IPL 2023 Final: 15 ಓವರ್​ಗಳ ಪಂದ್ಯ: CSK ತಂಡಕ್ಕೆ ಸ್ಪರ್ಧಾತ್ಮಕ ಗುರಿ

| Updated By: ಝಾಹಿರ್ ಯೂಸುಫ್

Updated on: May 30, 2023 | 12:14 AM

IPL 2023 Final CSK vs GT: ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ ತಂಡದ ಪರ ಸಾಯಿ ಸುದರ್ಶನ್ ಅಬ್ಬರಿಸಿದರು. ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 96 ರನ್​ ಬಾರಿಸಿದರು.

1 / 5
IPL 2023 Final CSK vs GT: ಐಪಿಎಲ್ ಸೀಸನ್ 16ರ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾನುವಾರ ನಡೆಯಬೇಕಿದ್ದ ಪಂದ್ಯವು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಇಂದು ಆರಂಭವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

2 / 5
ಇತ್ತ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ ತಂಡದ ಪರ ಸಾಯಿ ಸುದರ್ಶನ್ ಅಬ್ಬರಿಸಿದರು. ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 96 ರನ್ ಬಾರಿಸಿ ಸಾಯಿ ಸುದರ್ಶನ್ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವನಿಂದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು.

3 / 5
215 ರನ್​ಗಳ ಗುರಿ ಬೆನ್ನತ್ತಲು ಆಗಮಿಸಿದ ಸಿಎಸ್​ಕೆ ತಂಡದ ಇನಿಂಗ್ಸ್​ ವೇಳೆ ಮಳೆ ಬರಲಾರಂಭಿಸಿದೆ. ಹೀಗಾಗಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇದೀಗ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್​ಗಳ ಕಡಿತದೊಂದಿಗೆ 12.10 ಕ್ಕೆ ಪಂದ್ಯ ಮುಂದುವರೆಸಲು ನಿರ್ಧರಿಸಲಾಗಿದೆ.

4 / 5
ಅದರಂತೆ ಸಿಎಸ್​ಕೆ ತಂಡವು ಗೆಲ್ಲಲು 15 ಓವರ್​ಗಳಲ್ಲಿ 171 ರನ್ ಕಲೆಹಾಕಬೇಕು. ಇನ್ನು ಆ ಬಳಿಕ ಮಳೆ ಬಂದರೆ ಮತ್ತೆ ಓವರ್ ಕಡಿತ ಮಾಡಲಾಗುತ್ತದೆ. ಹೀಗಾದರೆ 12 ಓವರ್​ಗಳಲ್ಲಿ 143 ರನ್​ಗಳ ಗುರಿ ಹೊಂದಿರಲಿದೆ. ಹಾಗೆಯೇ 10 ಓವರ್​ಗಳಲ್ಲಿ ಸಿಎಸ್​ಕೆ ತಂಡದ ಗುರಿ 123 ಆಗಿರಲಿದೆ.

5 / 5
ಸದ್ಯ 90 ಎಸೆತಗಳಲ್ಲಿ 171 ರನ್​ಗಳ ಗುರಿ ಪಡೆದಿರುವ ಸಿಎಸ್​ಕೆ ತಂಡವು ಪ್ರತಿ ಓವರ್​ಗೆ 11.4 ರನ್​ಗಳಿಸಬೇಕು. ಇನ್ನು ಓವರ್​ ಕಡಿತದೊಂದಿಗೆ ಪವರ್​ಪ್ಲೇ ಓವರ್ ಸಂಖ್ಯೆ 4 ಕ್ಕೆ ಇಳಿಕೆ ಮಾಡಲಾಗಿದೆ. ಹೀಗಾಗಿ ಸಿಎಸ್​ಕೆ ತಂಡದ ಮುಂದಿರುವುದು ಕಠಿಣ ಸವಾಲು ಎನ್ನಬಹುದು.

Published On - 11:57 pm, Mon, 29 May 23