IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…

| Updated By: ಝಾಹಿರ್ ಯೂಸುಫ್

Updated on: Dec 24, 2022 | 8:31 PM

IPL 2023 RCB Probable Playing XI: ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದ ಆಟಗಾರರೇ ಈ ಸಲ ಕೂಡ ಆಡುವ ಬಳಗದಲ್ಲಿ ಮುಂದುವರೆಯಲಿದ್ದಾರೆ.

1 / 15
ಐಪಿಎಲ್ ಸೀಸನ್ 16 ಗಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು 25 ಸದಸ್ಯರ ಬಲಿಷ್ಠ ಬಳಗವನ್ನೇ ರೂಪಿಸಿದೆ. ಕಳೆದ ಸೀಸನ್​ನಲ್ಲಿ ತಂಡದಲ್ಲಿದ್ದ 18 ಆಟಗಾರರ ಜೊತೆ ಈ ಬಾರಿ 7 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಹೊಸ ಆಟಗಾರರ ಆಗಮನದ ಹೊರತಾಗಿಯೂ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಏಕೆಂದರೆ...

2 / 15
ಆರ್​ಸಿಬಿ ಫ್ರಾಂಚೈಸಿಯು ಈ ಬಾರಿಯ ಹರಾಜಿಗೂ ಮುನ್ನ 18 ಆಟಗಾರರನ್ನು ಉಳಿಸಿಕೊಂಡಿತ್ತು. ಈ 18 ಆಟಗಾರರಲ್ಲಿ ಆರ್​ಸಿಬಿ ಕಣಕ್ಕಿಳಿಸುತ್ತಿದ್ದ ಪ್ಲೇಯಿಂಗ್ ಇಲೆವೆನ್​ನ ಸದಸ್ಯರಿದ್ದರು ಎಂಬುದು ವಿಶೇಷ. ಅಂದರೆ ಹರಾಜಿಗೂ ಮುನ್ನವೇ ಆರ್​ಸಿಬಿ ತಂಡವು ತನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ಹಾಗೆಯೇ ಉಳಿಸಿಕೊಂಡಿತ್ತು.

3 / 15
ಇಲ್ಲಿ ಆರಂಭಿಕರಾಗಿ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್ ಮುಂದುವರೆಯಲಿದ್ದಾರೆ. ಒಂದು ವೇಳೆ ಓಪನರ್​ ಬದಲಾದರೆ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು. ಇಲ್ಲದಿದ್ರೆ ಕೊಹ್ಲಿಯೇ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

4 / 15
ಇನ್ನು 4ನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸುವುದು ಖಚಿತ. ಏಕೆಂದರೆ ಕಳೆದ ಸೀಸನ್​ನಲ್ಲಿ ಸಿಕ್ಕ ಅವಕಾಶದಲ್ಲಿ ಪಾಟಿದಾರ್ ಭರ್ಜರಿ ಶತಕ ಸಿಡಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

5 / 15
ಹಾಗೆಯೇ 5ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಗಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಉತ್ತಮ ಫೀಲ್ಡಿಂಗ್ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮ್ಯಾಕ್ಸ್​ವೆಲ್ ಸ್ಥಾನದಲ್ಲೂ ಬದಲಾವಣೆ ಕಂಡು ಬರುವುದಿಲ್ಲ.

6 / 15
6ನೇ ಕ್ರಮಾಂಕದಲ್ಲಿ ಫಿನಿಶರ್​ ಆಗಿ ದಿನೇಶ್ ಕಾರ್ತಿಕ್ ಬ್ಯಾಟ್ ಬೀಸಲಿದ್ದಾರೆ. ಅಲ್ಲದೆ ಈ ಹಿಂದಿನಂತೆ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ಕೂಡ ಡಿಕೆ ನಿರ್ವಹಿಸಲಿದ್ದಾರೆ.

7 / 15
7ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಗಿ ಶಹಬಾಝ್ ಅಹ್ಮದ್ ಆಡುವುದು ಖಚಿತ. ಏಕೆಂದರೆ ಎಡಗೈ ಸ್ಪಿನ್ನರ್ ಆಗಿರುವ ಶಹಬಾಝ್ ಇದೀಗ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ.

8 / 15
ಇನ್ನು 8ನೇ ಕ್ರಮಾಂಕದಲ್ಲಿ ಸ್ಪಿನ್ ಆಲ್​ರೌಂಡರ್ ವನಿಂದು ಹಸರಂಗ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಉರುಳಿಸಿದ್ದರು.

9 / 15
9ನೇ ಕ್ರಮಾಂಕದಲ್ಲಿ ಬೌಲರ್​ ಆಗಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಐಪಿಎಲ್ ಸೀಸನ್ 15 ನಲ್ಲಿ ಹರ್ಷಲ್ ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಹೀಗಾಗಿ ಅವರೇ ಮುಂದುರೆಯಲಿದ್ದಾರೆ.

