Updated on: May 28, 2023 | 5:02 PM
IPL 2023 Final CSK vs GT: ಐಪಿಎಲ್ ಸೀಸನ್ 16 ಗೆ ಇಂದು ತೆರೆ ಬೀಳಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಈಗ ಕುತೂಹಲ.
ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲ ಹೊಂದಿದೆ. ಇತ್ತ ಯುವ ನಾಯಕ ಹಾರ್ದಿಕ್ ಪಾಂಡ್ಯ ಇದ್ದರೆ, ಅತ್ತ ಅನುಭವಿ ಎಂಎಸ್ ಧೋನಿ ಇದ್ದಾರೆ. ಹಾಗೆಯೇ ಧೋನಿ ತಂಡಕ್ಕೆ ಮೂರು ಬಾರಿ ಸೋಲುಣಿಸಿ ಹೆಗ್ಗಳಿಕೆಗೂ ಪಾಂಡ್ಯ ಪಾತ್ರರಾಗಿದ್ದಾರೆ.
ಇದಾಗ್ಯೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಅನ್ನು 15 ರನ್ಗಳಿಂದ ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಈ ಕೌತುಕದ ವಿಷಯವಾಗಿದೆ.
ಇದರ ನಡುವೆ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದೆಂದು ತಿಳಿಸಿದ್ದಾರೆ ಮಾಜಿ ಕ್ರಿಕೆಟಿಗರಾದ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಇಂಗ್ಲೆಂಡ್ನ ಕೆವಿನ್ ಪೀಟರ್ಸನ್.
ಈ ಬಗ್ಗೆ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಮ್ಯಾಥ್ಯೂ ಹೇಡನ್, ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ 5ನೇ ಬಾರಿ ಕಪ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಕೆವಿನ್ ಪೀಟರ್ಸನ್, ಗುಜರಾತ್ ಟೈಟಾನ್ಸ್ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವುದು ನಿಶ್ಚಿತ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಪಡೆಯು ಅತ್ಯುತ್ತಮ ಸಮತೋಲನದಿಂದ ಕೂಡಿದ್ದು, ಹೀಗಾಗಿ ಸಿಎಸ್ಕೆ ತಂಡವನ್ನು ಮಣಿಸಿ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇವರಿಬ್ಬರಲ್ಲಿ ಯಾರ ಭವಿಷ್ಯ ನಿಜವಾಗಲಿದೆ ಕಾದು ನೋಡಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾಣ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ (ನಾಯಕ) , ಶುಭ್ಮನ್ ಗಿಲ್ , ದಸುನ್ ಶಾನಕ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ , ಯಶ್ ದಯಾಳ್ , ವಿಜಯ್ ಶಂಕರ್ , ಶಿವಂ ಭರತ್ , ಶಿವಂ ಭರತ್ ಕಿಶೋರ್ , ಅಭಿನವ್ ಮನೋಹರ್ , ಓಡಿಯನ್ ಸ್ಮಿತ್ , ಅಲ್ಜಾರಿ ಜೋಸೆಫ್ , ಮ್ಯಾಥ್ಯೂ ವೇಡ್ , ಜೋಶುವಾ ಲಿಟಲ್ ,ದರ್ಶನ್ ನಲ್ಕಂಡೆ , ಉರ್ವಿಲ್ ಪಟೇಲ್ , ಸಾಯಿ ಸುದರ್ಶನ್ , ಜಯಂತ್ ಯಾದವ್ , ಪ್ರದೀಪ್ ಸಾಂಗ್ವಾನ್.