IPL 2023: 13 ಕೋಟಿಗೆ ಕೊನೆಗೂ ಬಂತು ಬೆಲೆ; 55 ಎಸೆತಗಳಲ್ಲಿ ಅಬ್ಬರದ ಶತಕ ಸಿಡಿಸಿದ ಬ್ರೂಕ್..!

|

Updated on: Apr 14, 2023 | 9:49 PM

Harry Brook: ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬ್ರೂಕ್ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 55 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್​ ಒಳಗೊಂಡಂತೆ 100 ರನ್ ಬಾರಿಸಿದರು.

1 / 6
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್​ನ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ.

2 / 6
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬ್ರೂಕ್ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 55 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್​ ಒಳಗೊಂಡಂತೆ 100 ರನ್ ಬಾರಿಸಿದರು.

3 / 6
ವಾಸ್ತವವಾಗಿ ಬ್ರೂಕ್ ಮೊದಲ 3 ಪಂದ್ಯಗಳಲ್ಲಿ ಸೂಪರ್ ಫ್ಲಾಪ್ ಆಗಿದ್ದರು. ಹೀಗಾಗಿ ಬ್ರೂಕ್ ಅವರಿಗೆ ಮಿನಿ ಹರಾಜಿನಲ್ಲಿ ಟ13 ಕೋಟಿ ನೀಡಿದ್ದು ವ್ಯರ್ಥ ಎಂದು ಹಲವರು ಮಾತನಾಡಲಾರಂಭಿಸಿದ್ದರು. ಆದರೆ ಇಂದಿನ ಪಂದ್ಯದಲ್ಲಿನ ಇನ್ನಿಂಗ್ಸ್ ಮೂಲಕ ಬ್ರೂಕ್ ಎಲ್ಲರಿಗೂ ಉತ್ತರ ನೀಡಿದ್ದಾರೆ.

4 / 6
ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಸುನಿಲ್ ನರೈನ್​ರಂತಹ ಸ್ಟಾರ್​ ಬೌಲರ್​ಗಳಿಗೆ ಮಣ್ಣು ಮುಕ್ಕಿಸಿದ ಬ್ರೂಕ್ 32 ಎಸೆತಗಳಲ್ಲಿ 50 ರನ್ ಪೂರೈಸಿದರು. 50 ರನ್ ಪೂರೈಸಿದ ನಂತರ ಮತ್ತಷ್ಟು ಆಕ್ರಮಣಕಾರಿಯಾದ ಬ್ರೂಕ್, ಲಾಕಿ ಫರ್ಗುಸನ್ ಅವರ ಓವರ್‌ನಲ್ಲಿ ಬೌಂಡರಿ ಸಿಕ್ಸರ್​ಗಳ ಮಳೆಗರೆದು ಈ ಓವರ್‌ನಲ್ಲಿ 23 ರನ್‌ ಕಲೆಹಾಕಿದರು.

5 / 6
ಈ ಶತಕದೊಂದಿಗೆ ಐಪಿಎಲ್​ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಬರೆದ ಬ್ರೂಕ್, 16ನೇ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದರು.

6 / 6
ಇವರಲ್ಲದೆ ತಂಡದ ನಾಯಕ ಮಾರ್ಕ್ರಾಮ್ ಕೂಡ ಕೋಲ್ಕತ್ತಾ ವಿರುದ್ಧ 26 ಎಸೆತಗಳಲ್ಲಿ 50 ರನ್ ಗಳಿಸಿದರು. ಮಾರ್ಕ್ರಾಮ್ ಅವರ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 5 ಸಿಕ್ಸರ್‌ ಹಾಗೂ 2 ಬೌಂಡರಿ ಸೇರಿದ್ದವು.

Published On - 9:39 pm, Fri, 14 April 23