IPL 2023: ಮುಂಬೈ ಇಂಡಿಯನ್ಸ್​ಗೆ ಡಬಲ್ ಶಾಕ್: ತಂಡದಿಂದ ಇಬ್ಬರು ಆಟಗಾರರು ಔಟ್

| Updated By: ಝಾಹಿರ್ ಯೂಸುಫ್

Updated on: Mar 11, 2023 | 3:44 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಈ ಬಾರಿ ಬಲಿಷ್ಠ ಪಡೆಯೊಂದಿಗೆ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾ ಪಡೆಯ ಇಬ್ಬರು ಆಟಗಾರರು ಟೂರ್ನಿ ಆರಂಭಕ್ಕೂ ಮೊದಲೇ ತಂಡದಿಂದ ಹೊರಗುಳಿದಿದ್ದಾರೆ.

2 / 6
ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಐಪಿಎಲ್​ನಿಂದ ಹೊರಗುಳಿಯುವುದು ಖಚಿತವಾಗಿತ್ತು. ಬೆನ್ನು ನೋವಿನ ಸಮಸ್ಯೆಯ ಕಾರಣ ಇದೀಗ ಬುಮ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಮುಂದಿನ 6 ತಿಂಗಳುಗಳ ಕಾಲ ಮೈದಾನಕ್ಕಿಳಿಯುವುದಿಲ್ಲ.

3 / 6
ಇತ್ತ ಜಸ್​ಪ್ರೀತ್ ಬುಮ್ರಾ ಅವರ ಅಲಭ್ಯತೆಯ ಬೆನ್ನಲ್ಲೇ ಇದೀಗ ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ವೇಗಿ ಜ್ಯೆ ರಿಚರ್ಡ್​ಸನ್ ಕೂಡ ಐಪಿಎಲ್​ನಿಂದ ಹೊರಗುಳಿಯುವುದನ್ನು ಖಚಿತಪಡಿಸಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸೀಸ್ ವೇಗಿ ಸರ್ಜರಿಗೆ ಒಳಗಾಗಿದ್ದಾರೆ.

4 / 6
ಹೀಗಾಗಿ ಐಪಿಎಲ್ ಸೀಸನ್ 16 ನಲ್ಲಿ ಜ್ಯೆ ರಿಚರ್ಡ್​ಸನ್ ಕಾಣಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಭಾರತದ ವಿರುದ್ಧದ ಏಕದಿನ ಸರಣಿಯಲ್ಲೂ ಭಾಗವಹಿಸುವುದಿಲ್ಲ. ಅಂದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಇಬ್ಬರು ಪ್ರಮುಖ ಬೌಲರ್​ಗಳು ಐಪಿಎಲ್​ನಿಂದ ಹೊರಗುಳಿದಿದ್ದು, ಇದು ರೋಹಿತ್ ಶರ್ಮಾ ಪಡೆಯ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು.

5 / 6
ಏಕೆಂದರೆ ಜಸ್​ಪ್ರೀತ್ ಬುಮ್ರಾ ಹಾಗೂ ಜ್ಯೆ ರಿಚರ್ಡ್​ಸನ್ ಅವರ ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ಮುಂದಿದೆ. ಇತ್ತ ಐಪಿಎಲ್ ಆರಂಭವಾಗಲು ಕೇವಲ 20 ದಿನಗಳು ಮಾತ್ರ ಉಳಿದಿದ್ದು. ಇದರ ನಡುವೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾರಿಗೆ ಮಣೆಹಾಕಲಿದೆ ಎಂಬುದೇ ಕುತೂಹಲ.

6 / 6
ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್, ರಾಘವ್ ಗೋಯಲ್, ನೆಹಾಲ್ ವಾಧೇರಾ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ದುವಾನ್ ಜಾನ್ಸೆನ್, ಪಿಯೂಷ್ ಚಾವ್ಲಾ, ಕ್ಯಾಮರೋನ್ ಗ್ರೀನ್..