IPL 2023: RCB ಪರ ಮೊಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್: 69 ಡಾಟ್​ ಬಾಲ್ಸ್..!

| Updated By: ಝಾಹಿರ್ ಯೂಸುಫ್

Updated on: Apr 18, 2023 | 8:29 PM

IPL 2023 Kannada: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ 4 ಓವರ್​ಗಳಲ್ಲಿ 44 ರನ್​ ನೀಡಿ 1 ವಿಕೆಟ್ ಪಡೆದಿದ್ದರು.

1 / 8
IPL 2023: ಐಪಿಎಲ್​ ಸೀಸನ್ 16 ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಆರ್​ಸಿಬಿ ತಂಡವು ಇದೀಗ ಸೋಲು-ಗೆಲುವುಗಳ ನಡುವೆ ಒದ್ದಾಡುತ್ತಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರೆ, 2ನೇ ಮತ್ತು 3ನೇ ಪಂದ್ಯದಲ್ಲಿ ಸೋಲನುವಿಸಿತ್ತು. ಇನ್ನು 4ನೇ ಪಂದ್ಯದಲ್ಲಿ ಗೆದ್ದರೆ, 5ನೇ ಪಂದ್ಯದಲ್ಲಿ ಸೋತಿದೆ. ಆದರೆ ಈ ಸೋಲು-ಗೆಲುವುಗಳ ನಡುವೆ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಪರಾಕ್ರಮ ಮೆರೆಯುತ್ತಿರುವುದೇ ವಿಶೇಷ.

2 / 8
ಹೌದು, ಆರ್​ಸಿಬಿ ಆಡಿರುವ 5 ಪಂದ್ಯಗಳಲ್ಲಿ 3 ರಲ್ಲಿ ಸೋತಿದೆ. ಈ ಸೋಲಿಗೆ ಪ್ರಮುಖ ಕಾರಣ ಆರ್​ಸಿಬಿ ಬೌಲರ್​ಗಳು ಎನ್ನಬಹುದು. ಆದರೆ ಈ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಸೇರಿಸಿಕೊಳ್ಳುವಂತಿಲ್ಲ. ಏಕೆಂದರೆ ಕಳೆದ 5 ಪಂದ್ಯಗಳಲ್ಲೂ ಸಿರಾಜ್ ಬೆಂಕಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

3 / 8
ಕಳೆದ 5 ಪಂದ್ಯಗಳಲ್ಲಿ ಒಟ್ಟು 120 ಎಸೆತಗಳನ್ನು ಎಸೆದಿರುವ ಮೊಹಮ್ಮದ್ ಸಿರಾಜ್ ಒಟ್ಟು 69 ಡಾಟ್ ಬಾಲ್ ಮಾಡಿದ್ದಾರೆ. ಅಂದರೆ 69 ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್​ಗಳ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ.

4 / 8
ಇನ್ನು ಸಿರಾಜ್ ಪವರ್​ಪ್ಲೇನಲ್ಲೂ ತಮ್ಮ ಪವರ್​ ತೋರಿಸಿದ್ದಾರೆ. ಈ ಬಾರಿ ಪವರ್​ಪ್ಲೇನಲ್ಲಿ ಒಟ್ಟು 72 ಎಸೆತಗಳನ್ನು ಎಸೆದಿರುವ ಸಿರಾಜ್ 51 ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ. ಅಂದರೆ 51 ಡಾಟ್ ಬಾಲ್​ಗಳು.

5 / 8
ಹಾಗೆಯೇ ಬ್ಯಾಟಿಂಗ್ ಪಿಚ್​ ಆಗಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಸಿರಾಜ್ ಪರಾಕ್ರಮ ಮೆರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಪವರ್​ಪ್ಲೇನಲ್ಲಿ 60 ಎಸೆತಗಳನ್ನು ಎಸೆದಿರುವ ಸಿರಾಜ್ 43 ಡಾಟ್ ಬಾಲ್ ಮಾಡಿದ್ದಾರೆ.

6 / 8
ಇದಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಇದುವರೆಗೆ ಸಿರಾಜ್ 7ರ ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಅದರಲ್ಲೂ ಚಿನ್ನಸ್ವಾಮಿ ಪಿಚ್​ನಲ್ಲಿ ನಡೆದ ಪಂದ್ಯಗಳಲ್ಲಿ ಕೇವಲ 6 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟು ಯಶಸ್ವಿ ವೇಗಿ ಎನಿಸಿಕೊಂಡಿದ್ದಾರೆ.

7 / 8
ಅಂದರೆ ಇಲ್ಲಿ ಒಟ್ಟಾರೆ ನೋಡುವುದಾದರೆ ಮೊಹಮ್ಮದ್ ಸಿರಾಜ್ ಕೇವಲ ಒಂದು ಬಾರಿ ಮಾತ್ರ ದುಬಾರಿಯಾಗಿದ್ದಾರೆ. ಅದು ಕೂಡ ಈಡನ್ ಗಾರ್ಡನ್ಸ್​ ಮೈದಾನದಲ್ಲಿ. ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸಿರಾಜ್ 4 ಓವರ್​ಗಳಲ್ಲಿ 21 ರನ್​ 1 ವಿಕೆಟ್ ಪಡೆದಿದ್ದರು. ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 22 ರನ್​ ನೀಡಿ 3 ವಿಕೆಟ್ ಕಬಳಿಸಿದ್ದರು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್​ ನೀಡಿ 2 ವಿಕೆಟ್ ಉರುಳಿಸಿದ್ದರು. ಸಿಎಸ್​ಕೆ ವಿರುದ್ಧ 4 ಓವರ್​ಗಳಲ್ಲಿ 30 ರನ್ ನೀಡಿ 1 ವಿಕೆಟ್ ಪಡೆದಿದ್ದರು.

8 / 8
ಇನ್ನು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ 4 ಓವರ್​ಗಳಲ್ಲಿ 44 ರನ್​ ನೀಡಿ 1 ವಿಕೆಟ್ ಪಡೆದಿದ್ದರು. ಈ ಒಂದು ಪಂದ್ಯವನ್ನು ಹೊರತುಪಡಿಸಿದರೆ, ಉಳಿದ 4 ಪಂದ್ಯಗಳಲ್ಲೂ ಮೊಹಮ್ಮದ್ ಸಿರಾಜ್ ಕಡೆಯಿಂದ ಅತ್ಯದ್ಭುತ ಪ್ರದರ್ಶನ ಮೂಡಿಬಂದಿದೆ. ಆದರೆ ಉಳಿದ ಬೌಲರ್​ಗಳೇ ಇದೀಗ ಆರ್​ಸಿಬಿ ತಂಡದ ದೊಡ್ಡ ಚಿಂತೆಯಾಗಿದೆ.