶ್ಯಕತೆ. ಅತ್ತ ಆರ್​ಸಿಬಿಗೆ 1 ವಿಕೆಟ್​ನ ಅನಿವಾರ್ಯತೆ. ಈ ಹಂತದಲ್ಲಿ ಬೌಲಿಂಗ್ ಮಾಡಲು ಓಡಿ ಬಂದ ಹರ್ಷಲ್ ಪಟೇಲ್ ನಾನ್​ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಅವರನ್ನು ಮಂಕಡ್ ರನೌಟ್ ಮಾಡಲು ಯತ್ನಿಸಿದ್ದರು.

1 / 7
IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್​ಸಿಬಿ ತಂಡವು ಕೊನೆಯ ಎಸೆತದಲ್ಲಿ ಸೋಲನುಭವಿಸಿತ್ತು. ಆದರೆ ಈ ಸೋಲಿನ ಬೆನ್ನಲ್ಲೇ ಆರ್​ಸಿಬಿ ತಂಡದ ಮಾಜಿ ಆಟಗಾರ ಮಾಡಿದ ಟ್ವೀಟ್​ವೊಂದು ಇದೀಗ ಚರ್ಚೆಗೆ ಕಾರಣವಾಗಿದೆ.

2 / 7
ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 212 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್​ನ 5 ಎಸೆತಗಳಲ್ಲಿ ಲಕ್ನೋ ಆಟಗಾರರು 4 ರನ್​ ಕಲೆಹಾಕಿದ್ದರು.

3 / 7
ಕೊನೆಯ ಎಸೆತದಲ್ಲಿ 1 ರನ್​ಗಳ ಅವಶ್ಯಕತೆ. ಅತ್ತ ಆರ್​ಸಿಬಿಗೆ 1 ವಿಕೆಟ್​ನ ಅನಿವಾರ್ಯತೆ. ಈ ಹಂತದಲ್ಲಿ ಬೌಲಿಂಗ್ ಮಾಡಲು ಓಡಿ ಬಂದ ಹರ್ಷಲ್ ಪಟೇಲ್ ನಾನ್​ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಅವರನ್ನು ಮಂಕಡ್ ರನೌಟ್ ಮಾಡಲು ಯತ್ನಿಸಿದ್ದರು. ಆದರೆ ಓಡಿ ಬಂದ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸುವಲ್ಲಿ ವಿಫಲರಾದರು. ಇದಾಗ್ಯೂ ರನೌಟ್ ಮಾಡಿದ್ರೂ ಅಂಪೈರ್ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದರು.

4 / 7
ಆ ಬಳಿಕ ಹರ್ಷಲ್ ಪಟೇಲ್ ಎಸೆದ ಕೊನೆಯ ಎಸೆತವನ್ನು ಬ್ಯಾಟ್​ಗೆ ತಗುಲಿಸುವಲ್ಲಿ ಅವೇಶ್ ಖಾನ್ ವಿಫಲರಾದರು. ಇದಾಗ್ಯೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡನ್ನು ಹಿಡಿಯುವಲ್ಲಿ ಎಡವಿದರು. ಕ್ಷಣಾರ್ಧದಲ್ಲಿ ಅವೇಶ್ ಖಾನ್ ಹಾಗೂ ರವಿ ಬಿಷ್ಣೋಯ್ 1 ರನ್​ ಓಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 1 ವಿಕೆಟ್​ನ ರೋಚಕ ಜಯ ತಂದುಕೊಟ್ಟರು.

5 / 7
ಇತ್ತ ಆರ್​ಸಿಬಿ ತಂಡವು ಸೋಲುತ್ತಿದ್ದಂತೆ ಎಸ್​ಆರ್​ಹೆಚ್ ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಕರ್ಮ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದಂತೆ ಸ್ಟೇನ್ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

6 / 7
ಆದರೆ ಇದೀಗ ಮಾಜಿ ಆರ್​ಸಿಬಿ ಆಟಗಾರನಾಗಿರುವ ಡೇಲ್ ಸ್ಟೇನ್ ಅವರು ಆರ್​ಸಿಬಿ ಸೋಲಿಗೆ ಕರ್ಮ ಬಿಡಲ್ಲ ಎಂದೇಳಲು ಕಾರಣವೇನು? ಎಂಬ ಚರ್ಚೆ ಶುರುವಾಗಿದೆ. ಕೆಲವರು ಸ್ಟೇನ್ ಮಂಕಡ್ ರನೌಟ್​ಗೆ ವಿರುದ್ಧ ಎಂದರೆ, ಇನ್ನು ಕೆಲವರು ಆರ್​ಸಿಬಿ ಫ್ರಾಂಚೈಸಿ ಈ ಹಿಂದೆ ಸ್ಟೇನ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಇದರ ಆಕ್ರೋಶ ಹೊರಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

7 / 7
ಒಟ್ಟಿನಲ್ಲಿ ಆರ್​ಸಿಬಿ ಸೋಲಿನ ಬೆನ್ನಲ್ಲೇ ಡೇಲ್ ಸ್ಟೇನ್ ಅವರ ಕರ್ಮ ಟ್ವೀಟ್ ಮಾತ್ರ ಸಖತ್ ವೈರಲ್ ಆಗಿದ್ದು ಮಾತ್ರ ಸುಳ್ಳಲ್ಲ.