IPL 2023: ಲಕ್ನೋ ತಂಡಕ್ಕೆ ಬಿಗ್ ಶಾಕ್; ನಿರ್ಣಾಯಕ ಪಂದ್ಯಗಳಿಗೆ ಸ್ಟಾರ್ ವೇಗಿ ಅಲಭ್ಯ..!
IPL 2023: ಲಕ್ನೋ ಸೂಪರ್‌ಜೈಂಟ್ಸ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಮಾರ್ಕ್ ವುಡ್ ಆಡಿರುವ 4 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
1 / 8
ಐಪಿಎಲ್ 2023ರಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ತಂಡದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ವೇಗಿ ಮಾರ್ಕ್ ವುಡ್ ಐಪಿಎಲ್ನಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2 / 8
ಶೀಘ್ರದಲ್ಲೇ ವುಡ್ ತಂದೆಯಾಗಿ ಬಡ್ತಿ ಪಡೆಯಲಿದ್ದಾರೆ. ಸದ್ಯ ಅವರ ಪತ್ನಿ 9 ತಿಂಗಳ ತುಂಬು ಗರ್ಭಿಣಿ. ಈ ಸಮಯದಲ್ಲಿ ಮಾರ್ಕ್ ವುಡ್ ತನ್ನ ಹೆಂಡತಿಯೊಂದಿಗೆ ಇರಲು ಬಯಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅವರು ಇಂಗ್ಲೆಂಡ್‌ಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
3 / 8
ಹೀಗಾಗಿ ಮಾರ್ಕ್ ವುಡ್ ಅಲಭ್ಯತೆ ಕೆಎಲ್ ರಾಹುಲ್ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡುತ್ತಿದೆ. ಏಕೆಂದರೆ ಲಕ್ನೋ ಸೂಪರ್‌ಜೈಂಟ್ಸ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಮಾರ್ಕ್ ವುಡ್ ಆಡಿರುವ 4 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
4 / 8
ಇದೀಗ ಮುಂಬರುವ ಲೀಗ್ ಪಂದ್ಯಗಳಲ್ಲಿ ಮಾರ್ಕ್ ವುಡ್ ಆಡದೇ ಇದ್ದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಏಕೆಂದರೆ ಸದ್ಯ ಐಪಿಎಲ್ ಲೀಗ್ ನಿರ್ಣಾಯಕ ಹಂತದಲ್ಲಿದೆ. ಲಕ್ನೋ ತಂಡ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸದ್ಯ ರಾಹುಲ್ ಪಡೆ ಪ್ಲೇ ಆಫ್ಗೆ ಏರಬೇಕೆಂದರೆ ಉಳಿದ 7 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲ್ಲಬೇಕು.
5 / 8
ಇಂತಹ ಸಮಯದಲ್ಲಿ ವುಡ್ ಇಲ್ಲದೆ, ಲಕ್ನೋದ ಬೌಲಿಂಗ್ ವಿಭಾಗವು ದುರ್ಬಲಗೊಳ್ಳುವುದು ಖಚಿತ. ಅನಾರೋಗ್ಯದ ಕಾರಣ ಮಾರ್ಕ್‌ವುಡ್ ಕೊನೆಯ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಫ್ಘಾನ್ ಸೀಮರ್ ನವೀನ್-ಉಲ್-ಹಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರು ಮಾರ್ಕ್ ವುಡ್ ಅವರಂತೆ ವಿಕೆಟ್ ಟೇಕರ್ ಅಲ್ಲ.
6 / 8
ಮಾರ್ಕ್ ವುಡ್ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಐದು ವಿಕೆಟ್ ಕಬಳಿಸುವ ಮೂಲಕ ಸಂಚಲನ ಮೂಡಿಸಿದ್ದರು. ಅಲ್ಲದೆ, 150 ಕಿ.ಮೀಗೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವ ವುಡ್ ಭಾರತದ ಪಿಚ್‌ಗಳಿಗೆ ಹೇಳಿ ಮಾಡಿಸಿದಂತ ಬೌಲರ್ ಆಗಿದ್ದಾರೆ.
7 / 8
ಸದ್ಯ ಲಕ್ನೋ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 28 ರಂದು ಆಡಲಿದೆ. ಇದು ಮಾರ್ಕ್ ವುಡ್ ಅವರ ಸೀಸನ್ನ ಕೊನೆಯ ಪಂದ್ಯವಾಗಿರಬಹುದು. ಈ ಪಂದ್ಯದ ನಂತರ ಲಕ್ನೋ ತಂಡ ಚೆನ್ನೈ, ಬೆಂಗಳೂರಿನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಇಲ್ಲಿ ವುಡ್ ಇಲ್ಲದಿದ್ದರೆ ರಾಹುಲ್ ತಂಡ ಸಂಕಷ್ಟಕ್ಕೆ ಸಿಲುಕಲಿದೆ.
8 / 8
ಅಲ್ಲದೆ ಲಕ್ನೋ ಪ್ಲೇಆಫ್‌ಗೆ ಪ್ರವೇಶಿಸಿದರೂ, ಮಾರ್ಕ್ ವುಡ್ ತಂಡಕ್ಕೆ ಮತ್ತೆ ಮರಳುವುದಿಲ್ಲ ಎಂಬ ಸುದ್ದಿ ತಂಡವನ್ನು ಚಿಂತೆಗೀಡು ಮಾಡಿದೆ. ಮಾರ್ಕ್ ವುಡ್ ಇಂಗ್ಲೆಂಡಿಗೆ ಹೋದರೆ ಮತ್ತೆ ಐಪಿಎಲ್ಗೆ ಮರಳುವುದು ಕಷ್ಟ ಎನಿಸುತ್ತಿದೆ. ಹೀಗಿರುವಾಗ ನಾಯಕ ಕೆಎಲ್ ರಾಹುಲ್, ವುಡ್ ಬದಲಿಯಾಗಿ ಅಂತಿಮ ತಂಡಕ್ಕೆ ಯಾರನ್ನು ಸೇರಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
Published On - 5:09 pm, Tue, 25 April 23