10 / 15
10ನೇ ಕ್ರಮಾಂಕದಲ್ಲಿ ಜೋಶ್ ಹ್ಯಾಝಲ್​ವುಡ್ ಆಡುವುದು ಖಚಿತ ಎಂದೇ ಹೇಳಬಹುದು. ಏಕೆಂದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ವಿಕೆಟ್ ಟೇಕರ್ ಬೌಲರ್​ ಆಗಿ ಹ್ಯಾಝಲ್​ವುಡ್ ಮಿಂಚಿದ್ದರು.

11 / 15
ಇನ್ನು 11ನೇ ಆಟಗಾರನಾಗಿ ಮೊಹಮ್ಮದ್ ಸಿರಾಜ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಪ್ರಸ್ತುತ ಫಾರ್ಮ್​ ಗಮನಿಸಿದರೆ ಸಿರಾಜ್ ಅತ್ಯುತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಮಣೆಹಾಕುವ ಸಾಧ್ಯತೆಯಿದೆ.

12 / 15
ಅಂದರೆ ಇಲ್ಲಿ ವಿದೇಶಿ ಆಟಗಾರರಾಗಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ಜೋಶ್ ಹ್ಯಾಝಲ್​ವುಡ್​ ಹಾಗೂ ವನಿಂದು ಹಸರಂಗ ಪ್ಲೇಯಿಂಗ್ ಇಲೆವೆನ್​​ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಆರ್​ಸಿಬಿ ತಂಡದ ವಿದೇಶಿ ಆಟಗಾರರ ಸ್ಥಾನದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ.

13 / 15
ಒಂದು ವೇಳೆ ಆರ್​ಸಿಬಿ ತಂಡವು ಆರಂಭಿಕ ಸ್ಥಾನದಿಂದ ಅನೂಜ್ ರಾವತ್ ಅವರನ್ನು ಕೈಬಿಟ್ಟರೆ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಬಹುದು. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರರ್ ಅಥವಾ ಸುಯಶ್ ಪ್ರಭುದೇಸಾಯಿಗೆ ಚಾನ್ಸ್​ ಸಿಗಬಹುದು. ಇಲ್ಲಿ ಎಡಗೈ ದಾಂಡಿಗನ ಕಣಕ್ಕಿಳಿಸಲು ಬಯಸಿದರೆ, ಮಹಿಪಾಲ್​ಗೆ ಅವಕಾಶ ಸಿಗಲಿದೆ. ಇಲ್ಲದಿದ್ದರೆ ಸುಯಶ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ.

14 / 15
ಅಂದರೆ ಆರ್​ಸಿಬಿ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ವಿದೇಶಿ ಆಟಗಾರರಾದ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿಗೆ ಆರಂಭದಲ್ಲಿ ಚಾನ್ಸ್ ಸಿಗುವುದು ಅನುಮಾನ ಎಂದೇ ಹೇಳಬಹುದು. ಏಕೆಂದರೆ ಕಳೆದ 2 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿರುವ ಫಿನ್ ಅಲೆನ್​ಗೆ ಇದುವರೆಗೆ ಪದಾರ್ಪಣೆ ಮಾಡುವ ಅವಕಾಶವೇ ದೊರೆತಿಲ್ಲ. ಇದಕ್ಕೆ ಒಂದು ಕಾರಣ ವಿದೇಶಿ ಆಟಗಾರರ ಕೋಟಾದಲ್ಲಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್, ಮ್ಯಾಕ್ಸ್​ವೆಲ್, ಹಸರಂಗ ಹಾಗೂ ಹ್ಯಾಝಲ್​ವುಡ್ ಉತ್ತಮ ಪ್ರದರ್ಶನ ನೀಡಿರುವುದು. ಹೀಗಾಗಿ ಈ ಬಾರಿ ಟೋಪ್ಲಿ ಹಾಗೂ ಜಾಕ್ಸ್ ಬೆಂಚ್ ಕಾಯಬೇಕಾಗಿ ಬರಬಹುದು.

15 / 15
ಇನ್ನು ಈ ಬಾರಿಯ ಮಿನಿ ಹರಾಜಿನಲ್ಲಿ ಆರ್​ಸಿಬಿ ಅತ್ಯುತ್ತಮ ಎನ್ನುವಂತಹ ಭಾರತೀಯ ಆಟಗಾರರನ್ನು ಕೂಡ ಖರೀದಿಸಿಲ್ಲ. ಹೀಗಾಗಿ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದ ಆಟಗಾರರೇ ಈ ಸಲ ಕೂಡ ಆಡುವ ಬಳಗದಲ್ಲಿ ಮುಂದುವರೆಯಲಿದ್ದಾರೆ.